ಕನ್ನಡದ ಕಂಪನ್ನು, ಕನ್ನಡ ಭಾಷೆಯನ್ನು ಕೆಜಿಎಫ್ ಚಿತ್ರದ ನಂತರ ಮತ್ತೊಮ್ಮೆ ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಮಿನುಗುವಂತೆ ಮಾಡಲು ರಕ್ಷಿತ್ ಶೆಟ್ಟಿ ಅಭಿನಯದ 'ಅವನೇ ಶ್ರೀಮನ್ನಾರಾಯಣ' ಚಿತ್ರ ರಿಲೀಸ್‌ಗೆ ರೆಡಿಯಾಗಿದೆ. ಅಭಿಮಾನಿಗಳಿಗಾಗಿ ರಕ್ಷಿತ್ ಶೆಟ್ಟಿ ಮತ್ತು ಟೀಂ ಸ್ಪರ್ಧೆಯೊಂದನ್ನು ಏರ್ಪಡಿಸಿದೆ. ನೀವೂ ಭಾಗವಹಿಸಿ. ಕ್ಯಾಶ್ ಪ್ರೈಸ್ ಗೆಲ್ಲಿ. 
 
ಸ್ಯಾಂಡಲ್‌ವುಡ್ ಕ್ರಿಯೆಟಿವ್ ನಿರ್ದೇಶಕ, ಕಿರಿಕ್ ಹುಡುಗ ರಕ್ಷಿತ್ ಶೆಟ್ಟಿ ಬಹು ನಿರೀಕ್ಷಿತ  'ಅವನೇ ಶ್ರೀಮನ್ನಾರಾಯಣ' ಚಿತ್ರ ಇದೇ ತಿಂಗಳ 27 ಕ್ಕೆ ರಿಲೀಸ್ ಆಗಲಿದೆ.  ಈಗಾಗಲೇ ಟ್ರೇಲರ್ ಹಾಗೂ ಟೀಸರ್ ಗಮನ ಸೆಳೆದಿದೆ.  ಪ್ರಮೋಶನ್ ಕೆಲಸವೂ ಭರ್ಜರಿಯಾಗಿಯೇ ಇದೆ.  ಪ್ರಮೋಶನ್‌ಗೆ ಗಿಮಿಕ್‌ಗಾಗಿ 'ಅವನೇ ಶ್ರೀಮನ್ನಾರಾಯಣ' ತಂಡ ಒಂದು ಸ್ಪರ್ಧೆ ಏರ್ಪಡಿಸಿದೆ.  ಈಗೀಗ ಪ್ರಮೋಶನ್ ಗಿಮಿಕ್ ಆಗಿ ವೀಕ್ಷಕರಿಗೆ ಸ್ಪರ್ಧೆ ಏರ್ಪಡಿಸಿ ಅವರು ಹೆಚ್ಚೆಚ್ಚು ಭಾಗವಹಿಸುವಂತೆ ಮಾಡುವುದು. ಅದರಂತೆ ರಕ್ಷಿತ್ ಮತ್ತು ತಂಡ ಅದೇ ಕೆಲಸಕ್ಕೆ ಮುಂದಾಗಿದೆ.
 
ಚಿತ್ರದ ಟ್ರೇಲರ್‌ನಲ್ಲಿ ಬರುವ 5 ಸಂಖ್ಯೆಗಳನ್ನು ಜೋಡಿಸಿ ಒಂದು ಸರಿಯಾದ ಸಂಖ್ಯೆ ಮಾಡಬೇಕು. ಸರಿಯಾಗಿ ಮಾಡಿದ ಲಕ್ಕಿ ವಿನ್ನರ್‌ಗೆ ಕ್ಯಾಶ್ ಪ್ರೈಸ್ ಸಿಗಲಿದೆ. ಅವನೇ ಶ್ರೀಮನ್ನಾರಾಯಣದಲ್ಲಿ ರಕ್ಷಿತ್ ಶೆಟ್ಟಿಗೆ ಶಾನ್ವಿ ಶ್ರೀವಾಸ್ತವ್ ನಾಯಕಿಯಾಗಿ ನಟಿಸಿದ್ದಾರೆ. ರಕ್ಷಿತ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಕ್ಷಿತ್ ಸಿನಿಮಾ ಎಂದರೆ ಸಾಕು ಅಲ್ಲಿ ಏನಾದರೂ ಓಮದು ಸ್ಪೆಷಲ್ ಇದ್ದೇ ಇರುತ್ತದೆ. ಸಹಜವಾಗಿ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಾಗಿದೆ.
 
ಇತ್ತೀಚೆಗಷ್ಟೇ ಲಕ್ಷ್ಮಿ ರೂಪದಲ್ಲಿರುವ ಶಾನ್ವಿ ಹಾಗೂ ಲಕ್ಷ್ಮಿ ಹಿಂದೆ ಬಿದ್ದಿರುವ ರಕ್ಷಿತ್ ಶೆಟ್ಟಿ ಅವರ ಪೋಸ್ಟ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿತ್ತು. ಆ ಒಂದು ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಸಖತ್ ಸದ್ದು ಮಾಡಿತ್ತು. ಇದಲ್ಲದೇ ಇನ್ನು ಅತೀ ಶೀಘ್ರದಲ್ಲಿ ಚಿತ್ರ ತಂಡದಿಂದ ಹಾಡೊಂದನ್ನು ಬಿಡುಗಡೆ ಮಾಡುವ ಲೆಕ್ಕಾಚಾರದಲ್ಲಿದೆ. ಈ ಹಾಡು ಕೂಡ ಸ್ಯಾಂಡಲ್ ವುಡ್ ನಲ್ಲಿ ಭಾರೀ ಹವಾ ಸೃಷ್ಟಿಸುವಲ್ಲಿ ಯಸಸ್ವಿಯಾಗುತ್ತದೆ ಎಂದು ನಿರ್ದೇಶಕರ ಜೊತೆಗೆ ರಕ್ಷಿತ್ ಶೆಟ್ಟಿಯೂ ಸಹ ಈ ಮಾತನ್ನು ಹೇಳಿದ್ದಾರೆ.

మరింత సమాచారం తెలుసుకోండి: