ನ್ಯೂ ಡೆಲ್ಲಿ: ಟೀಂ ಇಂಡಿಯಾದ ಫ್ಯೂಚರ್ ಬ್ಯಾಟಿಂಗ್ ಪವರ್ ಎಂದೇ ಖ್ಯಾತಿ ಪಡೆದಿರುವ ರಿಷಬ್ ಪಂತ್ ಇತ್ತೀಚಿನ ದಿನಗಳಲ್ಲಿ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದರು. ಅಂತಹ ಅದ್ಭುತ ಆಟಗಾರ ವಿಫಲವಾಗಿದ್ದು  ಏಕೆ. ವಿಫಲವಾದರೂ  ಸಹ ಟೀಂ ಇಂಡಿಯಾದಲ್ಲಿ ಮರಳಿ ಸ್ಥಾನವನ್ನು ಪಡೆಯುತ್ತಾರೆ ಇಲ್ಲವಾ ಎಂಬುದು ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಟಿಂಗ್ ಭವಿಷ್ಯ ನುಡಿದಿದ್ದಾದರೂ ಏನು ಗೊತ್ತಾ. 
 
ವಿಕೆಟ್‌ ಕೀಪರ್‌ ಬ್ಯಾಟ್ಸ್‌ ಮನ್‌ ರಿಷಭ್‌ ಪಂತ್‌ ಅದ್ಭುತ ಪ್ರತಿಭೆ ಅವರು ಟೀಮ್‌ ಇಂಡಿಯಾದ ಆಡುವ 11ರ ಬಳಗದಲ್ಲಿ ಮರಳಿ ಸ್ಥಾನ ಪಡೆದುಕೊಳ್ಳಲಿದ್ದಾರೆ ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್‌ ಭವಿಷ್ಯ ನುಡಿದಿದ್ದಾರೆ. ಹೌದು, ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಮುಖ್ಯ ಸಲಹೆಗಾರ ಕೂಡ ಆಗಿರುವ ಪಾಂಟಿಂಗ್‌, ಇದೇ ವೇಳೆ 13ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಪಂತ್‌ ಜೊತೆಗೆ ಕೆಲಸ ಮಾಡಿ ಅವರಿಗೆ ನೆರವಾಗುವುದನ್ನು ಎದುರು ನೋಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ರಿಷಭ್‌ ಪಂತ್‌ ಅಪಾರ ಪ್ರತಿಭೆ ಹೊಂದಿರುವ ಯುವ ಆಟಗಾರ. ಮುಂಬರುವ ಐಪಿಎಲ್‌ ಟೂರ್ನಿಯಲ್ಲಿ ಅವರೊಟ್ಟಿಗೆ ಕೆಲಸ ಮಾಡಿ ಅವರ ಸಮಸ್ಯೆ ಬಗೆಹರಿಸುವುದನ್ನು ಎದುರು ನೋಡುತ್ತಿದ್ದೇನೆ. ಶೀಘ್ರದಲ್ಲೇ ಅವರು ಭಾರತ ತಂಡದ ಆಡುವ 11ರ ಬಳಗಕ್ಕೆ ಮರಳುತ್ತಾರೆ ಎಂಬ ವಿಶ್ವಾಸ ನನ್ನಲ್ಲಿದೆ ಎಂದು ಟ್ವಿಟರ್‌ನಲ್ಲಿ ಅಭಿಮಾನಿಯೊಬ್ಬ ಕೇಳಿದ ಪ್ರಶ್ನೆಗೆ ಪಾಂಟಿಂಗ್‌ ಉತ್ತರಿಸಿದ್ದಾರೆ. 
 
ಕರ್ನಾಟಕ ಮೂಲದ ಆರಂಭಿಕ ಬ್ಯಾಟ್ಸ್‌ಮನ್‌ ಕೆಎಲ್‌ ರಾಹುಲ್‌ ನ್ಯೂಜಿಲೆಂಡ್‌ ಎದುರು ಟಿ20 ಕ್ರಿಕೆಟ್‌ನಲ್ಲಿ ಮೊದಲ ಬಾರಿ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ಆಗಿ ಆಡುವ ಮೂಲಕ ಸತತ ಎರಡು ಅರ್ಧಶತಕಗಳನ್ನು ಬಾರಿಸಿದ್ದಾರೆ. ಟಿ20-ಐನಲ್ಲಿ ವಿಕೆಟ್‌ ಕೀಪರ್‌ ಆಗಿ ಆಡಿದ ಮೊದಲೆರಡು ಪಂದ್ಯಗಳಲ್ಲಿ ಅರ್ಧಶತಕ ಬಾರಿಸಿದ ಮೊತ್ತ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಭಾರತ ತಂಡ ಸರಣಿಯ ಮೊದಲ ಪಂದ್ಯದಲ್ಲಿ 6 ವಿಕೆಟ್‌ಗಳ ಜಯ ದಾಖಲಿಸಿ, ಬಳಿಕ 2ನೇ ಪಂದ್ಯದಲ್ಲೂ 7 ವಿಕೆಟ್‌ ಜಯದೊಂದಿಗೆ 2-0  ಅಂತರದೊಂದಿಗೆ ಮುನ್ನುಗ್ಗುತ್ತಿದೆ.

మరింత సమాచారం తెలుసుకోండి: