ಗುವಾಹಟಿ: 2020ರ ಹೊಸ ವರ್ಷದಲ್ಲಿ ಟೀಮ್‌ ಇಂಡಿಯಾದ ಮೊದಲ ಪಂದ್ಯದೇ ಭಾರೀ ನಿರೀಕ್ಷೆ ಹುಟ್ಟಿಸಿತ್ತು. ಆದರೆ ಆಟ ನೋಡುವ ಭಾಗ್ಯ ವೀಕ್ಷಕರಿಗೆ ಕೊನೆಗೂ ಸಿಗದಂತಾಯಿತು. ಕಾರಣ ಮಳೆ. ಕೊನೆಗೆ ಇಸ್ತ್ರಿ ಪೆಟ್ಟಿಗೆಯಿಂದ ಒಣಗಿಸಿದರೂ  ಸಹ ಪಿಚ್ ರೆಡಿಯಾಗದೇ ಇದ್ದಿದ್ದು ಹಾಸ್ಯಾಸ್ಪದ ವಾಗಿತ್ತು. 
 
ಭಾರತ ಶ್ರೀಲಂಕಾ ಪಂದ್ಯಗಳ ಸರಣಿಯ ಮೊದಲ ಟಿ20ಯಲ್ಲಿ ಟಾಸ್‌ ಗೆದ್ದ ಭಾರತ ತಂಡ ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡಿತು. ಆದರೆ, ಟಾಸ್‌ ನಂತರ ಮಳೆರಾಯನ ಆಟ ಶುರುವಾಗಿ, ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಪ್ರೇಕ್ಷಕರ ಪಂದ್ಯವೀಕ್ಷಣೆಯ ಆಸೆಗೆ ತಣ್ಣೀರೆರಚಿತು. ಹೌದು, ಇದರೊಂದಿಗೆ ಭಾರತ ಈ ವರ್ಷ ಆಡಲಿರುವ ಮೊದಲ ಪಂದ್ಯ ಇಂದೋರ್‌ನ ಹೋಳ್ಕರ್‌ ಕ್ರೀಡಾಂಗಣಕ್ಕೆ ವರ್ಗಾವಣೆಯಾಗಿದೆ. ಮೊದಲ ಹಣಾಹಣಿ ಮಳೆಯಿಂದಾಗಿ ರದ್ದಾದ ಪರಿಣಾಮ ಜನವರಿ 7ರಂದು ನಡೆಯಲಿರುವ 2ನೇ ಪಂದ್ಯದಲ್ಲಿ ಗೆಲ್ಲಲು ಇತ್ತಂಡಗಳು ರಣತಂತ್ರ ರೂಪಿಸುವಲ್ಲಿ ಕಾರ್ಯನಿರತವಾಗಿದೆ.
 
ಗುವಾಹಟಿಯಲ್ಲಿ ಭಾರತ ಮತ್ತು ಶ್ರೀಲಂಕಾ  ನಡುವಣ ಪಂದ್ಯಕ್ಕೂ ಮುನ್ನ ವರುಣ ಅಬ್ಬರಿಸಿ ತಣ್ಣಗಾದರೂ, ಪಂದ್ಯ ನಡೆಸಲು ಸಾಧ್ಯವಾಗಲಿಲ್ಲ. ಆಟ ಶುರು ಮಾಡಲು ಔಟ್‌ಫೀಲ್ಡ್‌ ಅದ್ಭುತವಾಗಿತ್ತಾದರೂ, ಕೈಕೊಟ್ಟಿದ್ದು ಒದ್ದೆಯಾದ ಪಿಚ್‌. ಇದ್ದಕ್ಕಿದ್ದಂತೆ ಧಾರಾಕಾರ ಮಳೆ ಸುರಿದ ಕಾರಣ ಪ್ಲಾಸ್ಟಿಕ್‌ ಬಳಸಿ ಪಿಚ್‌ ಮುಚ್ಚುವ ಹೊತ್ತಿಗಾಗಲೇ ತಡವಾಗಿತ್ತು.
 
ಪಿಚ್‌ನ ಸುತ್ತ ಮುತ್ತಲೂ ಹೊದಿಕೆ ಹೊದಿಸಲಾಗಿತ್ತಾದರೂ, ನೀರಿನ ಸೋರಿಕೆಯಾಗಿ ಪಿಚ್‌ನ ಅದರಲ್ಲೂ ಬೌಲಿಂಗ್‌ ಏರಿಯಾದ ಕೆಲ ಭಾಗಗಳಲ್ಲಿ ತೇವಾಂಶ ಹೆಚ್ಚಿತ್ತು. ಇದನ್ನು ಒಣಗಿಸಲು ಹರಸಾಹಸ ಪಡಬೇಕಾಯಿತು. ನಾನ ಪ್ರಯತ್ನಪಟ್ಟರು. ಕ್ರೀಡಾಂಗಣದ ಸಿಬ್ಬಂದಿ ಹೇರ್‌ ಡ್ರೈಯರ್‌, ವ್ಯಾಕ್ಸೂಮ್‌ ಕ್ಲೀನರ್‌ ಕೊನೆಗೆ ಐರನ್‌ ಬಾಕ್ಸ್‌ ಬಳಸಿ ಪಿಚ್‌ಗೆ ಇಸ್ತ್ರಿ ಮಾಡಿದರೂ ಆಟ ಆರಂಭಕ್ಕೆ ಬೇಕಾದ ಹದ ತರಲು ಸಾಧ್ಯವಾಗಲೇ ಇಲ್ಲ.
 
ಅದರಲ್ಲೂ ಐರನ್‌ ಬಾಕ್ಸ್‌ ಬಳಸಿ ಪಿಚ್‌ ಒಣಗಿಸುತ್ತಿದ್ದ ದೃಷ್ಯ ಹಾಸ್ಯಾಸ್ಪದವಾಗಿತ್ತು. ಏನೇ ಆದರೂ ಪ್ರೇಕ್ಷಕರಿಗೆ ಕನಿಷ್ಠ 5ಓವರ್‌ಗಳ ಪಂದ್ಯವನ್ನಾದರೂ ನೀಡಲು ರಾತ್ರಿ 9.45ರವರೆಗೆ ಕಾಯಲಾಯಿತು. ಆದರೆ, ಪಿಚ್‌ನ ಸ್ಥಿತಿಯಲ್ಲಿ ಅಂತಹ ಹೇಳಿಕೊಳ್ಳುವ ಸುಧಾರಣೆಯಾಗದ ಕಾರಣ ಪಂದ್ಯದ ಅಧಿಕಾರಿಗಳು ಮತ್ತು ಆನ್‌ಫೀಲ್ಡ್‌ ಅಂಪೈರ್ಸ್‌ ಪಂದ್ಯವನ್ನು ರದ್ದು ಪಡಿಸಿ ತೀರ್ಮಾನ ತಿಳಿಸಿದರು. 
 
 
 

మరింత సమాచారం తెలుసుకోండి: