ರಚಿತಾ ರಾಮ್ ಇದೀಗ ಬಹುಬೇಡಿಕೆಯ ನಟಿ. ಹೌದು ಹೀಗಾಗಿಯೇ ಒಂದೊಂದಾಗಿಯೇ ಚಿತ್ರಗಳು ಹುಡುಕಿಕೊಂಡು ಬರುತ್ತಿವೆ. ಇದೇ ವಾರದಲ್ಲಿ ರಚಿತಾ ರಾಮ್ ಅಭಿನಯದ ಐ ಲವ್ ಯೂ ಚಿತ್ರ ತೆರೆ ಕಾಣಲಿದೆ. ಈ ಜೊತೆಗೆ ಮತ್ತೊಂದು ಸಿಹಿ ಸುದ್ದಿಯನ್ನು ರಚಿತಾ ನೀಡಿದ್ದಾರೆ.

 

 

ಹೌದು, ರಚಿತಾ ರಾಮ್ ಇದೀಗ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ಪ್ರೇಮ್ ನಿರ್ದೇಶನದ ಹಾಗೂ ರಕ್ಷಿತಾ ಪ್ರೇಮ್ ನಿರ್ಮಾಣದ ಚಿತ್ರ  ಏಕಲವ್ಯ ದಲ್ಲಿ ಅಭಿನಯಿಸಲಿದ್ದಾರೆ‌. ಈ ಚಿತ್ರದಲ್ಲಿ ರಕ್ಷಿತಾ ಪ್ರೇಮ್ ಅವರ ಸಹೋದರ ರಾಣಾ ನಾಯಕ ನಟನಾಗಿ ಅಭಿನಯಿಸಲಿದ್ದಾರೆ‌. 

 

 

ರಾಣಾ ಅವರಿಗೆ ಇದು ಮೊದಲ ಚಿತ್ರ. ತೀರ ಇತ್ತೀಚೆಗಷ್ಟೇ ಸಿನಿಮಾದ ಮಹೂರ್ತವೂ ನೆರವೇರಿತ್ತು. ಈ ಚಿತ್ರತಂಡದ ಜೊತೆ ಇದೀಗ ರಚಿತಾ ರಾಮ್ ಜೊತೆಯಾಗಿದ್ದಾರೆ. ಟಾಮ್ ಬಾಯ್ ಪಾತ್ರದಲ್ಲಿ ರಚಿತಾ ಮಿಂಚಲಿದ್ದಾರೆ. 

 

మరింత సమాచారం తెలుసుకోండి: