ಜಗತ್ತಿನಾಧ್ಯಂತ ಜನಪ್ರಿಯವಾಗಿ ಫೇಸ್ ಬುಕ್  ಜನ ಸಾಮಾನ್ಯರಲ್ಲಿ ಬೆರೆತು ಹೋಗಿದೆ. ಇದು ಜನರ ನಡುವೆ ಸಂವಹನವನ್ನು ನಡೆಸಲು ಸಹಕಾರಿಯಾಗಿದೆ ಹಾಗೂ ಜನರ ಅಭಿಪ್ರಾಯಗಳನ್ನು ಹಂಚಿಕೊಳ್ಳುವಲ್ಲಿ ಈ ಫೇಸ್ ಬುಕ್ ಪ್ರಯೋಜನಕಾರಿ  ಆದರೆ ಇಂದು ಫೇಸ್ ಬುಕ್  ಕೇವಲ ಸಂವಹನ ಮಾಧ್ಯಮವಾಗಲ್ಲದೆ  ಇ ಕಾಮರ್ಸ್ ರಂಗಕ್ಕೂ ಫೇಸ್ ಬುಕ್ ಕಾಲಿಟ್ಟಿದೆ.

 

 ಹೌದು ವಾಣಿಜ್ಯ ವಹಿವಾಟಿಗೆ ಪ್ರಸ್ತುತ ಆನ್​ಲೈನ್​ ವೇದಿಕೆ ಅತಿ ಮುಖ್ಯ ಎಂಬುದು ಸಾಬೀತಾಗಿರುವ ಅಂಶ. ಹೀಗಾಗಿ ಹೆಚ್ಚು ಹೆಚ್ಚು ಕಂಪನಿಗಳು ಇ-ಕಾಮರ್ಸ್​ಗೆ ಹೆಚ್ಚು ಆದ್ಯತೆ ನೀಡುತ್ತಿವೆ. ಇದೀಗ ಫೇಸ್​ಬುಕ್​ ಕೂಡ ಇದರತ್ತ ಗಮನ ಹರಿಸಿದೆ ಎಂಬುದು ಇನ್ನಿಲ್ಲದ ಕುತೂಹಲಕ್ಕೆ ಕಾರಣವಾಗಿದೆ.

 

ಹೌದು.. ಫೇಸ್​ಬುಕ್​ ಶಾಪ್ಸ್​​​ ಓಪನ್​ ಆಗಲಿದೆ. ನಮ್ಮ 'ಲೈಕ್​'ಗಳನ್ನು buyಗೆ ಮಾರ್ಪಾಡಿಸಲು ಕಂಪನಿ ಯೋಜನೆ ರೂಪಿಸಿದೆ. ಇ-ಕಾಮರ್ಸ್​ನ ದೈತ್ಯ ಕಂಪನಿ ಅಮೆಜಾನ್​ಗೆ ಟಕ್ಕರ್​ ಕೊಡಲು ಎಲ್ಲ ರೀತಿಯಿಂದಲೂ ಸಜ್ಜಾಗುತ್ತಿದೆ.

 

ಫೇಸ್​ಬುಕ್​ ಹಾಗೂ ಇನ್​ಸ್ಟಾಗ್ರಾಂ ಬಳಕೆದಾರರನ್ನೇ ಗುರಿಯಾಗಿಸಿಕೊಂಡು ವಾಣಿಜ್ಯ ವಹಿವಾಟಿಗೆ ಕಂಪನಿ ಮುಂದಾಗಿದೆ. ಇದಷ್ಟೇ ಅಲ್ಲ, ವಾಟ್ಸ್​ಆಯಪ್​ ಹಾಗೂ ಮೆಸೆಂಜರ್​ನಲ್ಲೂ ಕೂಡ ಇದನ್ನು ಪರಿಚಯಿಸಲಿದೆ. ಜಾಗತಿಕವಾಗಿ ಇದರ ಸ್ವರೂಪ ಹೇಗಿರಲಿದೆ ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ.

 

ಫೇಸ್​ಬುಕ್​ ಜಗತ್ತಿನಲ್ಲಿಯೇ ಅತಿದೊಡ್ಡ ಸಾಮಾಜಿಕ ಜಾಲತಾಣದ ಆಯಪ್​ ಆಗಿದೆ. ಇದಲ್ಲದೇ. ಇನ್​ಸ್ಟಾಗ್ರಾಂ, ವಾಟ್ಸ್​ಆಯಪ್​, ಮೆಸೆಂಜರ್​ ಮೊದಲಾದ ಆಯಪ್​ಗಳನ್ನು ತನ್ನ ಬತ್ತಳಿಕೆಯಲ್ಲಿ ಹೊಂದಿದೆ. ಇವೆಲ್ಲವುಗಳನ್ನು ಬಳಸಿಕೊಂಡು ಬಳಕೆದಾರರಿಗೆ ಆನ್​ಲೈನ್ ಶಾಪಿಂಗ್​ ಸೌಲಭ್ಯ ಕಲ್ಪಿಸಲು ಮುಂದಾಗುತ್ತಿದೆ. ಇದಕ್ಕಾಗಿ 'ಫೇಸ್​ಬುಕ್​ ಶಾಪ್ಸ್​' ತೆರೆಯಲಿದೆ. ಇಲ್ಲಿ ಯಾವುದೇ ವಸ್ತುವನ್ನು ಮಾರಾಟ ಮಾಡಲು ವಹಿವಾಟುದಾರರಿಗೆ ಅವಕಾಶ ಕಲ್ಪಿಸಲಿದೆ. ಇದು ಅಕ್ಷರಶಃ ಅಮೆಜಾನ್​ ವರ್ಸ್​ಸ್​ ಫೇಸ್​ಬುಕ್​ ಆಗಿರಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

 

ಸದ್ಯ ಸಣ್ಣ ಉದ್ದಿಮೆದಾರರು ಸಂಕಷ್ಟದಲ್ಲಿದ್ದಾರೆ. ತಮ್ಮ ವಹಿವಾಟುಗಳನ್ನು ಮುಚ್ಚುತ್ತಿದ್ದಾರೆ. ಹೆಚ್ಚಿನವರು ತಮ್ಮ ವಹಿವಾಟುಗಳನ್ನು ಆನ್​ಲೈನ್​ಗೆ ತರಲು ಬಯಸುತ್ತಿದ್ದಾರೆ. ಶಾಪಿಂಗ್​ಅನ್ನು ಸರಾಗವಾಗಿಸಿ ಸಣ್ಣ ಉದ್ದಿಮೆದಾರರಿಂದ ಹಿಡಿದು ಜಾಗತಿಕ ಬ್ರ್ಯಾಂಡ್​ವರೆಗಿನ ಎಲ್ಲ ಉತ್ಪನ್ನಗಳನ್ನು ನಮ್ಮ ಆಯಪ್​ಗಳ ಮೂಲಕ ಗ್ರಾಹಕರ ಜತೆ ಸಂಪರ್ಕ ಕಲ್ಪಿಸುವುದು ನಮ್ಮ ಉದ್ದೇಶವಾಗಿದೆ ಎಂದು ಫೇಸ್​ಬುಕ್​ ತಿಳಿಸಿದೆ.

 

ಈಗಾಗಲೇ ರಿಲಯನ್ಸ್​ ಜಿಯೋ ಫ್ಲಾಟ್​ಫಾರ್ಮ್​ನಲ್ಲಿ ಫೇಸ್​ಬುಕ್​ 43 ಸಾವಿರ ಕೋಟಿ ರೂ. ಗೂ ಅಧಿಕ ಹೂಡಿಕೆ ಮಾಡಿದೆ. ಇದು ಕಂಪನಿ ವಾಣಿಜ್ಯ ವಹಿವಾಟಿನ ವಿಸ್ತರಣೆ ಭಾಗವಾಗಿದೆ. ಕೋವಿಡ್​ ಕಾರಣದಿಂದಾಗಿ ಜಾಹೀರಾತು ಆದಾಯದಲ್ಲಿ ಭಾರಿ ಇಳಿಕೆಯಾಗಿರುವುದರಿಂದ ಇತರ ಅವಕಾಶಗಳತ್ತ ಕಂಪನಿ ಕಣ್ಣುಹಾಕಿದೆ.

 

మరింత సమాచారం తెలుసుకోండి: