ಲಂಡನ್: ಐಸಿಸಿ ಇದೀಗ ಹೊಸ ಮಾದರಿಯ ಚಾಂಪಿಯನ್ ಶಿಪ್ ಆಯೋಜನೆಗೆ ಭರ್ಜರಿ ಸಿದ್ಧತೆ ನಡೆಸಿದೆ. ಅದು ಕೂಡ ಅಂತರರಾಷ್ಟ್ರೀಯ ಮಟ್ಟದಲ್ಲಿ, ಹೌದು, ಆದರೆ ಇದಕ್ಕೆ ಭಾರತೀಯ ಕ್ರಿಕೆಟ್ ಕೌನ್ಸಿಲ್ ಸಮಿತಿಯು ಭಾರೀ ವಿರೋಧ ವ್ಯಕ್ತ ಪಡಿಸಿದೆ. 
 
ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ 2023 ರಿಂದ 2031ರ ಭವಿಷ್ಯದ ಕ್ರಿಕೆಟ್ ಸರಣಿಗಳ ವೇಳಾಪಟ್ಟಿಯಲ್ಲಿ (ಎಫ್.ಟಿ.ಪಿ)ಎರಡು ಹೊಸ ಟೂರ್ನಿಯನ್ನು ಆಯೋಜನೆ ಮಾಡುವ ಕುರಿತಾಗಿ ಯೋಚನೆ ಮಾಡಿದೆ. ಹೌದು, 2023ರಿಂದ ಆರಂಭವಾಗಿ ಮುಂದಿನ ಎಂಟು ವರ್ಷಗಳ ಎಫ್.​ಟಿ.ಪಿಯಲ್ಲಿ "ಟಿ20ಚಾಂಪಿಯನ್ಸ್ ಕಪ್" ಎನ್ನುವ ಹೊಸ ಟೂರ್ನಿಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ವಿಶ್ವದ ಅಗ್ರ 10 ತಂಡಗಳು ಈ ಟೂರ್ನಿಯಲ್ಲಿ ಆಡಲಿದ್ದು, ಒಟ್ಟು 48 ಪಂದ್ಯಗಳು ಇರಲಿವೆ. ಕಳೆದ ವರ್ಷದ ಏಕದಿನ ವಿಶ್ವಕಪ್ ಟೂರ್ನಿಯಲ್ಲೂ ಇಷ್ಟೇ ಪಂದ್ಯಗಳು ನಡೆದಿದ್ದವು. 
 
ಪ್ರಸ್ತುತ ಐಸಿಸಿಯ ಶಿಫಾರಸಿನ ಪ್ರಕಾರ, 2024ಹಾಗೂ 2028ರಲ್ಲಿ ಐಸಿಸಿ ಟಿ20 ಚಾಂಪಿಯನ್ಸ್ ಕಪ್ ನಡೆಯಲಿದ್ದರೆ, 2025 ಹಾಗೂ 2029ರಲ್ಲಿ ಐಸಿಸಿ ಒಡಿಐ ಚಾಂಪಿಯನ್ಸ್ ಕಪ್ ನಡೆಯಲಿದೆ. ಅದರೊಂದಿಗೆ 2026ರ ಹಾಗೂ 2030ರಲ್ಲಿ ಟಿ20 ವಿಶ್ವಕಪ್, 2027ಹಾಗೂ 2031ರಲ್ಲಿ ಏಕದಿನ ವಿಶ್ವಕಪ್ ನಡೆಯಲಿದೆ. ಏಕದಿನ ಮಾದರಿಯಲ್ಲಿ ನಡೆಸಲಾಗುವ ಒಡಿಐ ಚಾಂಪಿಯನ್ಸ್ ಕಪ್​ ಅನ್ನು ಈ ಹಿಂದಿನ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಮಾದರಿಯಲ್ಲಿ ನೋಡಬಹುದಾಗಿದೆ. ಇನ್ನು ಟಿ20ಚಾಂಪಿಯನ್ಸ್ ಕಪ್ ಟೂರ್ನಿಯನ್ನು ವಿಶ್ವಕಪ್ ರೀತಿಯಲ್ಲಿ ಪರಿಗಣನೆ ಆಗುವ ಸಾಧ್ಯತೆ ಇದ್ದು ಟೂರ್ನಿ ಹೇಗಿರಲಿದೆ, ಪ್ರೇಕ್ಷಕರು ಇದನ್ನು ಒಪ್ಪುತ್ತಾರಾ ಎಂಬ ಕುತೂಹಲ ಗರಿಗೆದರಿದೆ. 
 
2023 ರಿಂದ 2031ರವರೆಗೆ ನಡೆಯಲಿರುವ ಐಸಿಸಿ ಜಾಗತಿಕ ಟೂರ್ನಿಯ ಆತಿಥ್ಯಕ್ಕೆ ಬಿಡ್ ಸಲ್ಲಿಸಲು ಪೂರ್ಣ ಸದಸ್ಯ ರಾಷ್ಟ್ರಗಳಿಗೆ ಮಾರ್ಚ್ 15ರ ವರೆಗೆ ಅವಕಾಶ ನೀಡಲಾಗಿದೆ. ಬಲಿಷ್ಠ ಕ್ರಿಕೆಟ್ ಸಂಸ್ಥೆಗಳ ವಿರೋಧ: ಪ್ರತಿ ವರ್ಷ ಐಸಿಸಿಯ ಜಾಗತಿಕ ಟೂರ್ನಿ ನಡೆಸುವ ಬಗ್ಗೆ ವಿಶ್ವದ ಬಲಿಷ್ಠ ಕ್ರಿಕೆಟ್ ಸಂಸ್ಥೆಗಳಾದ ಬಿಸಿಸಿಐ, ಕ್ರಿಕೆಟ್ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ವಿರೋಧ ವ್ಯಕ್ತಪಡಿಸಿದ್ದು, ದ್ವಿಪಕ್ಷೀಯ ಸರಣಿಗಳ ಆಯೋಜನೆಗೆ ಹೆಚ್ಚಿನ ಅವಕಾಶ ನೀಡಬೇಕೆಂದು ಅಭಿಪ್ರಾಯವಾಗಿದೆ. ಇದಕ್ಕೆ ಬಿಸಿಸಿಐ ಪ್ರಬಲ ವಿರೋಧವನ್ನು ವ್ಯಕ್ತಪಡಿಸಿದೆ.
 
 
 
 
 

మరింత సమాచారం తెలుసుకోండి: