ಕೊರೋನಾ ವೈರಸ್ ಚೀನಾದಲ್ಲಿ ಜನ್ಮ ತಾಳಿ ಇಡೀ ವಿಶ್ವವನ್ನು ವ್ಯಾಪಿಸಿ ಲಕ್ಷಾಂತರ ಮಂದಿಯನ್ನು ಬಲಿತೆಗೆದುಕೊಂಡಿದೆ. ಅಮೇರಿಕಾವಂತೂ ಚೀನಾದ ವಿರುದ್ಧ ವಾಗ್ದಾಳಿಯನ್ನು ಮಾಡುತ್ತಿದೆ. ಅದೇ ರೀತಿ ಇಡೀ ಪ್ರಪಂಚವೇ ಚೀನಾವನ್ನು ವೈರಿಎಂಬಂತೆ ನೋಡಲಾಗುತ್ತಿದೆ. ಈ ಒಂದು ಸಂದರ್ಭದಲ್ಲಿ ಭಾರತದ ಪ್ರಧಾನಿಗಳು ಸ್ವಾಭಿಮಾನ್ ಭಾರತವನ್ನು ಮಾಡುವಂತಹ ಸಾಕಷ್ಟು ಕ್ರಮಗಳನ್ನು ಕೈಕೊಂಡಿರುವ ಹಿನ್ನಲೆಯಲ್ಲಿ ಸಾಕಷ್ಟು ಕಾರ್ಯಕ್ರಮಗಳಿಗೆ ಹಾಗೂ ಅನೇಕ ಯಂತ್ರೋಪಕರಣಗಳನ್ನು ಉತ್ಪಾದಿಸಲು ಮೇಕ್ ಇನ್ ಇಂಡಿಯಾ ಅಡಿಯಲ್ಲಿ  ಪ್ರೋತ್ಸಾಹ ನೀಡುತ್ತಾ ಚೀನಾ ವಸ್ತುಗಳನ್ನು ಬಹಿಶ್ಕಾರ ಮಾಡಲಾಗುತ್ತಿದೆ. . ಇದಕ್ಕೆ ಮೊದಲನೇ ಹಂತವಾಗಿ ಒಂದು ತ್ರಂತ್ರಾಂಶ ಜನ್ಮ ತಾಳಿದ್ದು ಇದಿ ಮೊಬೈಲ್ ನಲ್ಲಿ ಬಳಸುವಂತಹ ಚೀನಾ ಆಪ್ಲಿಕೇಶನ್ ಗಳನ್ನು ಗುರುತಿಸಿ ಅದನ್ನು ಡಿಲೀಟ್ ಮಾಡುತ್ತದೆ. ಅಷ್ಟಕ್ಕೂ ಆ  ಆಫ್ ಯಾವುದು ಗೊತ್ತಾ?

 

ಇಂದಿನ ದಿನಮಾನದಲ್ಲಿ ಯಂತ್ರೋಪಕರನದಿಂದ ಹಿಡಿದು ಎಲ್ಲಾ ರೀತಿಯ ವಸ್ತುಗಳನ್ನು ಚೀನಾ ತಯಾರಿಸುತ್ತಿದೆ. ಕೊರೋನಾ ವಿಷಯವಾಗಿ ದೇಶ ಚೀನಾ ವಸ್ತುಗಳನ್ನು ಬಹಿಷ್ಕಾರ ಮಾಡಲಾಗುತ್ತಿದೆ. ಇದರಂತೆ ಮೊಬೈಲ್ ನಲ್ಲಿರುವ ಚೀನಾ ತಂತ್ರಾಂಶವನ್ನ ನಮಗೇ ತಿಳಿಯದೆ  ಬಳಸುತ್ತಿರುತ್ತೇವೆ. ಇದನ್ನು ತೆಗದು ಹಾಕುವುದು ಕಷ್ಟ ಸಾಧ್ಯವಾಗಬಹುದು. ಆದರೆ ಈ ಒಂದು ಆಪ್ ನಿಂದ ಚೀನಾ ಅಪ್ಲಿಕೇಶನ್ ಅನ್ನು ತೆಗೆದು ಹಾಕುವಲ್ಲಿ ಸಹಕಾರಿಯಾಗಿದೆ.

 

ಆ ಆಫ್  ಮತ್ತ್ಯಾವುದೂ ಅಲ್ಲ 'ರಿಮೂವ್ ಚೀನಾ ಆಯಪ್ಎಂಬ ಹೊಸ ಅಪ್ಲಿಕೇಶನ್.  ಒಂದೆಡೆ ಭಾರತದ ಗಡಿಯಲ್ಲಿ ಚೀನಾ ಕ್ಯಾತೆ ತೆಗೆಯುತ್ತಿದ್ದರೇ, ಮತ್ತೊಂದೆಡೆ ಚೀನಾದಲ್ಲಿ ಸೃಷ್ಟಿಯಾದಂತಹ ವೈರಸ್ ಭಾರತದಲ್ಲಿ ಕಬಂಧಬಾಹುವವನ್ನು ಚಾಚುತ್ತಿದೆ. ಈ ಕಾರಣಕ್ಕಾಗಿಯೇ ಚೀನಾದ ಆರ್ಥಿಕತೆಗೆ ಹೊಡೆತ ನೀಡಲು 'ಚೀನಾದ ವಸ್ತುಗಳ ಬಹಿಷ್ಕಾರ, ಚೀನಾ ಆಯಪ್ ಗಳಿಗೆ ಗುಡ್ ಬಾಯ್' ಮುಂತಾದ ವಿಧಾನಗಳನ್ನು ಭಾರತೀಯರು ಅನುಸರಿಸುತ್ತಿದ್ದಾರೆ. ಈ ಅಭಿಯಾನದ ಒಂದು ಅಂಗವೇ ರಿಮೂವ್ ಚೀನಾ ಆಯಪ್ ಎಂಬ ಅಪ್ಲಿಕೇಶನ್.

 

ಏನಿದು ರಿಮೂವ್ ಚೀನಾ ಆಯಪ್ ?

 

ಸ್ಮಾರ್ಟ್ ಫೋನ್ ಗಳಲ್ಲಿ ಚೀನಾ ಮೂಲದ ಆಯಪ್ ಗಳನ್ನು ಗುರುತಿಸಿ ಅದನ್ನು ಅಳಿಸಿ ಹಾಕಲು ಸಹಾಯ ಮಾಡುವ ಅಪ್ಲಿಕೇಶನ್ ಇದು. ಮೇ 17 ರಂದು ಅಧಿಕೃತವಾಗಿ ಪ್ಲೇಸ್ಟೋರ್ ನಲ್ಲಿ ಕಾಣಿಸಿಕೊಂಡ ಈ ಆಯಪ್ ಬಿಡುಗಡೆಯಾದ ಎರಡೇ ವಾರಗಳಲ್ಲಿ 5 ಮಿಲಿಯನ್ (50 ಲಕ್ಷ) ಡೌನ್ ಲೋಡ್ ಕಂಡಿದೆ. ಮಾತ್ರವಲ್ಲದೆ ಬಳಕೆದಾರರಿಂದ 4.9 ರೇಟಿಂಗ್ ಸಿಕ್ಕಿದೆ. ಅತೀ ಹೆಚ್ಚು ಜನರು 5 ಸ್ಟಾರ್ ನೀಡಿದ್ದಾರೆ.

ಇದು ಕೇವಲ 3.8 ಎಂಬಿ ಗಾತ್ರದಲ್ಲಿದ್ದು, ಪ್ಲೇಸ್ಟೋರ್ ನಿಂದ ರಿಮೂವ್ ಚೀನಾ ಆಯಪ್ ಎಂದು ಸರ್ಚ್ ಮಾಡಿ ಇನ್ ಸ್ಟಾಲ್ ಮಾಡಿಕೊಂಡರೇ ನಿಮ್ಮ ಮೊಬೈಲ್ ಫೋನ್ ನಲ್ಲಿರುವ ಚೀನಾ ಮೂಲದ ಎಲ್ಲಾ ಆಯಪ್ ಗಳನ್ನು ಗುರುತಿಸಿ ಪಟ್ಟಿ ಮಾಡುತ್ತದೆ. ನಿಮಗೆ ಅಲ್ಲಿಂದಲೇ ಅನ್ ಇನ್ ಸ್ಟಾಲ್ ಮಾಡುವ ಅವಕಾಶಗಳನ್ನು ಕೂಡ ಕಲ್ಪಿಸಲಾಗಿದೆ.

 

ಒನ್ ಟಚ್ ಆಯಪ್ ಲ್ಯಾಬ್ಸ್ ಎಂಬ ಜೈಪುರ ಮೂಲದ ಕಂಪೆನಿಯೊಂದು ಈ ಆಯಪ್ ತಯಾರಿಸಿದೆ. ಗಮನಾರ್ಹ ಸಂಗತಿಯೆಂದರೇ ಬಳಕೆದಾರರು ಪ್ಲೇ ಸ್ಟೋರ್ ಮತ್ತು ಇತರ ಕಡೆಗಳಿಂದ ಇನ್ ಸ್ಟಾಲ್ ಮಾಡಿಕೊಂಡ ಆಯಪ್ ಗಳನ್ನು ಮಾತ್ರ ಗುರುತಿಸುತ್ತದೆಯೇ ಹೊರತು ಇನ್ ಬಿಲ್ಟ್ (ಚೀನಾ ಮೊಬೈಲ್ ಗಳಲ್ಲಿ ಮೊದಲೇ ಇನ್ ಸ್ಟಾಲ್ ಆಗಿರುವ ) ಆಯಪ್ ಗಳನ್ನು ಪತ್ತೆಹಚ್ಚುವುದಿಲ್ಲ.

 

ಚೀನಾದ ಹಲವು ತಂತ್ರಜ್ಞಾನ ಕಂಪೆನಿಗಳಿಗೆ ಭಾರತವೇ ಆದಾಯದ ಮೂಲವಾಗಿದೆ. ಇದೀಗ ಹಲವು ಚೀನಾ ಮೂಲದ ಅಪ್ಲಿಕೇಶನ್ ಗಳು ಭಾರೀ ಪ್ರಮಾಣದಲ್ಲಿ ಅನ್ ಇನ್ ಸ್ಟಾಲ್ ಆಗುತ್ತಿದ್ದು ಇದಕ್ಕೆ ರಿಮೂವ್ ಚೀನಾ ಆಯಪ್ ಅಪ್ಲಿಕೇಶನ್ ವೇದಿಕೆ ಒದಗಿಸಿರುವುದು ಸುಳ್ಳಲ್ಲ. ಅದಾಗ್ಯೂ ನಾವು ಶೈಕ್ಷಣಿಕ ಉದ್ದೇಶಕ್ಕಾಗಿ ಈ ಆಯಪ್ ಅಭಿವೃದ್ಧಿ ಪಡಿಸಿದ್ದೇವೆಯೇ ಹೊರತು ಬಲವಂತವಾಗಿ ಅಪ್ಲಿಕೇಶನ್ ಗಳನ್ನು ಅನ್ ಇನ್ ಸ್ಟಾಲ್ ಮಾಡಲು ಅಲ್ಲ. ಪ್ಲೇಸ್ಟೋರ್ ನಲ್ಲಿರುವ ಅಪ್ಲಿಕೇಶನ್ ಗಳು ಯಾವ ದೇಶಕ್ಕೆ ಸೇರಿವೆ ಎಂಬ ಮಾಹಿತಿಯನ್ನು ಬಳಕೆದಾರರಿಗೆ ತಿಳಿಸಲು ಇದು ಸಹಾಯಕ. ಇದು ಶಿಕ್ಷಣ ವಿಭಾಗಕ್ಕೆ ಸೇರಿದ್ದು, ವಾಣಿಜ್ಯ ಉದ್ದೇಶಕ್ಕಾಗಿ ಅಲ್ಲ ಎಂದು ಕಂಪೆನಿ ಹೇಳಿಕೊಂಡಿದೆ.

 

మరింత సమాచారం తెలుసుకోండి: