ಟೋಕಿಯೊ: ಇಡೀ ಜಗತ್ತನ್ನು ಕಳೆದ ತಿಂಗಳಿಂದ ಸಾಕಷ್ಟು ಬಾಧಿಸುತ್ತಿರುವ ಕರೋನ ವೈರಸ್ ಸಾಕಷ್ಟು ಅಮಾಯಕ ಜೀವಗಳನ್ನು ಬಲಿತೆಗೆದು ಕೊಂಡಿದೆ ಇದನ್ನು ಗಮನಿಸಿ ರಾಷ್ಟ್ರ ಮಟ್ಟದಲ್ಲಿ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆಯ ಬೇಕಿದ್ದ ಸಾಕಷ್ಟು ಕ್ರೀಡಾಕೂಟಗಳು ಮುಂದೂಡಬೇಕು ಎಂದು ಸಾಕಷ್ಟು  ಕ್ರೀಡಾ ಸಂಸ್ಥೆಗಳು ನಿರ್ಧರಿಸಿದೆ. ಅದೇ ರೀತಿ ಐಓಸಿ ಯು ಕೂಡ ಅಂತರಾಷ್ಟ್ರೀಯ ಒಲಂಪಿಕ್ ಆಟವನ್ನು ಮುಂದೂಡಿದೆ ಇದಕ್ಕೆ ಸಂಬಂದ ಪಟ್ಟ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ. 

 

 

ಕೊರೊನಾ ವೈರಾಣು ಸೋಂಕಿನ ಕಾಟದಿಂದ ಒಲಿಂಪಿಕ್ ಮೇಲೆ ಅನಿಶ್ಚಿತತೆಯ ಕಾರ್ಮೋಡ ಕವಿದಿರುವಾಗಲೇ, ಈ ಪ್ರತಿಷ್ಠಿತ ಕ್ರೀಡಾಕೂಟ ಮುಂದೂಡಿಕೆ ಸಾಧ್ಯತೆ ಬಗ್ಗೆ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಉನ್ನತಾಧಿಕಾರಿ ಡಿಕ್ ಪೌಂಡ್ ಮುನ್ಸೂಚನೆ ನೀಡಿದ್ದಾರೆ.

 

 

ಇಡೀ ವಿಶ್ವವೇ ಕೊರೊನಾ ಸೋಂಕಿನಿಂದ ತತ್ತರಿಸುತ್ತಿದ್ದು, ಟೋಕಿಯೋ 2020 ಒಲಿಂಪಿಕ್ ಕ್ರೀಡಾಕೂಟವನ್ನು ಮುಂದೂಡುವುದು ಅನಿವಾರ್ಯ ಎಂದು ಅವರು ಹೇಳಿದ್ದಾರೆ. ಈಗಾಗಲೇ ಕೆನಡಾ, ನಾರ್ವೆ ಮೊದಲಾದ ದೇಶಗಳು ತನ್ನ ಕ್ರೀಡಾಪಟುಗಳನ್ನು ಒಲಿಂಪಿಕ್ಗೆ ಕಳುಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿವೆ.

 

ಇನ್ನೂ ಕೆಲವು ರಾಷ್ಟ್ರಗಳು ಕೂಡ ಇದೇ ಹಾದಿಯಲ್ಲಿದ್ದು ಶೀಘ್ರದಲ್ಲೇ ನಿರ್ಧಾರ ಪ್ರಕಟಿಸಲಿದೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಒಲಿಂಪಿಕ್ ಕ್ರೀಡಾಕೂಟ ಮುಂದೂಡುವುದು ಬಹುತೇಕ ಖಚಿತವಾಗಿದೆ. ಜಪಾನ್ ಪ್ರಧಾನಮಂತ್ರಿ ಶಿಂಜೋ ಅಬೆ ಕೂಡ ನಿನ್ನೆ ಒಲಂಪಿಕ್ ಕ್ರೀಡಾಕೂಟ ಮುಂದೂಡಿಕೆ ಸಾಧ್ಯತೆ ಬಗ್ಗೆ ಮುನ್ಸೂಚನೆ ನೀಡಿದ್ದರು.

 

ಕ್ರೀಡಾಕೂಟ ಮುಂದೂಡುವಂತೆ ವಿವಿಧ ದೇಶಗಳ ಅಥ್ಲೆಟ್ಗಳು ಮತ್ತು ಕ್ರೀಡಾ ಸಂಸ್ಥೆಗಳು ವ್ಯಾಪಕ ಒತ್ತಡ ಹೇರುತ್ತಿರುವುದರಿಂದ ಒಲಿಂಪಿಕ್ ಆಯೋಜನೆಯನ್ನು ವಿಳಂಬ ಮಾಡುವ ಬಗ್ಗೆ ಪರಿಶೀಲಿಸುವುದಾಗಿ ಒಲಿಂಪಿಕ್ ಸಮಿತಿ ಮೊನ್ನೆ ತಿಳಿಸಿತ್ತು. ಇದರ ಬೆನ್ನಲ್ಲೇ ಅತಿಥೇಯ ದೇಶ ಜಪಾನ್ ಪ್ರಧಾನಿ ಅಬೆ, ಟೋಕಿಯೋ ಒಲಿಂಪಿಕ್-2020 ಕ್ರೀಡಾಕೂಟವನ್ನು ಮುಂದೂಡುವುದು ಅನಿವಾರ್ಯವಾಗಬಹುದು ಎಂದು ತಿಳಿಸಿದ್ದರು.

 

ಟೋಕಿಯೋ-2020ರ ಗೇಮ್ಗಳು ನಿಗದಿಯಾದ ಜುಲೈ 24ರಿಂದ ಆರಂಭವಾಗುವ ಸಾಧ್ಯತೆ ಇಲ್ಲ ಪೂರ್ವ ನಿಗದಿಯಾಗಿರುವ ದಿನಾಂಕಗಳಲ್ಲಿ ತನ್ನ ಅಥ್ಲಿಟ್ಗಳನ್ನು ಒಲಿಂಪಿಕ್ ಕ್ರೀಡಾಕೂಟಕ್ಕೆ ಕಳುಹಿಸಲು ಸಾಧ್ಯವಾವುದಿಲ್ಲ ಎಂದು ಈಗಾಗಲೇ ಅನೇಕ ದೇಶಗಳು ತನ್ನ ಅಸಹಾಯಕತೆಯನ್ನು ಸ್ಪಷ್ಟಪಡಿಸಿವೆ. ಕೊರೊನಾ ಕಾಟದಿಂದ ಒಳಿಂಪಿಕ್ ಕ್ರೀಡಾಕೂಟವನ್ನು ಮುಂದಿನ ವರ್ಷಕ್ಕೆ ಮುಂದೂಡಬೇಕೆಂಬ ಒತ್ತಡಗಳು ವ್ಯಾಪಕವಾಗಿವೆ.

మరింత సమాచారం తెలుసుకోండి: