ಇನ್ನೊಂದು ವಾರದಲ್ಲಿ ಹೊಸ ವರುಷ 2020ರ ಕ್ರಿಕೆಟ್ ಜರ್ನಿ ಶುರುವಾಗಲಿದೆ. 2019ರ ಕ್ರಿಕೆಟ್ ಇತಿಹಾಸದಲ್ಲಿ ಕಿಂಗ್ ಆಗಿ ಮೆರೆದಿದ್ದು ಯಾರು ಗೊತ್ತಾ! ಗಳಿಸಿದ ರನ್, ಸಿಡಿಸಿದ ಸಿಕ್ಸರ್ ಬೌಂಡರಿಗಳೆಷ್ಟು ಗೊತ್ತಾ!? ಆ ಮಾಹಿತಿ ಇಲ್ಲಿದೆ ನೋಡಿ. 
 
2019ರಲ್ಲಿಯ ವಿಶ್ವ ಕ್ರಿಕೆಟ್ ಸಾಮ್ರಾಟ ಎಂದರೆ ಅದು, ಚೇಸಿಂಗ್ ಕಿಂಗ್ ವಿರಾಟ್ ಕೊಹ್ಲಿ. ಹೌದು, ಆಧುನಿಕ ವಿಶ್ವ ಕ್ರಿಕೆಟ್​​ನ ರನ್​​ ಮಷಿನ್ ವಿರಾಟ್​ ಕೊಹ್ಲಿ, ಸದ್ಯ ಎಲ್ಲಾ ಫಾರ್ಮೆಟ್​​ನಲ್ಲೂ ರನ್ ಶಿಖರ ಕಟ್ಟುತ್ತಿರೋ ಏಕಮಾತ್ರ ಆಟಗಾರ ಅನ್ನೋದ್ರಲ್ಲಿ ಎರಡು ಮಾತಿಲ್ಲ.. ಹೀಗಾಗಿಯೇ ವಿಶ್ವ ಕ್ರಿಕೆಟ್​​ನಲ್ಲಿ ಕೊಹ್ಲಿಯನ್ನ ಕಿಂಗ್ ಅಂತ ಕರೆಯಲಾಗುತ್ತೆ.. ಇನ್ನು 2016ರಿಂದ ಸತತ ನಾಲ್ಕನೇ ಬಾರಿಗೆ ಐಸಿಸಿ ಕ್ಯಾಲೆಂಡರ್ ವರ್ಷದಲ್ಲಿ ವಿರಾಟ್​ ಕೊಹ್ಲಿಯೇ ಕಿಂಗ್ ಆಗಿ ಹೊರಹೊಮ್ಮಿದ್ದಾರೆ. ಈ ಮೂಲಕ ವಿಶ್ವದ ಯಾವುದೇ ಆಟಗಾರ ಮಾಡದಂತ ಸಾಧನೆಯನ್ನ ವಿರಾಟ್​ ಕೊಹ್ಲಿ ಮಾಡಿ, ದಾಖಲೆ ನಿರ್ಮಿಸಿದ್ದಾರೆ. 
 
ಐಸಿಸಿಯ ಕ್ಯಾಲೆಂಡರ್ ವರ್ಷದಲ್ಲಿ 2016, 2017 ಮತ್ತು 2018 ಸತತ ಮೂರು ವರ್ಷ ಅತ್ಯಧಿಕ ರನ್​ ಗಳಿಸಿದ ಆಟಗಾರನಾಗಿ ಹೊರ ಹೊಮ್ಮಿದ್ದ ವಿರಾಟ್​. 2019ರಲ್ಲೂ ವಿಶ್ವ ಕ್ರಿಕೆಟ್​​ನ ಕಿಂಗ್ ಎನಿಸಿಕೊಂಡಿದ್ದಾರೆ. ರೋಹಿತ್ ಶರ್ಮಾ, ಕೊಹ್ಲಿಗಿಂತ ಮುಂದಿದ್ರು. ಆದ್ರೆ ಅಂತಿಮ ಪಂದ್ಯದಲ್ಲಿ 85 ರನ್​ಗಳಿಸಿದ ವಿರಾಟ್, ರೋಹಿತ್ ಶರ್ಮಾರನ್ನ ಕೇವಲ 13 ರನ್​​ಗಳಿಂದ ಹಿಂದಿಕ್ಕಿ ಕಿಂಗ್ ಆಗಿ ಹೊರ ಹೊಮ್ಮಿದ್ದಾರೆ.
 
ಹಾಲಿ ಕ್ಯಾಲೆಂಡರ್ ವರ್ಷದಲ್ಲಿ ಟೆಸ್ಟ್, ಏಕದಿನ ಮತ್ತು ಟಿ20 ಸೇರಿದಂತೆ ಮೂರು ಫಾರ್ಮೆಟ್​ನಲ್ಲೂ 44ಪಂದ್ಯಗಳನ್ನಾಡಿರುವ ವಿರಾಟ್ ಕೊಹ್ಲಿ 2,455ರನ್​ ಗಳಿಸಿ, ಅತ್ಯಧಿಕ ರನ್​ ಗಳಿಸಿದ ಬ್ಯಾಟ್ಸ್​ಮನ್ ಆಗಿ ಹೊರ ಹೊಮ್ಮಿದ್ದಾರೆ.ರೋಹಿತ್ ಶರ್ಮಾ ಈ ಬಾರಿಯ ಕ್ಯಾಲೆಂಡರ್ ವರ್ಷದಲ್ಲಿ ಮೂರು ಫಾರ್ಮೆಟ್​ನಲ್ಲಿ 47 ಪಂದ್ಯಗಳನ್ನಾಡಿದ್ದು 2442 ರನ್​ಗಳಿಸಿ ಕೊಹ್ಲಿ ನಂತರದ ಸ್ಥಾನದಲ್ಲಿದ್ದಾರೆ. ವಿರಾಟ್​ ಕೊಹ್ಲಿ ಏಕದಿನ ಕ್ರಿಕೆಟ್​​ನಲ್ಲಿ 42ಶತಕ, 52 ಅರ್ಧಶತಕ, 1038ಬೌಂಡರಿ ಬಾರಿಸಿದ್ದಾರೆ. 35ಬಾರಿ ಮ್ಯಾನ್​ ಆಫ್​ ಮ್ಯಾಚ್​ ಹಾಗೂ 7ಬಾರಿ ಮ್ಯಾನ್ ಆಫ್​ ದಿ ಸಿರೀಸ್​ ಗೌರವಕ್ಕೆ ಪಾತ್ರರಾಗಿ ದಾಖಲೆ ಬರೆದಿರುವುದು ನಿಜಕ್ಕೂ ಅಭಿಮಾನಿಗಳಿಗೆ ಸಂತಸದ ವಿಷಯವಾಗಿದೆ.
 

మరింత సమాచారం తెలుసుకోండి: