ಇತ್ತೀಚಿನ ದಿನಗಳಲ್ಲಿ ಗೂಗಲ್ ತನ್ನ ವ್ಯಾಪ್ತಿಯನ್ನು ವಿಸ್ತರಿಸುವಂತಹ ಪ್ರಯತ್ನವನ್ನು ಹಾಕಿಕೊಂಡಂತೆ ಕಾಣುತ್ತಿದೆ. ಅದರಲ್ಲೂ ಭಾರತದ ಟೆಲಿಕಾಂ  ಸಂಸ್ಥೆಗಳ ಮೂಲಕ ತನ್ನ ವ್ಯಾಪ್ತಿಯನ್ನು ವಿಸ್ತರಿಸುವಂತಹ ಪ್ರಯತ್ನವನ್ನು ಮಾಡುತ್ತಿದೆ. ಇತ್ತೀಚೆಗೆ ಭಾರತದ ಟೆಲಿಕಾಂ ನಲ್ಲಿ ಅತೀ ವೇಗವಾಗಿ ಜನಪ್ರಿಯವಾಗಿದ್ದ ಜೀಯೋ ನಲ್ಲಿ ಹೂಡಿಕೆ ಮಾಡಿತ್ತು ಅದರಂತೆ ಮತ್ತೊಂದು ಭಾರತದ ಟೆಲಿಕಾಂಮ್ ಸಂಸ್ಥೆಯ ಮೇಲೆ ಹೂಡಿಕೆ ಮಾಡಲು ಯೋಚಿಸುತ್ತಿದೆ  ಅಷ್ಟಕ್ಕೂ  ಗೂಗಲ್ ಹೂಡಿಕೆ ಮಾಡಲಿರುವ ಭಾರತದ ಟೆಲಿಕಾಂ ಸಂಸ್ಥೆ ಯಾವುದು ಗೊತ್ತಾ..?

 

ಇತ್ತೀಚೆಗೆ ಫೇಸ್​ಬುಕ್,​ ರಿಲಯನ್ಸ್​ ಜಿಯೋ ಕಂಪನಿಯ ಶೇ.9.99 ಷೇರನ್ನು 5.7 ಬಿಲಿಯನ್​ ಡಾಲರ್​ (43,574 ಕೋಟಿ ರೂ.) ನೀಡಿ ಖರೀದಿ ಮಾಡಿತ್ತು. ಇದೀಗ ಸರ್ಚಿಂಗ್​ ದೈತ್ಯ ಗೂಗಲ್​ ಕೂಡ ಅದೇ ನಿಟ್ಟಿನಲ್ಲಿ ಸಾಗುವ ಬಗ್ಗೆ ಯೋಚನೆ ಮಾಡುತ್ತಿದೆ.

ಜಾಗತಿಕ ತಂತ್ರಜ್ಞಾನದ ದೈತ್ಯನೆನಿಸಿಕೊಂಡಿರುವ ಗೂಗಲ್​ ವೊಡಾಫೋನ್​ ಐಡಿಯಾ ಟೆಲಿಕಾಂ ಕಂಪನಿಯ 5 ಪರ್ಸೆಂಟ್‌ರಷ್ಟು ಷೇರನ್ನು ಖರೀದಿ ಮಾಡಲು ನಿರ್ಧರಿಸಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.

 

ವೊಡಾಫೋನ್​ ಐಡಿಯಾದ ಮಾರುಕಟ್ಟೆ ಮೌಲ್ಯ ಇಂದು (ಗುರುವಾರ) 16,724 ಕೋಟಿ ರುಪಾಯಿ ದಾಖಲಾಗಿದೆ. ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ ವೊಡಾಫೋನ್​ ಐಡಿಯಾ ಮತ್ತು ಭಾರ್ತಿ ಏರ್​ಟೆಲ್​ಗೆ ಪ್ರತಿಸ್ಫರ್ಧಿಯಾಗಿ ಮುಕೇಶ್​ ಅಂಬಾನಿ ಒಡೆತನದ ರಿಲಯನ್ಸ್‌ ಜಿಯೋ ಲಗ್ಗೆ ಇಟ್ಟಿತ್ತು. ಕಡಿಮೆ ಬೆಲೆಯಲ್ಲಿ ಡೇಟಾ ಸೌಲಭ್ಯ ನೀಡಿ ಸಂಚಲನ ಮೂಡಿಸಿತ್ತು. ಈಗ ಜಿಯೋದಲ್ಲಿ ಫೇಸ್​ಬುಕ್​ ಹೂಡಿಕೆ ಮಾಡಿದ ಬೆನ್ನಲ್ಲೇ, ಗೂಗಲ್ ಕೂಡ ಅದೇ ನಿಟ್ಟಿನಲ್ಲಿ ಹೆಜ್ಜೆ ಇಡಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

 

ಗೂಗಲ್​ ವಲಯದಲ್ಲಿಯೇ ಕೆಲಸ ಮಾಡುವವರೇ ಈ ಮಾಹಿತಿ ನೀಡಿದ್ದಾರೆ ಎಂದು ಮಾಧ್ಯಮ ವರದಿ ಮಾಡಿದೆ. ಯುಕೆಯ ಟೆಲಿಕಾಂ ಕಂಪನಿ ಮತ್ತು ಭಾರತದ ಆದಿತ್ಯ ಬಿರ್ಲಾ ಸಮೂಹ ಸಂಸ್ಥೆಯ ಪಾಲುದಾರಿಕೆಯಲ್ಲಿ ಇರುವ ವೊಡಾಫೋನ್​ ಐಡಿಯಾ ಸದ್ಯ ತೀವ್ರವಾದ ಆರ್ಥಿಕ ಕುಸಿತ ಅನುಭವಿಸುತ್ತಿದೆ. ಇದೇ ಬೆನ್ನಲ್ಲೇ ಗೂಗಲ್ 5 ಪರ್ಸೆಂಟ್ ಷೇರು ಖರೀದಿಗೆ ಮುಂದಾಗಿದೆ. ಇದರ ಪ್ರಕ್ರಿಯೆಗಳು ಇನ್ನೂ ಪ್ರಾರಂಭಿಕ ಹಂತದಲ್ಲಿ ಇವೆ. ಶೀಘ್ರದಲ್ಲಿಯೇ ಈ ಬಗ್ಗೆ ನಿರ್ಧಾರ ಪ್ರಕಟಗೊಳ್ಳಬಹುದು ಎಂದು ಹೇಳಲಾಗಿದೆ.

 

 

మరింత సమాచారం తెలుసుకోండి: