ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಬಿಡುಗಡೆಯ 'ಆಯುಷ್ಮಾನ್ ಭವ' ರಿಲೀಸ್ ಡೇಟ್ ಮುಂದೂಡಿಕೆಯಾಗಿದ್ದು,  ಅಭಿಮಾನಿಗಳಿಗೆ ಬೇಸರವಾಗಿದೆಯಂತೆ.  ತಾಂತ್ರಿಕ ದೋಷವೇ ಚಿತ್ರ ಬಿಡುಗಡೆ ಮುಂದೆ ಹೋಗಲು ಕಾರಣ ಎಂದು ನಿರ್ಮಾಪಕರು ತಿಳಿಸಿದ್ದಾರೆ. ಇದರ ಜೊತೆಗೆಯೇ ಮುಂದಿನ ರಿಲೀಸ್ ದಿನಾಂಕ ಸದ್ಯದಲ್ಲೇ ತಿಳಿಸಲಿದ್ದಾರೆ ಎಂದಿದ್ದಾರೆ.  ಆಯುಷ್ಮಾನ್ ಭವ ಮುಂದೂಡಿಕೆಯಾಗಿದ್ದರಿಂದ ಶಿವಣ್ಣನ ಅಭಿಮಾನಿಗಳಿಗೆ ಕೊಂಚ ಬೇಸರ ಆಗಬಹುದು. ಈ ಮೊದಲೇ ನಿರ್ಧರಿಸಿದಂತೆ ನವೆಂಬರ್ 1 ರ ಕನ್ನಡ ರಾಜ್ಯೋತ್ಸವ ಸಂಭ್ರಮದಲ್ಲಿ ಶಿವಣ್ಣ ನಟನೆಯ ‘ಆಯುಷ್ಮಾನ್‌ಭವ’ ಸಿನಿಮಾ ಅದ್ದೂರಿಯಾಗಿ ತೆರೆಗೆ ಬರಬೇಕಿತ್ತು.


ಅಭಿಮಾನಿಗಳು ಕೂಡ ಈ ವರ್ಷದ ಕನ್ನಡ ರಾಜ್ಯೋತ್ಸವನ್ನು ಮತ್ತಷ್ಟು ರಂಗಾಗಿ ಆಚರಿಸುವ ಯೋಚನೆಯಲ್ಲಿದ್ದರು. ಆದರೆ, ಇದ್ದಕ್ಕಿದ್ದಂತೆ ಚಿತ್ರದ ಬಿಡುಗಡೆಯ ದಿನಾಂಕವನ್ನು ಮುಂದೂಡಲಾಗಿದೆ. ತಾಂತ್ರಿಕ ಸಮಸ್ಯೆ ಎಂಬುದು ನಿರ್ಮಾಪಕ ಯೋಗೀಶ್ ದ್ವಾರಕೀಶ್ ಅವರು ಕೊಡುವ ಉತ್ತರ. ಅವರೇ ಹೇಳುವಂತೆ, ‘ಅದ್ದೂರಿಯಾಗಿ ಚಿತ್ರವನ್ನು ನಿರ್ಮಿಸಿದ್ದೇನೆ. 20 ಕೋಟಿ ರು. ವೆಚ್ಚದಲ್ಲಿ ಈ ಸಿನಿಮಾ ತಯಾರಾಗಿದೆ. ಗ್ರಾಫಿಕ್ಸ್ ಈ ಚಿತ್ರದ ಪ್ರಮುಖ ಹೈಲೈಟ್. ಪಿ ವಾಸು ಹಾಗೂ ಶಿವರಾಜ್‌ಕುಮಾರ್ ಅವರ ಕಾಂಬಿನೇಷನ್‌ನಲ್ಲಿ ‘ಶಿವಲಿಂಗ’ ಸಿನಿಮಾ ಬಂದು ದೊಡ್ಡ ಮಟ್ಟದಲ್ಲಿ ಬಂದಿತ್ತು. ಸಣ್ಣ ಪುಟ್ಟ ತಪ್ಪುಗಳಿದ್ದರೂ ಪ್ರೇಕ್ಷಕರು ಹಾಗೂ ಅಭಿಮಾನಿಗಳು ಬೇಸರ ಮಾಡಿಕೊಳ್ಳುವ ಸಾಧ್ಯತೆ ಇದೆ. ಟ್ವೀಟರ್ ನಲ್ಲಿ ಬೇಸರವೂ ವ್ಯಕ್ತಪಡಿಸಿದ್ದಾರೆ. 


ಒಂದು ಒಳ್ಳೆಯ ಹಾಗೂ ಅದ್ದೂರಿ ಕಮರ್ಷಿಯಲ್ ಸಿನಿಮಾ ಮಾಡಿದ್ದೇವೆ. ಗ್ರಾಫಿಕ್ಸ್ ಕಾರಣಕ್ಕಾಗಿ ಒಂದಿಷ್ಟು ತಾಂತ್ರಿಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಜತೆಗೆ ಪ್ರಾಣಿಗಳನ್ನು ಬಳಸಿದ್ದೇವೆ. ದೊಡ್ಡ ಮಟ್ಟದಲ್ಲಿ ಚಿತ್ರಕ್ಕೆ ಪ್ರಚಾರ ಬೇಕಿದೆ. ಕ್ವಾಲಿಟಿಗೆ ಹೆಚ್ಚು ಮಹತ್ವ ಕೊಡಬೇಕು.. ಈ ಎಲ್ಲ ಕಾರಣಗಳಿಗೆ ಚಿತ್ರದ ಬಿಡುಗಡೆಯ ದಿನಾಂಕ ಮುಂದೂಡುತ್ತಿದ್ದೇವೆ ಎನ್ನುತ್ತಾರೆ ಯೋಗೀಶ್ ದ್ವಾರಕೀಶ್.ಹಾಗಾದರೆ ಮತ್ತೆ ಸಿನಿಮಾ ಯಾವಾಗ ಬಿಡುಗಡೆ ಎನ್ನುವ ಕುತೂಹಲಕ್ಕೆ ಕನಿಷ್ಠ ಎರಡು ವಾರ ಕಾಯಬೇಕು. ಎಲ್ಲವೂ ಅಂದುಕೊಂಡಂತೆ ಆದರೆ ನವೆಂಬರ್ ತಿಂಗಳಲ್ಲೇ ಸಿನಿಮಾ ತೆರೆ ಮೇಲೆ ಮೂಡಲಿದೆ. ಅನಂತ್‌ನಾಗ್, ಪ್ರಭು ಮುಂತಾದ ದಿಗ್ಗಜರ ತಾರಾಗಣ ಇರುವ ಸಿನಿಮಾ. ಚಿತ್ರದ ಮೇಲೆ ಭಾರೀ ನಿರೀಕ್ಷೆಯಿದ್ದು ಬಿಡುಗಡೆಯ ಕ್ಷಣಕ್ಕಾಗಿ ಅಭಿಮಾನಿಗಳು ಕಾತರರಾಗಿದ್ದಾರೆ.


మరింత సమాచారం తెలుసుకోండి: