ಇಂದು ಸ್ಮಾರ್ಟ್ ಪೋನ್ ಗಳು ಪ್ರತಿಯೊಬ್ಬರೂ ಕೂಡ ಬಳಸುತ್ತಿರುವಂತಹ ಒಂದು ಸಂವಹನ ಮಾಧ್ಯಮಗಳು, ಈ ಸ್ಮಾರ್ಟ್ ಪೋನ್ ಗಳ ಮೂಲಕ ಆಗದಿರುವ ಕೆಲಸಗಲೇ ಇಲ್ಲವೇನೊ ಎಂಬಂತೆ ಇಂದಿನ ಜಗತ್ತು ನಿರ್ಮಾಣವಾಗಿದೆ. ಆದರೆ ಇಂತ ಸ್ಮಾರ್ಟ್ ಪೋನ್ ಗಳಲ್ಲಿ ಬಳಸುವಂತಹ ಆಫ್ ಗಳಿಂದ ಸಾಕಷ್ಟು ಹಣವನ್ನು ಕಳೆದುಕೊಳ್ಳಬಹುದು.  ಅಷ್ಟಕ್ಕೂ ಆ ಆಪ್ ಯಾವುದು ಗೊತ್ತಾ..?

 

ಸ್ಮಾರ್ಟ್​ ಫೋನ್​ ಅಥವಾ ಟಾಬ್ಲೆಟ್​ ಬಳಕೆದಾರರು ವೈರಸ್​ ದಾಳಿ ಆಗದಿರಲೆಂದು ಪ್ಲೇಸ್ಟೋರ್​ನಲ್ಲಿ ದೊರೆಯುವ ಮಾಲ್ವೇರ್​, ರ್ಯಾನ್​ಸೊಮ್ವೇರ್​ ಮತ್ತು ಫ್ಲೀಸಿವೇರ್​ ಎಂಬ ಸಾಫ್ಟ್​ವೇರ್​ಗಳನ್ನು ಇಟ್ಟುಕೊಂಡು ತಮ್ಮ ಫೋನ್​ ಅನ್ನು ಮ್ಯಾನೇಜ್​ ಮಾಡುತ್ತಿರುತ್ತಾರೆ. ಇದರ ನಡುವೆ ಸಂಶೋಧಕರು ನೀಡಿದ ಅನೇಕ ಎಚ್ಚರಿಕೆಗಳನ್ನೂ ಸಹ ಪಾಲಿಸುತ್ತಾ ಬರುತ್ತಿರುತ್ತಾರೆ. ಆಂಡ್ರಾಯ್ಡ್​ ಹೆಚ್ಚು ಜನಪ್ರಿಯವಾಗಿರುವ ಕಾರಣ ಕೆಲ ಡೆವಲಪರ್ಸ್​ಗಳು ದುರುದ್ದೇಶಪೂರಿತ ಆಯಪ್​ ಮೂಲಕ ವಂಚಿಸಲು ಕಾಯುತ್ತಿರುತ್ತಾರೆ.

 

ಹೌದು, ಸಂಶೋಧಕರ ಇತ್ತೀಚಿನ ವರದಿಯ ಪ್ರಕಾರ ' ಸ್ನ್ಯಾಪ್​ ಟ್ಯೂಬ್​' (SnapTube) ಆಯಪ್ ಅಪಾಯಕಾರಿ ಎಂದು ತಿಳಿಸಿದೆ. ಯೂಟ್ಯೂಬ್​ ಮತ್ತು ಫೇಸ್​ಬುಕ್​ ಮೂಲಕ ವಿಡಿಯೋ ಡೌನ್​ಲೋಡ್​ ಮಾಡಿಕೊಳ್ಳಲು ಈ ಆಯಪ್​ ಬಳಸಲಾಗುತ್ತದೆ. ಈಗಾಗಲೇ 40 ಮಿಲಿಯನ್​ಗೂ ಹೆಚ್ಚು ಡೌನ್​ಲೋಡ್​ ಸಹ ಆಗಿದೆ. ಸ್ನ್ಯಾಪ್​ ಟ್ಯೂಬ್​ ಒಂದು ಉಚಿತ ಆಯಪ್​. ಹಾಗಂತ ಇದಕ್ಕೆ ಬೆಲೆತೆರಬೇಕಾಗಿಲ್ಲ ಎಂದು ಭಾವಿಸಿದ್ದರೆ, ನಿಮ್ಮ ಊಹೆ ತಪ್ಪು. 

 

ಅಪ್​ಸ್ಟ್ರೀಮ್​ ಸಿಸ್ಟಮ್​ (UpStreamSystem) ವರದಿಯ ಪ್ರಕಾರ ಸ್ನ್ಯಾಪ್​ ಟ್ಯೂಬ್​ ಆಯಪ್​ ಡೌನ್​ಲೋಡ್​ ಮಾಡಿಕೊಂಡಿದ್ದರೆ, ನಮಗೆ ಗೊತ್ತಿಲ್ಲದಂತೆ ಲಾಗಿನ್​ ಆಗಿ ಪ್ರೀಮಿಯಮ್​ ಸೇವೆಯನ್ನು ಬಳಸಿಕೊಂಡು ನಮ್ಮ ಬ್ಯಾಂಕ್​ ಖಾತಯಿಂದ ಹಣ ಎಗರಿಸುತ್ತಿದೆ. ಆಯಪ್​ನಲ್ಲಿ ನೀಡಿರುವ ಮಾಹಿತಿಯ ಆಧಾರದ ಮೇಲೆ ಬ್ಯಾಂಕ್​ಗೆ ಕನ್ನ ಹಾಕುತ್ತಾರೆ ಹುಷಾರ್​!.

ಸಾಮಾನ್ಯವಾಗಿ ಕೆಲವೊಂದು ಆಯಪ್​ಗಳಲ್ಲಿ ಮೊದಲು ಉಚಿತ ಸೇವೆ ನೀಡಿ ನಂತರ ತಿಂಗಳು ಹಾಗೂ ವರ್ಷಕ್ಕೆ ಇಷ್ಟು ಎಂದು ಚಾರ್ಜ್​ ಮಾಡುತ್ತಾರೆ. ಸೇವೆ ಮುಂದವರಿಯಬೇಕಾದ್ದಲ್ಲಿ ಹಣ ಪಾವತಿ ಮಾಡಿ ಮುಂದುವರಿಸಬಹುದು. ಕೆಲವೊಬ್ಬರು ಉಚಿತ ಅವಧಿಯನ್ನು ಬಳಸಿಕೊಂಡು ಆಯಪ್​ ಕುರಿತು ಆಸಕ್ತಿ ಇಲ್ಲದಿದ್ದರೆ ಅನ್​ಇನ್​ಸ್ಟಾಲ್​ ಮಾಡಿಬಿಡುತ್ತಾರೆ. ಆದರೆ, ಲಾಗ್​ ಆಫ್​ ಮಾಡಿದ್ದೇವೋ ಎಂಬುದನ್ನು ಗಮನಿಸುವುದೇ ಇಲ್ಲ. ಇದೇ ರೀತಿ ಸ್ನ್ಯಾಪ್​ ಟ್ಯೂಬ್​ ಆಯಪ್​ ಡೌನ್​ಲೋಡ್​ ಮಾಡಿ, ಟ್ರಯಲ್​ ವರ್ಷನ್​ ನೋಡಿ ಲಾಗ್​ಆಫ್​ ಮಾಡದೇ ಆಯಪ್​ ತೆಗೆದಿದ್ದರೆ, ಆಯಪ್​ ಡೆವಲಪರ್ಸ್​ ಅವರಾಗಿಯೇ ಲಾಗಿನ್​ ಆಗಿ ನಿಮ್ಮ ಖಾತೆಯಲ್ಲಿ ಹಣವನ್ನು ಎಗರಿಸುತ್ತಾರೆ ಎಂಬ ಆತಂಕಕಾರಿ ಮಾಹಿತಿ ತಿಳಿದುಬಂದಿದೆ. 

 

 ಇದೇ ರೀತಿ ವಂಚನಾತ್ಮಕ ಚಟುವಟಿಕೆಯಿಂದಲೇ ಸ್ನ್ಯಾಪ್​ ಟ್ಯೂಬ್​ ಅಂದಾಜು 100 ಮಿಲಿಯನ್​ ಡಾಲರ್ ಹಣವನ್ನು ಈಗಾಗಲೇ​ ಸಂಪಾದಿಸಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಸಾಕಷ್ಟು ದೂರುಗಳ ಬಂದ ಹಿನ್ನೆಲೆಯಲ್ಲಿ ಪ್ಲೇ ಸ್ಟೋರ್​ನಿಂದ ಆಯಪ್​ ಅನ್ನು ತೆಗೆದುಹಾಕಲಾಗಿದೆ. ಆದರೆ, ಈಗಾಗಲೇ ಡೌನ್​ಲೋಡ್​ ಮಾಡಿಕೊಂಡು ಲಾಗ್​ ಆಫ್​ ಮಾಡದೇ ಅನ್​ಇನ್​ಸ್ಟಾಲ್​ ಮಾಡಿದ್ದರೆ, ಅಂತವರ ಖಾತೆಗೆ ಕನ್ನ ಗ್ಯಾರೆಂಟಿ ಎನ್ನಲಾಗುತ್ತಿದೆ. ಹೀಗಾಗಿ ನೀವೇನಾದರೂ ಒಮ್ಮೆ ಬಳಸಿದ್ದರೆ, ಮತ್ತೊಮ್ಮೆ ಪರೀಕ್ಷಿಸಿಕೊಳ್ಳುವುದು ಒಳ್ಳೆಯದು. 

 

మరింత సమాచారం తెలుసుకోండి: