ರಾಜ್‌ಕೋಟ್‌: ಟೀಮ್‌ ಇಂಡಿಯಾದ ಸ್ಟಾರ್‌ ಓಪನರ್‌ ಹಾಗೂ ಉಪನಾಯಕ ಹಿಟ್ ಮ್ಯಾನ್ ರೋಹಿತ್‌ ಶರ್ಮಾ, ಆಸ್ಟ್ರೇಲಿಯಾ ವಿರುದ್ಧದ ರಾಜ್‌ ಕೋಟ್‌ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ ವಿಶೇಷ ದಾಖಲೆಯೊಂದನ್ನು ಬರೆದಿದ್ದಾರೆ. ಅಷ್ಟೇ ಅಲ್ಲದೆ ಈ ದಾಖಲೆಯೊಂದಿಗೆ ಭಾರತದ ಬ್ಯಾಟಿಂಗ್‌ ದಂತಕತೆಗಳಾದ ಸಚಿನ್‌ ತೆಂಡೂಲ್ಕರ್‌, ವೀರೇಂದ್ರ ಸೆಹ್ವಾಗ್‌ ಮತ್ತು ಸೌರವ್‌ ಗಂಗೂಲಿ ಅವರ ಸಾಲಿಗೆ ಸೇರ್ಪಡೆಯಾಗಿದ್ದಾರೆ. ಹೌದು, ಆ ದಾಖಲೆ ಹೆಸರು ಕೇಳಿದ್ರೆ ನೀವು ಕೂಡ ಶಾಕ್ ಆಗಬಹುದು. ಹಿಟ್ ಮ್ಯಾನ್ ನ ಆ ನೂತನ ದಾಖಲೆ ಇಲ್ಲಿದೆ ನೋಡಿ. 
 
ಕಾಂಗೂರು ವಿರುದ್ಧ ಇಲ್ಲಿನ ಸೌರಾಷ್ಟ್ರ ಕ್ರಿಕೆಟ್‌ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ 2ನೇ ಏಕದಿನ ಪಂದ್ಯದಲ್ಲಿ 44 ಎಸೆತಗಳಲ್ಲಿ 6 ಭರ್ಜರಿ ಬೌಂಡರಿ ಗಳ ನೆರವಿನೊಂದಿಗೆ 42 ರನ್‌ ಗಳಿಸಿ ಅರ್ಧಶತಕದ ಹೊಸ್ತಿಲಲ್ಲಿ ಔಟಾದ ರೋಹಿತ್‌, ಇದೇ ವೇಳೆ ಏಕದಿನ ಕ್ರಿಕೆಟ್‌ನಲ್ಲಿ ಆರಂಭಿಕ ಬ್ಯಾಟ್ಸ್‌ಮನ್‌ ಆಗಿ 7 ಸಾವಿರ ರನ್‌ ಗಳನ್ನು ಗಳಿಸಿದ ಸಾಧನೆ ಮಾಡಿದರು.
 
ಈ ಮೂಲಕ ಟೀಮ್‌ ಇಂಡಿಯಾ ಪರ 7000ಕ್ಕೂ ಹೆಚ್ಚು ರನ್‌ ಗಳಿಸಿದರುವ ಸಚಿನ್‌, ಸೆಹ್ವಾಗ್‌ ಮತ್ತು ಗಂಗೂಲಿ ಅವರ ಎಲೈಟ್‌ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಆಡಮ್‌ ಝಾಂಪ ಬೌಲಿಂಗ್‌ನಲ್ಲಿ ಸ್ವೀಪ್‌ ಹೊಡೆಯಲೆತ್ನಿಸಿ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದ 32 ವರ್ಷದ ಅನುಭವಿ ಬ್ಯಾಟ್ಸ್‌ಮನ್‌ ರೋಹಿತ್‌, ಕೇವಲ 4 ರನ್‌ಗಳ ಅಂತರದಲ್ಲಿ 9000 ರನ್‌ಗಳ ಗಡಿ ಮುಟ್ಟುವಲ್ಲಿ ವಿಫಲರಾದರು. ರೋಹಿತ್ ಅವರ ಅಬ್ಬರದ ಬ್ಯಾಟಿಂಗ್ ಶಕ್ತಿಯನ್ನು ಇದೀಗ ಮತ್ತೊಮ್ಮೆ ಎಲೈಟ್ ಪಟ್ಟಿಗೆ ಸೇರುವ ಮೂಲಕ ಸಾಬೀತು ಪಡಿಸಿದ್ದಾರೆ. 
 
​ಏಕದಿನ ಕ್ರಿಕೆಟ್‌ನಲ್ಲಿ ಹಿಟ್ ಮ್ಯಾನ್ ರೋಹಿತ್‌ ಬ್ಯಾಟಿಂಗ್‌ ಸಾಧನೆಯ ಹಾದಿಯ ಎಲ್ಲಾ ಮಾಹಿತಿ ಇಲ್ಲಿದೆ ನೋಡಿ:
223 ಪಂದ್ಯ
32 ನಾಟ್‌ ಔಟ್‌
8996 ರನ್‌
264 ಗರಿಷ್ಠ
48.92 ಸರಾಸರಿ
88.84 ಸ್ಟ್ರೈಕ್‌ ರೇಟ್‌
28 ಶತಕಗಳು
43 ಅರ್ಧಶತಕಗಳು
809 ಫೋರ್‌
238 ಸಿಕ್ಸರ್‌
77 ಕ್ಯಾಚ್‌.

మరింత సమాచారం తెలుసుకోండి: