ಹ್ಯಾಮಿಲ್ಟನ್: ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯ ನಿರ್ಣಾಯಕ 3ನೇ ಪಂದ್ಯದ ಸೂಪರ್ ಓವರಿನಲ್ಲಿ ರೋಹಿತ್ ಶರ್ಮಾ ಭರ್ಜರಿ ಸಿಕ್ಸರ್ ಸಿಡಿಸಿ ತಂಡಕ್ಕೆ ಜಯ ತಂದುಕೊಟ್ಟಿದ್ದರು. ಇದೀಗ ಹಿಟ್ ಮ್ಯಾನ್ ರೋಹಿತ್ ಶರ್ಮಾ ನ್ಯೂಜಿಲೆಂಡ್ ಯುವ ಕ್ರಿಕೆಟ್ ತಂಡದ ಕ್ರೀಡಾ ಸ್ಫೂರ್ತಿಯನ್ನು ಹಾಡಿ ಹೊಗಳಿದ್ದಾರೆ. ಹೌದು ಏನು, ಯಾಕಿದು  ಗೊತ್ತಾ!? ಇಲ್ಲಿದೆ ನೋಡಿ ಡೀಟೆಲ್ಸ್.... 
 
ರೋಹಿತ್ ಶರ್ಮಾ ಅವರು ವಿಡಿಯೋವೊಂದನ್ನು ಟ್ವೀಟ್ ಮಾಡಿ, ಅಂಡರ್-19 ವಿಶ್ವಕಪ್ ಟೂರ್ನಿಯಲ್ಲಿ ನ್ಯೂಜಿಲೆಂಡ್ ತಂಡ ಎರಡನೇ ಕ್ವಾರ್ಟರ್ ಫೈನಲ್‍ ನಲ್ಲಿ ತೋರಿಸಿದ ಹೃದಯಸ್ಪರ್ಶಿ ಸನ್ನಿವೇಶವನ್ನು ಶ್ಲಾಘಿಸಿದ್ದಾರೆ. ಹೌದು, ಅಂಡರ್-19 ವಿಶ್ವಕಪ್ ಟೂರ್ನಿಯ ಭಾಗವಾಗಿ ಬುಧವಾರ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ನ್ಯೂಜಿಲೆಂಡ್ ಮೊದಲು ಬ್ಯಾಟಿಂಗ್ ಮಾಡಿ 239 ರನ್ ಪೇರಿಸಿತ್ತು. ಬಳಿಕ ಬ್ಯಾಟಿಂಗ್ ಆರಂಭಿಸಿದ ವೆಸ್ಟ್ ಇಂಡೀಸ್ 238 ರನ್‍ ಗಳಿಗೆ ಆಲೌಟ್ ಆಯಿತು. ಇದಕ್ಕೂ ಮುನ್ನ ಇನ್ನಿಂಗ್ಸ್ 43ನೇ ಓವರಿನ ಕೊನೆಯಲ್ಲಿ ಕಾಲು ನೋವು ಕಾಣಿಸಿ ಕೊಂಡಿದ್ದರಿಂದ ವಿಂಡೀಸ್‍ ನ ಬ್ಯಾಟ್ಸ್‌ ಮನ್‌ ಕಿರ್ಕ್ ಮೆಕೆಂಜಿ ನಿವೃತ್ತರಾದರು. ಆದರೆ ಇನ್ನಿಂಗ್ಸ್ ನ 48ನೇ ಓವರಿನಲ್ಲಿ ವಿಂಡೀಸ್ ಒಂಬತ್ತು ವಿಕೆಟ್ ಕಳೆದು ಕೊಂಡಿದ್ದರಿಂದ ಕಿರ್ಕ್ ಮೆಕೆಂಜಿ ಮತ್ತೆ ಬ್ಯಾಟಿಂಗ್‍ ಗೆ ಬಂದರು. ಬಳಿಕ ಕ್ರಿಸ್ಟಿಯನ್ ಕ್ಲಾರ್ಕ್ ಅವರ ಮುಂದಿನ ಎಸೆತದಲ್ಲಿ ಕಿರ್ಕ್ ವಿಕೆಟ್ ಒಪ್ಪಿಸಿದರು. 
 
ವೆಸ್ಟ್ ಇಂಡೀಸ್ 238 ರನ್‍ಗಳಿಗೆ ಆಲೌಟ್ ಆಗುತ್ತಿದ್ದಂತೆ ಮೆಕೆಂಜಿ ಮೈದಾನದಿಂದ ಹೊರನಡೆಯಲು ಹೆಣಗಾಡಿದರು. ಈ ವೇಳೆ ಇಬ್ಬರು ನ್ಯೂಜಿಲೆಂಡ್ ಆಟಗಾರರು ಮೆಕೆಂಜಿಯವರ ರಕ್ಷಣೆಗೆ ಬಂದು ಅವರನ್ನು ಎತ್ತಿಕೊಂಡು ಮೈದಾನದಿಂದ ಹೊರಗೆ ಕರೆದೊಯ್ದರು. ಈ ಕುರಿತು ಟ್ವೀಟ್ ಮಾಡಿರುವ ರೋಹಿತ್ ಶರ್ಮಾ, ಇದು ಅತ್ಯಂತ ಉತ್ತಮ ಕ್ರೀಡಾ ಸ್ಫೂರ್ತಿ. ಇದನ್ನು ನೋಡಲು ಅತ್ಯುತ್ತಮವಾಗಿದೆ ಎಂದು ನ್ಯೂಜಿಲೆಂಡ್ ತಂಡವನ್ನು ಹೊಗಳಿದ್ದಾರೆ. ಪಂದ್ಯದಲ್ಲಿ ಪರ ಕಿರ್ಕ್ ಮೆಕೆಂಜಿ 104 ಎಸೆತಗಳಲ್ಲಿ 99 ರನ್ ಗಳಿಸಿದ್ದರು. ವಿರೋಧಿ ತಂಡವಾದರೂ ಸಹ ರೋಹಿತ್ ಅವರ ಕ್ರೀಡಾ ಸ್ಪೂರ್ತಿ ಯನ್ನು ಹೊಗಳಿದ್ದು ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

మరింత సమాచారం తెలుసుకోండి: