ಚೇಸಿಂಗ್ ಕಿಂಗ್ ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ, ಇದೀಗ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್‌ ಅವರ ಶತಕಗಳ ದಾಖಲೆಯನ್ನು ಸರಿಗಟ್ಟಲು ಸಮೀಪಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಈಗಾಗಲೇ 43 ಶತಕಗಳನ್ನು ಬಾರಿಸಿ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ಗುರುತಿಸಿಕೊಂಡಿರುವ ವಿರಾಟ್‌, ತವರಿನಲ್ಲಿ ಇನ್ನೊಂದು ಶತಕ ಬಾರಿಸಿದರೆ ತಂಡೂಲ್ಕರ್‌ ಅವರ ಶತಕಗಳ ದಾಖಲೆಯನ್ನು ಸರಿದೂಗಿಸಲಿದ್ದಾರೆ. ಭಾರತ ತಂಡದ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ 3 ಪಂದ್ಯಗಳ ಏಕದಿನ ಸರಣಿಯನ್ನಾಡಲಿದ್ದು, ಈ ಸರಣಿಯಲ್ಲಿ ವಿಶೇಷ ದಾಖಲೆ ಬರೆಯುವ ಅವಕಾಶ ಕೊಹ್ಲಿ ಕೈಲಿದೆ. 
 
ಇತ್ತಂಡಗಳು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ. ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು (49) ಬಾರಿಸಿದ ವಿಶ್ವ ದಾಖಲೆ ಹೊಂದಿರುವ ಸಚಿನ್‌ ತೆಂಡೂಲ್ಕರ್‌, ತವರಿನಂಗಣದಲ್ಲಿ ಒಟ್ಟು 20 ಶತಕಗಳನ್ನು ಸಿಡಿಸಿದ್ದಾರೆ. ಕೊಹ್ಲಿ ಇದೀಗ ಮನೆಯಂಗಣದಲ್ಲಿ 19 ಶತಕಗಳನ್ನು ಬಾರಿಸಿದ್ದು, ಆಸೀಸ್‌ ವಿರುದ್ಧದ 3 ಪಂದ್ಯಗಳಲ್ಲಿ ಒಂದು ಶತಕ ದಾಖಲಿಸಿದರೆ ಸಚಿನ್ ಗೆ ಸಮನಾಗಿ ನಿಲ್ಲಲಿದ್ದಾರೆ. 
 
ಏಕದಿನ ಕ್ರಿಕೆಟ್‌ ನಲ್ಲಿ ಕೊಹ್ಲಿ ಬ್ಯಾಟಿಂಗ್‌ ಸಾಧನೆ
242 ಪಂದ್ಯಗಳು
39 ನಾಟ್‌ ಔಟ್‌
11609 ರನ್‌
183 ಗರಿಷ್ಠ
59.84 ಸರಾಸರಿ
93.28 ಸ್ಟ್ರೈಕ್‌ರೇಟ್‌
43 ಶತಕ
55 ಅರ್ಧಶತಕ
 
ಟೆಸ್ಟ್‌ ಕ್ರಿಕೆಟ್‌ ನಲ್ಲಿ ವಿರಾಟ್‌ ಸಾಧನೆ
84 ಪಂದ್ಯ
141 ಇನಿಂಗ್ಸ್‌
7202 ರನ್‌
254* ಗರಿಷ್ಠ
54.97 ಸರಾಸರಿ
57.81 ಸ್ಟ್ರೈಕ್‌ ರೇಟ್‌
27 ಶತಕ
22 ಅರ್ಧಶತಕ
 
ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ ಸಾಧನೆ
78 ಪಂದ್ಯ
21 ನಾಟ್‌ ಔಟ್‌
2689 ರನ್‌
94* ಗರಿಷ್ಠ
52.72 ಸರಾಸರಿ
138.53 ಸ್ಟ್ರೈಕ್‌ ರೇಟ್‌
00 ಶತಕ
24 ಅರ್ಧಶತಕ
 
ಐಪಿಎಲ್‌ ಮತ್ತು ಟಿ20 ಕ್ರಿಕೆಟ್‌ ನಲ್ಲಿ ಸಾಧನೆ
277 ಪಂದ್ಯ
50 ನಾಟ್‌ ಔಟ್‌
8795 ರನ್‌
113 ಗರಿಷ್ಠ
41.48 ಸರಾಸರಿ
134.60 ಸ್ಟ್ರೈಕ್‌ ರೇಟ್‌
05 ಶತಕ
64 ಅರ್ಧಶತಕ

మరింత సమాచారం తెలుసుకోండి: