ಲಂಡನ್: ಕ್ರಿಕೆಟ್ ಇತಿಹಾಸದಲ್ಲಿಯೇ ವಿಶೇಷ ಹಾಗೂ ವಿಚಿತ್ರವಾದ ಹೇಳಿಕೆಯೊಂದು ಕೇಳಿ ಬಂದಿದೆ. ಅದು ಐಸಿಸಿ ಟೆಸ್ಟ್ ರಾಂಕಿಂಗ್ ಕಸಕ್ಕೆ ಸಮಾನ ಎಂಬುದು. ಹೌದು, ಇದನ್ನು ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಹೇಳಿದ್ದು, ಯಾರು, ಏನು ಎಂಬ ಮಾಹಿತಿ ಇಲ್ಲಿದೆ ನೋಡಿ. 
 
ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿಯು ಪ್ರಕಟಿಸಿರುವ ನೂತನ ಟೆಸ್ಟ್‌ ರ‍್ಯಾಂಕಿಂಗ್‌ ಪಟ್ಟಿಯ ವಿರುದ್ಧ ಇಂಗ್ಲೆಂಡ್‌ ತಂಡದ ಮಾಜಿ ನಾಯಕ ಮೈಕಲ್‌ ವಾನ್‌ ಅಸಮಾಧಾನ ವ್ಯಕ್ತಪಡಿಸಿ ದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್‌ ಮತ್ತು ನ್ಯೂಜಿಲೆಂಡ್‌  ತಂಡಗಳ ಪ್ರದರ್ಶನ ಹೇಳಿಕೊಳ್ಳುವ ಮಟ್ಟದ್ದಾಗಿರದೇ ಇದ್ದರೂ ಕೂಡ ಕ್ರಮವಾಗಿ 2ನೇ ಮತ್ತು ನಾಲ್ಕನೇ ಸ್ಥಾನ ಪಡೆದಿರುವುದಾದರೂ ಹೇಗೆ? ಎಂದು ಐಸಿಸಿ ಟೆಸ್ಟ್‌ ರ‍್ಯಾಂಕಿಂಗ್‌ ವ್ಯವಸ್ಥೆಯನ್ನು ವಾನ್‌ ಪ್ರಶ್ನಿಸಿದ್ದಾರೆ.
 
"ಐಸಿಸಿ ಟೆಸ್ಟ್‌ ರ‍್ಯಾಂಕಿಂಗ್‌ ವಿರುದ್ಧ ಅಸಮಾಧಾನವಿದೆ. ನನ್ನ ಪ್ರಕಾರ ಟೆಸ್ಟ್‌ ರ‍್ಯಾಂಕಿಂಗ್‌ ನಿಜಕ್ಕೂ ಕಸಕ್ಕೆ ಸಮಾನ. ಕಳದ ಎರಡು ವರ್ಷ ಗಳಲ್ಲಿ ನ್ಯೂಜಿಲೆಂಡ್‌ ತಂಡ ಹಲವು ಸರಣಿಗಳನ್ನು ಗೆದ್ದು ಎರಡನೇ ಸ್ಥಾನದಲ್ಲಿದೆ. ಆದರೆ, ಟೆಸ್ಟ್‌ನಲ್ಲಿ ಕಳೆದೆರಡು ವರ್ಷಗಳಲ್ಲಿ ಕಳಾಹೀನ ಪ್ರದರ್ಶನ ನೀಡಿರುವ ಇಂಗ್ಲೆಂಡ್‌ 3 ನೇ ಮತ್ತು ನಾಲ್ಕನೇ ಸ್ಥಾನದಲ್ಲೇ ಉಳಿದಿರು ವುದು ನಿಜಕ್ಕೂ ಅರ್ಥಹೀನ," ಎಂದು ವಾನ್‌ ತಮ್ಮ ಅಸಮಾಧಾನ ವನ್ನು ಇದೀಗ ಹೊರ ಹಾಕಿದ್ದಾರೆ.
 
"ಇಂಗ್ಲೆಂಡ್‌ ತವರಿನಲ್ಲಿ ಕೆಲ ಸರಣಿಗಳನ್ನು ಗೆದ್ದಿದೆ. ಆದರೆ, ಆ್ಯಷಸ್‌ ಸರಣಿಯಲ್ಲಿ ಡ್ರಾ ಫಲಿತಾಂಶಕ್ಕೆ ತೃಪ್ತಿಪಟ್ಟಿದೆ. ಕೇವಲ ಐರ್ಲೆಂಡ್‌ ವಿರುದ್ಧ ಮಾತ್ರವೇ ಗೆದ್ದಿದೆ. ರ‍್ಯಾಂಕಿಂಗ್‌ ವ್ಯವಸ್ಥೆ ನಿಜಕ್ಕೂ ಗೊಂದಲ ಸೃಷ್ಠಿಸುವಂಥದ್ದಾಗಿದೆ. ನನ್ನ ಪ್ರಕಾರ ನ್ಯೂಜಿಲೆಂಡ್‌ ತಂಡಕ್ಕಿಂತಲೂ ಆಸ್ಟ್ರೇಲಿಯಾ ತಂಡ ಟೆಸ್ಟ್‌ ನಲ್ಲಿ ಅತ್ಯುತ್ತಮ ತಂಡವಾಗಿದೆ," ಎಂದು ವಾನ್‌ ಹೇಳಿದ್ದಾರೆ. ಆಸ್ಟ್ರೇಲಿಯಾ ತಂಡ ಟೆಸ್ಟ್‌ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಸದ್ಯ 5ನೇ ಸ್ಥಾನದಲ್ಲಿದೆ. ಇದು ಟೆಸ್ಟ್‌ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ಆಸೀಸ್‌ ತಂಡಕ್ಕೆ ಕೊಟ್ಟ ಗೌರವ ಖಂಡಿತಾ ಅಲ್ಲ ಎಂಬುದು ವಾನ್‌ ಅಭಿಮತ ವಾಗಿದ್ದು, ಇದೀಗ ಎಲ್ಲೆಡೆ ಚರ್ಚೆಗೆ ಕಾರಣವಾಗಿದೆ.
 
 
 

మరింత సమాచారం తెలుసుకోండి: