ಬೆಂಗಳೂರು: ಕರ್ನಾಟಕ ಕ್ರಿಕೆಟ್‌ ತಂಡದ ಹಂಗಾಮಿ ನಾಯಕ ಕರುಣ್‌ ನಾಯರ್‌ ತಮ್ಮ ಜೀವನದ ಎರಡನೇ ಇನ್ನಿಂಗ್ಸ್ ಆರಂಭಿಸಲು ಸಜ್ಜಾಗಿದ್ದಾರೆ. ಹೌದು, ಏನಿದು ಎರಡನೇ ಇನ್ನಿಂಗ್ಸ್, ಯಾವ ಟೆಸ್ಟ್ ಪಂದ್ಯ ಎಂದು ಗೊಂದಲ ಆಗಬೇಡಿ. ಏಕೆಂದರೆ ಕರುಣ್ ನಾಯರ್ ಎರಡನೇ ಇನ್ನಿಂಗ್ಸ್ ಪ್ರಾರಂಭಿಸುತ್ತಿದ್ದಾರೆ ಎಂದರೆ ಅದು ಅವರ ಜೀವನದಲ್ಲಿ ಸದ್ಯದಲ್ಲೇ ವಿವಾಹವಾಗಲಿದ್ದಾರೆ. ಹೌದು, ಆದ್ದರಿಂದ ಸೌರಾಷ್ಟ್ರ ವಿರುದ್ಧ ಜ.11 ರಿಂದ ಆರಂಭವಾಗುವ ರಣಜಿ ಪಂದ್ಯಕ್ಕೆ ಅವರು ಲಭ್ಯರಿರುವುದಿಲ್ಲ. ಅವರ ಬದಲಿಗೆ ಶ್ರೇಯಸ್‌ ಗೋಪಾಲ್‌ ತಂಡವನ್ನು ಮುನ್ನಡೆಸಲಿದ್ದಾರೆ. 
 
ಪ್ರಸ್ತುತ ಕರ್ನಾಟಕ ರಾಜ್ಯ ತಂಡದಿಂದ ಅಭಿಷೇಕ್‌ ರೆಡ್ಡಿಯನ್ನು ಕೈಬಿಡಲಾಗಿದೆ. ದೈಹಿಕ ಸಕ್ಷಮತೆ ಸಾಧಿಸಿರುವ ಕೆ.ವಿ ಸಿದ್ಧಾರ್ಥ್, ಪವನ್‌ ದೇಶಪಾಂಡೆ ತಂಡಕ್ಕೆ ಮರಳಿದ್ದಾರೆ. ಕರುಣ್‌ ನಾಯರ್‌ತಮ್ಮ ದೀರ್ಘ‌ಕಾಲದ ಗೆಳತಿ ಸನಯ ಟಕರಿವಾಲಾರನ್ನು ವರಿಸಲಿದ್ದಾರೆ. ಇಬ್ಬರ ನಡುವೆ ಕಳೆದ ವರ್ಷ ಜುಲೈನಲ್ಲಿ ನಿಶ್ಚಿತಾರ್ಥವಾಗಿತ್ತು. ಈಗ ಇಬ್ಬರೂ ಮದುವೆಗೆ ದಿನಾಂಕ ನಿಗದಿಯಾಗಿದೆ. ನಿರ್ದಿಷ್ಟವಾಗಿ ಯಾವಾಗ ದಿನ ವಿವಾಹವಾಗುತ್ತದೆ ಎನ್ನುವುದು ಇನ್ನೂ ತಿಳಿದು ಬಂದಿಲ್ಲ. ಆದರೆ ಎರಡನೇ ಇನ್ನಿಂಗ್ಸ್ ನ ಆಟ ಮಾತ್ರ ಖಚಿತವಾದ ಮಾಹಿತಿ ಎಂದು ತಿಳಿದು ಬಂದಿದೆ. ಖಾಯಂ ನಾಯಕ ಮನೀಷ್‌ ಪಾಂಡೆ ಭಾರತ ತಂಡದ ಪರ ಸೀಮಿತ ಓವರ್‌ಗಳ ಪಂದ್ಯದಲ್ಲಿ ಆಡುತ್ತಿರುವುದರಿಂದ ಲಭ್ಯರಿರುವುದಿಲ್ಲ. ಕೆ.ಎಲ್‌. ರಾಹುಲ್‌ ಮತ್ತೆ ರಾಷ್ಟ್ರೀಯ ತಂಡದಲ್ಲಿ ತಮ್ಮ ಸ್ಥಾನವನ್ನು ಗಟ್ಟಿ ಮಾಡಿಕೊಂಡಿದ್ದಾರೆ. ಅವರ ಸೇವೆಯೂ ಲಭ್ಯವಾಗುವುದಿಲ್ಲ. ಟೀಂ ಇಂಡಿಯಾದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿ ಮಿಂಚಿದ್ದ ಕರುಣ್ ನಾಯರ್ ಕೆಲವೊಮ್ಮೆ ವಿಫಲವೂ ಆಗಿದ್ದು, ಸ್ಥಿರ ಸ್ಥಾನ ಸಂಪಾದಿಸಲು ಈಗಲೂ ಸಹ ಹೋರಾಡುತ್ತಿದ್ದಾರೆ. 
 
ಪ್ರಸ್ತುತ ಮದುವೆಯ ಎರಡನೇ ಇನ್ನಿಂಗ್ಸ್ ಶುರು ಮಾಡಿದ್ದು, ಮದುವೆಯಾದ ಮೇಲಾದರೂ ಅದೃಷ್ಟ ಬಲದಿಂದ ಮತ್ತೇ ಸ್ತಾನ ಸಿಗಲಿ ಎಂಬುದು ಅಭಿಮಾನಿಗಳ ಆಶಯವಾಗಿದೆ.ಉಳಿದಂತೆ ಪ್ರಸ್ತುತ ರಣಜಿ ತಂಡದಲ್ಲಿ ಬದಲಾವಣೆಯೇನಿಲ್ಲ. ಕಳೆದ ಪಂದ್ಯದಲ್ಲಿ ಮಾಯಾಂಕ್‌ ಅಗರ್ವಾಲ್‌ ಬದಲಿಗೆ ಸ್ಥಾನ ಪಡೆದಿದ್ದ ರವಿಕುಮಾರ್‌ ಸಮರ್ಥ್ ಭರ್ಜರಿ ಲಯ ಪ್ರದರ್ಶಿಸಿ, ಸ್ಥಾನ ಗಟ್ಟಿ ಮಾಡಿಕೊಂಡಿದ್ದಾರೆ.
 
 

మరింత సమాచారం తెలుసుకోండి: