ಹೊಸದಿಲ್ಲಿ: 2020 ಐಪಿಎಲ್ ಗೆ ಈಗಾಗಲೇ ಕ್ಷಣಗಣನೇ ಶುರುವಾಗಿದ್ದು, ಪ್ರತಿ ಮನೆ ಮನದಲ್ಲೂ ಐಪಿಎಲ್ ಕ್ರೇಜ್ ಶುರುವಾಗಿದೆ. ಸಾಮಾಜಿಕ ಜಾಲತಾಣ ಗಳಲ್ಲಿಯೂ ಸಹ ಭರ್ಜರಿ ಹವಾ ಶುರುವಾಗಿದೆ. ಅದರಲ್ಲೂ ಸಹ ಮುಂಬೈ ಟೀಂ ನಲ್ಲಿ ಪೂರ್ವ ತಯಾರಿ ಜೊತೆಗೆ ಗೆಲ್ಲುವ ಹಾಟ್ ಫೇವರೇಟ್ ತಂಡವಾಗಿ ಕಾಣಿಸಿಕೊಳ್ಳುತ್ತಿದೆ. ಹೌದು, ಏಕೆಂದರೆ ಕಳೆದ ಬಾರಿಯ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದು ನೀತಾ ಅಂಬಾನಿಯ ಒಡೆತನದ ಮುಂಬೈ ಇಂಡಿಯನ್ಸ್ ತಂಡ. 
 
ಪ್ರಸ್ತುತ 2020 ಐಪಿಎಲ್‌ ಪಂದ್ಯಾವಳಿ ಮುಂಬಯಿ ಯಲ್ಲಿ ಆರಂಭವಾಗಿ ಅಲ್ಲಿಯೇ ಫೈನಲ್‌ ಕಾಣಲಿದೆ. ಮಾರ್ಚ್‌ 29 ರಂದು ವಾಂಖೇಡೆ ಯಲ್ಲಿ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಚಾಂಪಿಯನ್ ಮುಂಬೈ ಚೆನ್ನೈ ತಂಡಗಳು ಸೆಣಸಲಿವೆ. ಪ್ರಶಸ್ತಿ ಹಣಾಹಣಿ ಮೇ 24ರಂದು ನಡೆಯಲಿದೆ. ಹೊಸದಿಲ್ಲಿಯಲ್ಲಿ ಆಡಳಿತ ಮಂಡಳಿ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು. ಇದೇ ವೇಳೆ ರಾತ್ರಿ ಪಂದ್ಯವನ್ನು 7.30ಕ್ಕೆ ಆರಂಭಿಸುವ ಪ್ರಸ್ತಾವವನ್ನು ಕೈಬಿಡಲಾಯಿತು. ಹಿಂದಿನಂತೆ ರಾತ್ರಿ 8 ಗಂಟೆಗೇ ಪಂದ್ಯ ಆರಂಭವಾಗಲಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ತಿಳಿಸಿದರು.
 
ಇದೇ ಮೊದಲ ಸಲ ಮೂರನೇ ಅಂಪಾಯರ್‌ ಗೆ ನೋ ಬಾಲ್‌ ನೀಡಲು ಅವಕಾಶ ಕೊಡಲಾಗುತ್ತಿದೆ. ಹಾಗೆಯೇ ಬ್ಯಾಟ್ಸ್‌ ಮನ್‌ ಬ್ಯಾಟಿಂಗ್‌ ನಡೆಸುತ್ತಿದ್ದಾಗ ಗಾಯಗೊಂಡರೆ ಬದಲಿ ಆಟಗಾರನನ್ನು ಕಣಕ್ಕಿಳಿಸಲಾಗುವುದು ಎಂದು ಸೌರವ್‌ ಗಂಗೂಲಿ ತಿಳಿಸಿದರು. ಐಪಿಎಲ್‌ ಆರಂಭಕ್ಕೂ ಮೊದಲು ಅಂತಾರಾಷ್ಟ್ರೀಯ ಕ್ರಿಕೆಟಿಗರು ಪಾಲ್ಗೊಳ್ಳುವ ಆಲ್‌ ಸ್ಟಾರ್ ಕ್ರಿಕೆಟ್‌ ಕೂಟವನ್ನು ಆಯೋಜಿಸ ಲಾಗುತ್ತಿದೆ. ಅಹ್ಮದಾಬಾದ್‌ನ ಲ್ಲಿ ಈ ಕೂಟವನ್ನು ನಡೆಸಬೇಕಿತ್ತು. ಆದರೆ ಅಲ್ಲಿನ ಕ್ರೀಡಾಂಗಣ ಇನ್ನೂ ಸಿದ್ಧವಾಗಿಲ್ಲದ ಕಾರಣ ಇದನ್ನು ಎಲ್ಲಿ ಆಯೋಜಿಸುವುದು ಎನ್ನುವ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ ಎಂದು ಬಿಸಿಸಿಐ ಅಧ್ಯಕ್ಷರಾದ ಸೌರವ್ ಗಂಗೂಲಿ ಹೇಳಿದ್ದಾರೆ. 
 
ಭಾರತೀಯನ ಪ್ರತೀ ಹೃದಯದಲ್ಲೂ ಕ್ರಿಕೆಟ್ ಹಬ್ಬ ಮಾಡುವ ಸಮಯ ಬರುತ್ತಿದ್ದಂತೆ ಎಲ್ಲಾ ತಂಡಗಳ ಆಟಗಾರರು ಅವರವರ ತಂಡಗಳನ್ನು ಸೇರಿಕೊಂಡಿದ್ದಾರೆ. ತಂಡ ಸೇರಿಕೊಂಡು 2020 ಐಪಿಎಲ್ ಚಾಂಪಿಯನ್ ಆಗಲು ಹಾತೊರೆಯುತ್ತಿವೆ

మరింత సమాచారం తెలుసుకోండి: