ಬೆಂಗಳೂರು: ಪೊಲೀಸ್ ಅಧಿಕಾರಿಯೊಬ್ಬರು ರೈಮ್ಸ್  ಹೇಳಿ ಕೊಡ್ತಾರೆ. ಅರೇ ಪೊಲೀಸ್ ಎಲ್ಲಾದ್ರೂ ರೈಮ್ಸ್ ಹೇಳಿ ಕೊಡೋದು ಉಂಟಾ ಎಂಬ ಯಾರಿದು ಏನಿದು ಅರ್ಥವೇ ಆಗ್ತಿಲ್ಲಾ ಅಂತ ಚಿಂತಿಸಬೇಡಿ. ಉತ್ತರ ನಾವ್ ಹೇಳ್ತೀವಿ ಮುಂದೆ ಓದಿ. 
ನಟ ಅಜಿತ್ ಜಯರಾಜ್  ಈಗ ‘ರೈಮ್ಸ್​’ ಸಿನಿಮಾದ ಮೂಲಕ ಪೂರ್ಣ ಪ್ರಮಾಣದ ಹೀರೋ ಆಗಿ ಬಡ್ತಿ ಪಡೆದಿದ್ದಾರೆ. ಅಜಿತ್ ಕುಮಾರ್ ಜೆ. ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದು, ನಿರ್ವಣದ ಜವಾಬ್ದಾರಿ ಜ್ಞಾನಶೇಖರ್ ಸಿದ್ದಯ್ಯ ಹಾಗೂ ರಮೇಶ್ ಆರ್ಯ ಅವರದ್ದು. ಸ್ಕೆ್ವೕರ್ ಕಾನ್ಸೆಪ್ಟ್ ಬ್ಯಾನರ್​ನಲ್ಲಿ ‘ರೈಮ್ಸ್​’ ಸಿದ್ಧವಾಗುತ್ತಿದೆ. ನಾಯಕಿಯಾಗಿ ಸುಷ್ಮಾ ನಾಯರ್ ನಟಿಸುತ್ತಿದ್ದಾರೆ. ಇನ್ನುಳಿದಂತೆ ಮಿಮಿಕ್ರಿ ಗೋಪಿ, ಅಪರ್ಣಾ, ಚೆನ್ನರಾಜು ಮುಂತಾದವರು ಪಾತ್ರವರ್ಗದಲ್ಲಿದ್ದಾರೆ.


ನಾಯಕ ನಟ ಅಜಿತ್​ಗೆ ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಪಾತ್ರ. ಅಪರಾಧ ಪ್ರಕರಣಗಳ ಸುತ್ತವೇ ಸಾಗುವ ಕಥೆಯನ್ನು ಸಾಧ್ಯವಾದಷ್ಟು ನೈಜವಾಗಿ ಚಿತ್ರಿಸುವ ಪ್ರಯತ್ನ ಮಾಡಲಾಗಿದೆಯಂತೆ. ಹಲವು ಕೊಲೆ ರಹಸ್ಯವನ್ನು ಭೇದಿಸುತ್ತ ಸಾಗುವ ಕಥಾನಾಯಕನಿಗೆ ನೆರವಾಗುವ ಪಾತ್ರದಲ್ಲಿ ಸುಷ್ಮಾ ಕಾಣಿಸಿಕೊಳ್ಳಲಿದ್ದಾರೆ. ಥ್ರಿಲ್ಲರ್ ಮಾದರಿಯ ಈ ಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡುವುದು ಚಾಲೆಂಜಿಂಗ್ ಆಗಿತ್ತು ಎಂಬುದು ತಂಡದ ಸದಸ್ಯರ ಹೇಳಿಕೆ. ಶಕ್ತಿ ಸಂಗೀತ ಸಂಯೋಜನೆ ಮಾಡಿದ್ದರೆ, ಅರ್ಜುನ್ ಛಾಯಾಗ್ರಹಣದ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ.


ತಾಂತ್ರಿಕ ಬಳಗದಲ್ಲಿ ಇರುವ ಬಹುತೇಕರು ಮೂಲತಃ ಕರ್ನಾಟಕದವರಲ್ಲದಿದ್ದರೂ ಕನ್ನಡದ ಮೇಲಿನ ಅಭಿಮಾನಕ್ಕೆ ಈ ಸಿನಿಮಾ ಮಾಡುತ್ತಿದ್ದಾರಂತೆ. ‘ನಾನು ಚೆನ್ನೈ ಮೂಲದವನು. ಆದರೆ ಇರೋದು ಬೆಂಗಳೂರಿನಲ್ಲೇ. ಕಿರುಚಿತ್ರ ಮಾಡಿದ ಅನುಭವ ಇಟ್ಟುಕೊಂಡು ಈ ಸಿನಿಮಾ ಮಾಡಿದ್ದೇನೆ. ತಾಂತ್ರಿಕವಾಗಿ ಹೊಸ ಅಂಶಗಳು ನಮ್ಮ ಸಿನಿಮಾದಲ್ಲಿವೆ. ಅದೇ ನಮ್ಮ ಪ್ಲಸ್ ಪಾಯಿಂಟ್. ಇದರಲ್ಲಿ ಹಾಡುಗಳಿಲ್ಲ, ಕಥೆಯೇ ಇಲ್ಲಿನ ಹೀರೋ. ಫ್ಯಾಮಿಲಿ ಸಮೇತ ಕುಳಿತು ನೋಡಬಹುದಾದ ಚಿತ್ರವಿದು’ ಎಂದು ಮಾಹಿತಿ ನೀಡುತ್ತಾರೆ ನಿರ್ದೇಶಕರು.


ದಶಕದ ಹಿಂದೆ ‘ಮುಂಗಾರು ಮಳೆ’ ಚಿತ್ರ ಭಾರಿ ಯಶಸ್ಸು ಕಂಡಿತ್ತು. ಅದನ್ನೇ ಸ್ಪೂರ್ತಿಯಾಗಿ ಇಟ್ಟುಕೊಂಡು ನಿರ್ವಪಕ ಜ್ಞಾನಶೇಖರ್ ಈ ಸಿನಿಮಾ ನಿರ್ಮಾಣ ಮಾಡುತ್ತಿರುವುದಾಗಿ ಹೇಳಿಕೊಳ್ಳುತ್ತಾರೆ. ಚಿತ್ರವು ರೈಮ್ಸ್ ನಿಂದ ಕೊಲೆ ಕೇಸಾಗಿ ಕುತೂಹಲ ಹುಟ್ಚುಸುತ್ತದಂತೆ ಎಂದು ಮಾತುಗಳು ಕೇಳಿಬಂದಿವೆ.


మరింత సమాచారం తెలుసుకోండి: