ಕೊಲಂಬೊ: ಟೀಂ ಇಂಡಿಯಾ ವಿರುದ್ಧದ 3 ಪಂದ್ಯಗಳ ಟಿ20 ಸರಣಿಗೆ 16 ಸದಸ್ಯರ ಶ್ರೀಲಂಕಾ ತಂಡವನ್ನು ಪ್ರಕಟಿಸ ಲಾಗಿದ್ದು, ಹಿರಿಯ ಆಲ್‌ರೌಂಡರ್‌ ಏಂಜೆಲೊ ಮ್ಯಾಥ್ಯೂಸ್‌ 16 ತಿಂಗಳ ಬಳಿಕ ತಂಡಕ್ಕೆ ವಾಪಸಾಗಿದ್ದಾರೆ. ಆದರೆ ಮ್ಯಾಥ್ಯೂಸ್ ವಾಪಾಸ್ಸಿನ  ಹಿಂದಿರುವ ಅಸಲೀ ಲೆಕ್ಸಾಚಾರಗಳೇ ಬೇರೆ ಇವೆ. ಹೌದು, ಇದಕ್ಕೆ ಅಸಲೀ ಕಾರಣ ಏನು ಎಂಬ ಮಾಹಿತಿ ನಿಮಗಾಗಿ. 
 
ಮ್ಯಾಥ್ಯೂಸ್ ವಾಪಾಸ್ಸಾದರೂ, ಆದರೆ ವೇಗಿ ನುವಾನ್‌ ಪ್ರದೀಪ್‌ ಅಭ್ಯಾಸದ ವೇಳೆ ಗಾಯಾಳಾಗಿದ್ದು, ಭಾರತ ಪ್ರವಾಸವನ್ನು ತಪ್ಪಿಸಿಕೊಳ್ಳಲಿದ್ದಾರೆ. ಇವರ ಸ್ಥಾನ ಕಸುನ್‌ ರಜಿತ ಪಾಲಾಗಿದೆ. ಲಸಿತ ಮಾಲಿಂಗ ನಾಯಕತ್ವದ ಶ್ರೀಲಂಕಾ ತಂಡ ಗುರುವಾರ ಭಾರತಕ್ಕೆ ಆಗಮಿಸಲಿದ್ದು, ರವಿವಾರ ಗುವಾಹಟಿಯಲ್ಲಿ ಮೊದಲ ಪಂದ್ಯ ಆಡಲಿದೆ. ಉಳಿದೆರಡು ಪಂದ್ಯಗಳು ಇಂದೋರ್‌ (ಜ. 7) ಮತ್ತು ಪುಣೆಯಲ್ಲಿ (ಜ. 10) ನಡೆಯಲಿವೆ.
 
ಮ್ಯಾಥ್ಯೂಸ್ ವಾಪಾಸ್ಸಿನ ಹಿಂದಿರುವ ಗುಟ್ಟೇನು ಗೊತ್ತಾ! ಮ್ಯಾಥ್ಯೂಸ್ ಶ್ರೀಲಂಕಾದ ಹಿರಿಯ ಆಟಗಾರ. ಹೌದು, ಕಳೆದ ಒಂದೂವರೆ ವರ್ಷದಿಂದ ಶ್ರೀಲಂಕಾ ಟಿ20 ತಂಡದಿಂದ ಹೊರಗಿದ್ದು, ಇದೀಗ ಟೀಂ ಇಂಡಿಯಾ ವಿರುದ್ಧ ಏಕಾಏಕಿ ಸೆಲೆಕ್ಟ್ ಆಗಿದ್ದಾರೆ ಏಕೆಂದರೆ ಟೀಂ ಇಂಡಿಯಾದ ಕೆಲವು ಸೀಕ್ರೆಟ್ ಗಳು ಮ್ಯಾಥ್ಯೂಸ್ ಗೆ ತಿಳಿದಿತ್ತು, ಇದೀಗ ಟೀಂ ಇಂಡಿಯಾ ತಂಡವನ್ನು ಮಣಿಸಲು ಪ್ಲಾನ್ ಮಾಡಿದ್ದಾರೆ ಎಂಬುದು ಇದೇ ಅಂಶ ವನ್ನಿಟ್ಟುಕೊಂಡು ಸೆಲೆಕ್ಟ್ ಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಅದರ ಜೊತೆಗೆ ಅನುಭವಿ ಬೌಲರ್ ಲಸಿತ್ ಮಾಲಿಂಗ ಅವರನ್ನು ನಾಯಕ ರನ್ನಾಗಿ ಮಾಡಿರುವುದು ಅದಕ್ಕೆ. ಟೀಂ ಇಂಡಿಯಾ ವಿರುದ್ದ ಅನೇಕ ಪಂದ್ಯಗಳಾಡಿದ್ದಾರೆ, ಐಪಿಎಲ್ ನಲ್ಲಿ ಮುಂಬೈ ತಂಡದಲ್ಲಿ ಆಡಿ ಟ್ರೋಪಿಯನ್ನೇ ಗೆಲ್ಲಿಸಿ ಕೊಟ್ಟ ಅನುಭವವಿದೆ. 
 
ಲಂಕಾ ತಂಡ: ಲಸಿತ ಮಾಲಿಂಗ (ನಾಯಕ), ಧನುಷ್ಕ ಗುಣತಿಲಕ, ಆವಿಷ್ಕ ಫೆರ್ನಾಂಡೊ, ಏಂಜೆಲೊ ಮ್ಯಾಥ್ಯೂಸ್‌, ದಸುನ್‌ ಶಣಕ, ಕುಸಲ್‌ ಪೆರೆರ, ನಿರೋಷನ್‌ ಡಿಕ್ವೆಲ್ಲ, ಧನಂಜಯ ಡಿ ಸಿಲ್ವ, ಇಸುರು ಉದಾನ, ಭನುಕ ರಾಜಪಕ್ಸ, ಒಶಾದ ಫೆರ್ನಾಂಡೊ, ವನಿಂದು ಹಸರಂಗ, ಕಸುನ್‌ ರಜಿತ, ಲಹಿರು ಕುಮಾರ, ಕುಸಲ್‌ ಮೆಂಡಿಸ್‌, ಲಕ್ಷಣ ಸಂದಕನ್‌

మరింత సమాచారం తెలుసుకోండి: