ಮುಂಬೈ: ಕ್ರಿಕೆಟ್ ಇತಿಹಾಸದಲ್ಲಿಯೇ ಬದ್ಧ ವೈರಿಗಳೆಂದೇ ಗುರುತಿಸಿಕೊಂಡಿರುವ ಟೀಂ ಇಂಡಿಯಾ ಮತ್ತು ಪಾಕಿಸ್ಥಾನಗಳ ನಡುವಿನ ದ್ವಿಪಕ್ಷೀಯ ಸರಣಿಗಳು ಮತ್ತೆ ನಡೆಯಬೇಕು. ಇದು ಕ್ರೀಡೆಗೆ ಉತ್ತಮ ಎಂದು ಟೀಂ ಇಂಡಿಯಾದ ಆಟಗಾರ ಸಿಕ್ಸರ್ ಸಿಂಗ್ ಹೇಳಿದ್ದಾರೆ. ಹೌದು, ಯಾರದು ಗೊತ್ತಾ!? ಈ ರೀತಿ ಹೇಳಿಕೆ ನೀಡಲು ಕಾರಣವೇನು ಗೊತ್ತಾ!? ಇಲ್ಲಿದೆ ನೋಡಿ ಮಾಹಿತಿ. 
 
ಹೈವೋಲ್ಟೇಜ್  ಪಂದ್ಯವಾದ ಭಾರತ ಹಾಗೂ ಪಾಕಿಸ್ತಾನ ನಡುವಿನ ಸರಣಿಗಳು ಮತ್ತೆ ನಡೆಯಬೇಕು ಎಂದಿರುವುದು ಮತ್ತು ಅಲ್ಲ, ಸಿಕ್ಸರ್ ಸಿಂಗ್ ಮಾಜಿ ಆಲ್ ರೌಂಡರ್ ಯುವರಾಜ್ ಸಿಂಗ್. ಹೌದು, ಈ ರೀತಿ ಹೇಳಿರುವುದು ಯುವರಾಜ್ ಸಿಂಗ್. ಯುವರಾಜ್ ಜೊತೆ ಪಾಕಿಸ್ಥಾನದ ಮಾಜಿ ಆಲ್ ರೌಂಡರ್ ಆಟಗಾರ ಶಾಹೀದ್ ಅಫ್ರಿದಿ ಕೂಡಾ ಭಾರತ- ಪಾಕಿಸ್ಥಾನ ನಡುವಿನ ಸರಣಿ ನಡೆಯಬೇಕೆಂದು ಹೇಳಿರುವುದು ವಿಶೇಷವಾಗಿದೆ. 
 
ಸಿಕ್ಸರ್ ಸಿಂಗ್ ಎಂದೇ ಖ್ಯಾತಿ ಪಡೆದಿರುವಯುವರಾಜ್ ಸಿಂಗ್, ಪಾಕಿಸ್ಥಾನ ವಿರುದ್ಧದ 2004, 2006ಮತ್ತು 2008ರ ದ್ವಿಪಕ್ಷೀಯ ಸರಣಿಗಳಲ್ಲಿ ನಾನು ಆಡಿರುವುದನ್ನು ನೆನಪಿಸಲು ಖುಷಿಯಾಗುತ್ತಿದೆ. ಮುಂದೆಯೂ ಇದು ಮುಂದುವರಿಯಬೇಕು. ಆದರೆ ಇದೆಲ್ಲಾ ನಮ್ಮ ಕೈಯಲ್ಲಿಲ್ಲ ಎಂದರು.ನಾವು ಕ್ರೀಡೆಯ ಪ್ರೀತಿಯಿಂದ ಕ್ರಿಕೆಟ್ ಆಡುತ್ತೇವೆ. ಆದರೆ ನಾವು ಯಾರ ವಿರುದ್ದ ಆಡುತ್ತೇವೆ ಎನ್ನುವುದು ನಮ್ಮ ಕೈಯಲ್ಲಿಲ್ಲ.ಆದರೆ ಕ್ರೀಡೆಯ ಬೆಳವಣಿಗೆಯ ಉದ್ದೇಶದಿಂದ ಭಾರತ ಪಾಕಿಸ್ಥಾನ ಕ್ರಿಕೆಟ್ ಆಡಬೇಕು ಎಂದು ಯುವರಾಜ್ ಹೇಳಿದರು. ಭಾರತ ಪಾಕಿಸ್ಥಾನ ನಡುವೆ 2013ರಿಂದ ಯಾವುದೇ ದ್ವಿಪಕ್ಷೀಯ ಸರಣಿಗಳು ನಡೆದಿಲ್ಲದಿರುವುದು ಗಮನಿಸಬಹುದಾಗಿದೆ. 
 
ಇಡೀ ಕ್ರಿಕೆಟ್ ಇತಿಹಾಸದಲ್ಲೇ ಭಾರತ ಮತ್ತು ಪಾಕಿಸ್ತಾನದ ಮಧ್ಯೆ ನಡೆದಷ್ಟು ಹೈ ವೋಲ್ಟೇಜ್ ಪಂದ್ಯ ಮತ್ತಾವುದು ನಡೆದಿಲ್ಲ. ಹೌದು, ಈ ತಂಡಗಳ ಮಧ್ಯೆ ಕ್ರಿಕೆಟ್ ಪಂದ್ಯ ಏನಾದರು ನಡೆದರೆ ಇಡೀ ಎರಡು ರಾಷ್ಟ್ರಗಳೇ ಪಂದ್ಯ ಆಡುತ್ತಿವೆಯೇನೋ ಎಂಬಂತೆ ಭಾಸವಾಗುತ್ತದೆ. ಅಷ್ಟರ ಮಟ್ಟಿಗೆ ಕ್ರಿಕೆಟ್ ಪ್ರೇಮಿಗಳು ಪಂದ್ಯದಲ್ಲಿ ಭಾಗಿಯಾಗಿ ವೀಕ್ಷಿಸುತ್ತಾರೆ, ಅಷ್ಟೇ ಪ್ರೀತಿಸುತ್ತಾರೆ. ಒಟ್ಟಾರೆ ಇದೀಗ ಯವರಾಜ್ ಸಿಂಗ್ ಮತ್ತೇ ಇಂಡೋ ಪಾಕ್ ಸರಣಿ ಶುರುವಾಗಲಿ  ಎಂದಿದ್ದು ಏನಾಗುತ್ತದೆ ಎಂಬುದು ಕಾದುನೋಡಬೇಕಾಗಿದೆ.
 
 
 
 
 

మరింత సమాచారం తెలుసుకోండి: