ಮುಂಬೈ: ಬಾಲಿವುಡ್ ನ ಕಿಂಗ್ ಖಾನ್, ಐಪಿಎಲ್ ನ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಮಾಲೀಕರಾದ ಖ್ಯಾತ ನಟ ಶಾರುಖ್ ಖಾನ್ ಅವರಿಗೆ ಶನಿವಾರವಾದ ಇಂದು 54ರ ಹುಟ್ಟು ಹಬ್ಬದ ಸಂಭ್ರಮ. ಬಾಲಿವುಡ್ ಮಾತ್ರವಲ್ಲದೇ, ಸೌತ್ ಸಿನಿ ಇಂಡಸ್ಟ್ರಿಯಲ್ಲಿಯೇ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಹೊಂದಿರುವ ಶಾರುಕ್ ಗೆ ಶುಭಾಶಯಗಳ ಸುರಿಮಳೆಯೇ ಸುರಿಸಿದ್ದಾರೆ ಅಭಿಮಾನಿಗಳು. ಅದರಲ್ಲೂ ಶಾರುಕ್ ಆತ್ಮೀಯರು, ಸೆಲೆ ಬ್ರೆಟಿಗಳು ಟ್ವೀಟ್ ಮಾಡುವ ಮೂಲಕ ಬರ್ತಡೇ ವಿಶಸ್ ತಿಳಿಸಿದ್ದಾರೆ. ಆದ್ದರಿಂದ ಶನಿವಾರ ಸಾಮಾಜಿಕ ಜಾಲತಾಣಗಳ ತುಂಬೆಲ್ಲಾ ಬರ್ತಡೇ ಯ ಪೋಟೋಸ್, ವಿಶಸ್ ಗಳೇ ಹರಿದಾಡುತ್ತಿವೆ.


ತಮ್ಮ ನೆಚ್ಚಿನ ನಟ ಶಾರುಕ್ ಹುಟ್ಟುಹಬ್ಬ ಆಚರಿಸಲು ಶುಕ್ರವಾರ ಮಧ್ಯರಾತ್ರಿಯೇ ಅಭಿಮಾನಿಗಳು ಮುಂಬೈನಲ್ಲಿರುವ ಶಾರುಕ್ ಅವರ ಮನ್ನಾತ್​ ನಿವಾಸದ ಮುಂದೆ ಜಮಾಯಿಸಿದ್ದರು. ಅಭಿಮಾನಿಗಳಿಗೆ ನಿರಾಸೆ ಮಾಡದ ಶಾರುಕ್, ಮನ್ನಾತ್ ನಿವಾಸದ ಬಾಲ್ಕನಿ ಮೇಲೆ ಬಂದು ಅವರತ್ತಾ ಕೈಬೀಸಿ, ಕೆಲಕಾಲ ಅವರೊಟ್ಟಿಗೆ ಕಳೆದರು. ಅಷ್ಟೇ ಅಲ್ಲದೆ ಶಾರುಕ್​ಗೆ ಜಾಲತಾಣದಲ್ಲಿ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಕರಣ್​ ಜೋಹಾರ್​, ಫರ್ಹಾ ಖಾನ್​, ಅಜಯ್​ ದೇವಗನ್​, ರಾಕುಲ್​ ಪ್ರೀತ್​ ಸಿಂಗ್​, ಕಪಿಲ್​ ಶರ್ಮಾ ಸೇರಿ ಸಿನಿಮಾ ಇಂಡ ಸ್ಟ್ರಿಯ ನಟ ನಟಿಯರು ಶುಭಾಶಯ ಕೋರುತ್ತಿದ್ದಾರೆ.

ಇದರೊಂದಿಗೆ ಜಾಲತಾಣದಲ್ಲಿ ಹ್ಯಾಪಿ ಬರ್ತಡೇ ಎಸ್.ಆರ್.ಕೆ ಎಂಬ ನೂತನ  ಹ್ಯಾಸ್​ಟ್ಯಾಗ್​ನೊಂದಿಗೆ ಅಭಿಮಾನಿಗಳು ಟ್ರೆಂಡ್​ ಶುರು ಮಾಡಿದ್ದಾರೆ.  ಸಿನಿಮಾ ವಿಚಾರಕ್ಕೆ ಬಂದರೆ ಶಾರುಕ್​ ಕೊನೆಯದಾಗಿ ಆನಂದ್​ ಎಲ್​ ರೈ ನಿರ್ದೇಶನದ ಝೀರೋ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಅಷ್ಟಾಗಿ ಸದ್ದು ಮಾಡಲಿಲ್ಲ. ಆದರೆ, ತಮ್ಮ ಮುಂದಿನ ಚಿತ್ರಕ್ಕೆ ಸಿದ್ಧತೆ ನಡೆಸುತ್ತಿದ್ದು, ಯಾವ ಚಿತ್ರ ಎಂಬುದನ್ನು ಇನ್ನು ಬಹಿರಂಗ ಪಡಿಸಿಲ್ಲ. ಶನಿವಾರ ಬರ್ತಡೇ ಸ್ಪೆಷಲ್ ಆಗಿ ಹೊಸ ಚಿತ್ರದ ಟೈಟಲ್ ಘೋಷಣೆ ಮಾಡುವ ಸಾಧ್ಯತೆಯಿದೆ. ಅಭಿಮಾನಿಗಳ ಅಪಾರ ಪ್ರೀತಿ, ವಿಶಸ್ ಗಳಿಗೆ ಕಿಂಗ್ ಖಾನ್ ಶಾರುಕ್  ಫುಲ್ ಫಿದಾ ಆಗಿದ್ದಾರೆ.


మరింత సమాచారం తెలుసుకోండి: