ನವದೆಹಲಿ: ವಿದೇಶಿ ಪ್ರವಾಸಕ್ಕೆ ಪತ್ನಿ ಅಥವಾ ಗೆಳತಿಯೊಂದಿಗೆ ಹೋಗಲು ಆಟಗಾರರು ಇಷ್ಟಪಡುತ್ತಾರೆ. ಆಟದೊಂದಿಗೆ  ಮುದ್ದಿನ ಮಡದಿಯೊಂದಿಗೆ ಪ್ರಮುಖ ನಗರ, ಪ್ರವಾಸಿ ತಾಣಗಳನ್ನು ಸಹ ನೋಡಬಹುದು ಎಂದು ಅವರ ಅಭಿಮತವಾಗಿದ್ದು, ಇದೀಗ ಇದಕ್ಕೆ ಬಿಸಿಸಿಐ ಅಸ್ತು ಎನ್ನುವ ಮುನ್ಸೂಚನೆಗಳು ಸಿಕ್ಕಿವೆ. 
 
ಮಾಜಿ ಸಿಎಜಿ ವಿನೋದ್ ರೈ ನೇತೃತ್ವದ ಆಡಳಿತ ಸಮಿತಿಯು ಕಳೆದ ವರ್ಷ ಮೇ ತಿಂಗಳಲ್ಲಿ ಈ ವಿಶೇಷ ಅವಕಾಶವನ್ನು ಟೀಂ ಇಂಡಿಯಾ ನಾಯಕ ಮತ್ತು ತರಬೇತುದಾರರಿಗೆ ನೀಡಿತ್ತು. ಆದರೆ ಈಗ ಸೌರವ್ ಗಂಗೂಲಿ ನೇತೃತ್ವದ ಬಿಸಿಸಿಐ ಹೊಸ ಬದಲಾವಣೆ ತಂದಿದೆ. ಇತ್ತ 2019ರ ವಿಶ್ವಕಪ್ ಸಮಯದಲ್ಲಿ ಕೆಲವು ಆಟಗಾರರು ಪತ್ನಿ, ಗೆಳತಿಯರನ್ನು ನಿಗದಿತ ಅವಧಿಗಿಂತ ಹೆಚ್ಚು ಕಾಲ ಒಟ್ಟಿಗೆ ಇಟ್ಟುಕೊಂಡಿದ್ದರು ಎಂಬುದು ತಿಳಿದುಬಂದಿದೆ.
 
ಈ ವಿಚಾರದಲ್ಲಿ ಸಿಒಎ ತನ್ನ ನಿರ್ಧಾರವನ್ನು ಬದಲಾಯಿಸಿದೆ. ಮಂಡಳಿಯ ಅಧಿಕಾರಿಯೊಬ್ಬರು, ಪತ್ನಿ ಅಥವಾ ಗೆಳತಿಯನ್ನು ಪ್ರವಾಸಕ್ಕೆ ಕರೆದೊಯ್ಯಬಹುದು ಎಂದು ಬಿಸಿಸಿಐ ನಿರ್ಧಾರ ತೆಗೆದುಕೊಳ್ಳಲು ಮುಂದಾಗಿದೆ. ಇದು ತುಂಬಾ ದೊಡ್ಡ ವಿಷಯವಲ್ಲ. ಆದರೆ ಇದನ್ನು ಪರಿಹರಿಸಲು ಅತ್ಯುತ್ತಮ ಮಾರ್ಗ ಬೇಕಿದೆ ಎಂದು ಹೇಳಿದ್ದಾರೆ ಅಂತ ವರದಿಯಾಗಿದೆ. ಈ ವಿಷಯದಲ್ಲಿ ಸಿಒಎ 2019ರ ಮೇ 21ರಂದು ಮಹತ್ವದ ನಿರ್ಧಾರ ತೆಗೆದುಕೊಂಡಿತ್ತು. ಈ ಮೂಲಕ ಕ್ಯಾಪ್ಟನ್ ಮತ್ತು ತರಬೇತುದಾರನಿಗೆ ಪತ್ನಿ ಅಥವಾ ಗೆಳತಿಯನ್ನು ಕರೆದೊಯ್ಯಲು ಅಧಿಕಾರ ನೀಡಲಾಗಿತ್ತು. ಆದರೆ ಸಮಿತಿಯ ಈ ನಿರ್ಧಾರದಿಂದ ಅನೇಕ ಆಟಗಾರರು ಅಸಮಾಧಾನ ಹೊರ ಹಾಕಿದ್ದರು. 
 
ಅಷ್ಟೇ ಅಲ್ಲದೆ ವಿಶ್ವಕಪ್ ಸಮಯದಲ್ಲಿ ಹಿರಿಯ ಆಟಗಾರರು ನಿಗದಿತ ಸಮಯಕ್ಕಿಂತ ಹೆಚ್ಚಿನ ಸಮಯ ಕುಟುಂಬವನ್ನು ತಮ್ಮೊಟ್ಟಿಗೆ ಉಳಿಸಿಕೊಂಡಿದ್ದರು ಆರೋಪವಿತ್ತು ಇದರಿಂದ ಮಂಡಳಿಯ ಅಧಿಕಾರಿಗಳು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಉತ್ತಮ ಎಂದು ಡಯಾನಾ ಆಗ ಹೇಳಿದ್ದರು. ಆಡಳಿತಾತ್ಮಕ ಕಾರ್ಯಗಳಿಗಿಂತ ನಾಯಕ ಮತ್ತು ತರಬೇತುದಾರನ ಗಮನವು ಆಟದ ಮೇಲೆ ಇರಬೇಕು ಎಂದು ಇಡುಲ್ಜಿ ಹೇಳಿದ್ದಾರೆ. ಟೀಂ ಇಂಡಿಯಾ ಈ ತಿಂಗಳ ಕೊನೆಯಲ್ಲಿ ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲಿದೆ. ಪ್ರವಾಸದ ಎರಡನೇ ಭಾಗದಲ್ಲಿ ಎರಡು ಅಥವಾ ಮೂರು ವಾರಗಳವರೆಗೆ ಆಟಗಾಗರರು ಕುಟುಂಬವನ್ನು ತಮ್ಮೊಟ್ಟಿಗೆ ಇರಿಸಲು ಅವಕಾಶ ಸಿಗಲಿದೆ.

మరింత సమాచారం తెలుసుకోండి: