ಕೊರೋನಾ ವೈರಸ್ ಇಂದಾಗಿ ಇಡೀ ಪ್ರಪಂಚವೇ ಲಾಕ್ ಡೌನ್ ಆದಂತಹ ಸಂದರ್ಭದಲ್ಲಿ ಎಲ್ಲ ಜನ ಸಾಮಾನ್ಯರು ಮನೆಯೊಳಗೇ ಬಂದಿಯಾಗಿದ್ದರು. ಇಂತಹ ಸಮಯದಲ್ಲಿ ಮನರಂಜನೆಯ ಉದ್ದೇಶದಿಂದ ನಾನಾ ಬಗೆಯ ಕೆಲಸಗಳನ್ನು ತೊಂಡಗಿಕೊಂಡಿದ್ದರು, ಆದರೆ ಇವರಲ್ಲಿ ಸಾಕಷ್ಟು ಮಂದಿ ಸಾಮಾಜಿಕ ಜಾಲಾತಾಣದಲ್ಲಿ ಸುತ್ತಾಡುತ್ತಿರುತ್ತಾರೆ, ಇದಕ್ಕಾಗಿ ಸಾಕಷ್ಟು ಅಪ್ಲಿಕೇಷನ್ ಗಳನ್ನು  ಡೌನ್ ಲೋಡ್ ಮಾಡಿಕೊಂಡು ಆ ಮೂಲಕ ಸಾಮಾಜಿಕ ಜಾಲತಾಣಕ್ಕೆ ಭೇಟಿ ನೀಡುತ್ತಾರೆ. ಅದರಲ್ಲೂ  ಈ ಒಂದು ಅಪ್ಲಿಕೇಷನ್ ಲಾಕ್ ಡೌನ್ ಸಮಯದಲ್ಲಿ ಅತೀ ಹೆಚ್ಚು ಡೌನ್ ಲೋಡ್ ಆಗಿದೆ ಎಂದು ವರದಿಯೊಂದು ತಿಳಿಸಿದೆ. ಅಷ್ಟಕ್ಕೂ ಆ ಅಪ್ಲಿಕೇಶನ್ ಯಾವುದು ಗೊತ್ತಾ..?

 

 ಲಾಕ್​ಡೌನ್​ ಸಮಯದ ನಡುವೆ ಮೇ ತಿಂಗಳಲ್ಲಿ ಹೆಚ್ಚು ಡೌನ್​ಲೋಡ್​​ ಮಾಡಲ್ಪಟ್ಟ ನಾನ್​ ಗೇಮ್​ ಆಯಪ್​​ಗಳಲ್ಲಿ ಟಿಕ್​ಟಾಕ್​ ಮೊದಲನೇ ಸ್ಥಾನದಲ್ಲಿರುವುದಾಗಿ ಅನಾಲಿಟಿಕ್ಸ್​ ಫ್ಲಾಟ್​ಫಾರ್ಮ್​ ಸೆನ್ಸಾರ್​ ಟವರ್​ ವರದಿಯಲ್ಲಿ ಬಹಿರಂಗವಾಗಿದೆ.

ಚೀನಾ ಮೂಲದ ವಿಡಿಯೋ ಶೇರಿಂಗ್​ ಆಯಪ್​ ಟಿಕ್​ಟಾಕ್ ಮೇ ತಿಂಗಳಲ್ಲಿ​ ಬರೋಬ್ಬರಿ 112 ಮಿಲಿಯನ್ ಬಾರಿ ಡೌನ್​ಲೋಡ್​ ಆಗಿದೆ. ಇದರಲ್ಲಿ ಐದನೇ ಒಂದು ಭಾಗ ಭಾರತದಲ್ಲೇ ಡೌನ್​ಲೋಡ್​ ಆಗಿದೆ. ಈ ಮೂಲಕ ಟಿಕ್​ಟಾಕ್​ ಆಯಪ್​ಗೆ ಭಾರತ ಬಹುದೊಡ್ಡ ಮಾರುಕಟ್ಟೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಎರಡನೇ ಸ್ಥಾನದಲ್ಲಿ ಅಮೆರಿಕ ಇದೆ. ಇಲ್ಲಿ ಶೇ 9 ರಷ್ಟು ಡೌನ್​ಲೋಡ್​ ಆಗಿವೆ. ಮೇ 2019ಕ್ಕಿಂತ 2020ರ ಮೇನಲ್ಲಿ ಅತ್ಯಧಿಕ ಡೌನ್​ಲೋಡ್​ ಆಗಿವೆ. ​ 

 

ಇನ್ನು ಗೂಗಲ್​ ಪ್ಲೇ ಸ್ಟೋರ್​ನಲ್ಲಿ ಫೇಸ್​ಬುಕ್​, ವಾಟ್ಸ್​ಆಯಪ್​ ಹಾಗೂ ನೂತನ ವಿಡಿಯೋ ಕಾನ್ಫರೆನ್ಸ್​ ಆಯಪ್​ ಜೂಮ್​ ಹಿಂದಿಕ್ಕಿ ಟಿಕ್​ಟಾಕ್ ಟಾಪ್​ನಲ್ಲಿದೆ.​ ಆಯಪಲ್​ ಆಯಪ್​ ಸ್ಟೋರ್​ನಲ್ಲಿ ಟಿಕ್​ಟಾಕ್​ಗಿಂತ ಜೂಮ್​ ಮೊದಲ ಸ್ಥಾನದಲ್ಲಿದ್ದು, ಯೂಟ್ಯೂಬ್​ ಎರಡನೇ ಸ್ಥಾನದಲ್ಲಿದೆ.

 

ಏಪ್ರಿಲ್​ಗೆ ಹೋಲಿಸಿದರೆ ಮೇ ತಿಂಗಳಲ್ಲಿ ಟಿಕ್​ಟಾಕ್​ ಹೆಚ್ಚು ಡೌನ್​ಲೋಡ್​ ಆಗಿದೆ. ಏಪ್ರಿಲ್​ನಲ್ಲಿ ಜಾಗತಿಕವಾಗಿ 107 ಮಿಲಿಯನ್​ ಆಗಿತ್ತು. ಮೇನಲ್ಲಿ 112 ಮಿಲಿಯನ್​ ಡೌನ್​ಲೋಡ್​ ಆಗಿದೆ. ಇಲ್ಲೂ ಸಹ ಭಾರತವೇ ಮುಂದಿದೆ.

ಅಂದಹಾಗೆ ಟಿಕ್​ಟಾಕ್​ ಅನ್ನು ಚೀನಾ ಅಂತರ್ಜಾಲ ತಂತ್ರಜ್ಞಾನ ಕಂಪನಿ ಬೈಟೆಡ್ಯಾನ್ಸ್​ ಅಭಿವೃದ್ಧಿಪಡಿಸಿದೆ. ಟಿಕ್​ಟಾಕ್​ಗೆ ಪ್ಲೇ ಸ್ಟೋರ್​ನಲ್ಲಿ 4.4 ರೇಟಿಂಗ್​ ನೀಡಲಾಗಿದೆ. ಆಯಪ್​ ಸ್ಟೋರ್​ನಲ್ಲಿ 3.4 ರೇಟಿಂಗ್​ ಕೊಡಲಾಗಿದ್ದು, ಜೂನ್​ 8ರವರೆಗೆ 21 ಮಿಲಿಯನ್ಸ್​ ವಿಮರ್ಶೆಗಳು ಹರಿದುಬಂದಿವೆ. 

 

ಜಾಗತಿಕವಾಗಿ ಬಿಕ್ಕಟ್ಟು ಸೃಷ್ಟಿಸಿರುವ ಕರೊನಾ ವೈರಸ್​ ಹುಟ್ಟು ಚೀನಾದಲ್ಲಿ ಆಗಿರುವುದರಿಂದ ಚೀನಾ ವಿರುದ್ಧ ಅನೇಕ ರಾಷ್ಟ್ರಗಳು ಆಕ್ರೋಶ ಹೊರಹಾಕಿವೆ. ಭಾರತವು ಸಹ ಚೀನಾ ನರಿಬುದ್ಧಿಯ ಬಗ್ಗೆ ಆಗಾಗಾ ಟೀಕಾ ಪ್ರಹಾರ ನಡೆಸುತ್ತಿದ್ದು, ಚೀನಾ ನಿರ್ಮಿತ ಟಿಕ್​ಟಾಕ್​ ಆಯಪ್​ ಬಳಸದಂತೆ ಹಲವು ಅಭಿಯಾನಗಳು ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ. 

మరింత సమాచారం తెలుసుకోండి: