ಟಾಲಿವುಡ್ ನ ಟಾಪ್ ನಂಬರ್ 01 ನಟಿ ಸಮಂತಾ ಅಕ್ಕಿನೇನಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುವ ಮುನ್ಸೂಚನೆಗಳು ಸಿಕ್ಕಿವೆ. ಈ ಹಿಂದೆ ನಟ ಸುದೀಪ್ ಜೊತೆ ಟಾಲಿವುಡ್‌ನ ಪ್ರಖ್ಯಾತ ನಟಿ ಸಮಂತಾ ಅಕ್ಕಿನೇನಿ 'ಈಗ' ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರ ಸಖತ್ ಹಿಟ್ ಆಗಿತ್ತು. ಸುದೀಪ್ ಬಹುಭಾಷಾ ನಟ. ಹಿಂದಿಯಲ್ಲಿ ಇವರ ಅಭಿನಯದ 'ದಬಾಂಗ್ 3' ಸಿನಿಮಾ ಡಿಸೆಂಬರ್ 20ಕ್ಕೆ ರಾಜ್ಯಾದ್ಯಂತ ರಿಲೀಸ್ ಆಗುತ್ತಿದೆ. 
 
ಸ್ಯಾಂಡಲ್ ವುಡ್ ನ ಅನುಪ್ ಭಂಡಾರಿ ಅವರ 'ಫ್ಯಾಂಟಮ್' ಸಿನಿಮಾದಲ್ಲಿ ಕಿಚ್ಚ ಸುದೀಪ್ ಜೊತೆಗೆ ಸಮಂತಾ ನಟಿಸಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ತೆಲುಗಿನ 'ಈಗ' ಸಿನಿಮಾಕ್ಕೆ 'ಬಾಹುಬಲಿ' ಖ್ಯಾತಿಯ ನಿರ್ದೇಶಕ ರಾಜಮೌಳಿ ನಿರ್ದೇಶನ ಮಾಡಿದ್ದರು. ಈ ಚಿತ್ರದಲ್ಲಿ ಅನುಪ್ ಭಂಡಾರಿ ಸಹೋದರ ನಿರೂಪ್ ಭಂಡಾರಿ ಕೂಡ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಇದು ನಿಜವೇ ಆಗಿದ್ದಲ್ಲಿ ನಿರೂಪ್ ಭಂಡಾರಿ ಅವರಿಗೆ ಇದು ನಾಲ್ಕನೇ ಚಿತ್ರ. 'ರಂಗಿ ತರಂಗ, ರಾಜರಥ, ಆದಿಲಕ್ಷ್ಮೀ ಪುರಾಣ' ಚಿತ್ರದಲ್ಲಿ ನಟಿಸಿದ್ದಾರೆ. 'ರಂಗಿ ತರಂಗ' ನಂತರ ನಿರೂಪ್‌ಗೂ ಕೂಡ ಅಷ್ಟೊಂದು ದೊಡ್ಡಮಟ್ಟದ ಯಶಸ್ಸು ಸಿಕ್ಕಿತ್ತು. 
 
ಕನ್ನಡದ ಬ್ಲಾಕ್ ಬಸ್ಟರ್ ಸಿನಿಮಾ 'ಯೂ ಟರ್ನ್‌' ಸಿನಿಮಾದ ತೆಲುಗು, ತಮಿಳು ರಿಮೇಕ್‌ನಲ್ಲಿ ನಟಿ ಸಮಂತಾ ನಟಿಸಿದ್ದರು. ಈ ಚಿತ್ರ ಆ ಎರಡೂ ಭಾಷೆಗಳಲ್ಲೂ ಕೂಡ ಕಮರ್ಷಿಯಲ್ ಹಿಟ್ ನೀಡಿತ್ತು. ಸಮಂತಾ '96' ಚಿತ್ರ ರಿಲೀಸ್‌ಗಾಗಿ ಕಾಯುತ್ತಿದ್ದಾರೆ. ಇದು ತಮಿಳು ಸಿನಿಮಾದ ರಿಮೇಕ್ ಆಗಿದ್ದು, ಸಮಂತಾ ಫಿಮೇಲ್ ಲೀಡ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರದ ಶೂಟಿಂಗ್ ನಡೆದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸವೊಂದು ಬಾಕಿಯಿದೆಯಂತೆ. ಅಷ್ಟೇ ಅಲ್ಲದೆ ಸಮಂತಾ ಅಮೇಜಾನ್ ಪ್ರೈಮ್ ವಿಡಿಯೋದ 'ದಿ ಫ್ಯಾಮಿಲಿ ಮ್ಯಾನ್ ಸೀಸನ್ 2'ದಲ್ಲಿ ಕಾಣಿಸಿಕೊಳ್ಳುವ ತಯಾರಿಯಲ್ಲಿದ್ದಾರಂತೆ. ಹೀಗಾಗಿ ಈ ಮಧ್ಯೆ ಅವರು ಕನ್ನಡಕ್ಕೆ ಬರ್ತಾರಾ ಎಂಬ ಸಂದೇಹವಿದೆ. ಆದರೆ ಮೂಲಗಳ ಪ್ರಕಾರ 'ಫ್ಯಾಂಟಮ್' ಚಿತ್ರ ನಾಯಕಿ ವಿಚಾರದಲ್ಲಿ ಇನ್ನೂ ಫೈನಲೈಸ್ ಮಾಡಿಲ್ಲ. ಹೀರೋಯಿನ್ ಅಧಿಕೃತ ಘೋಷಣೆಗಾಗಿ ಕಾಯಬೇಕಿದ್ದು ಸಮಂತಾ ಆಗಮನಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.

మరింత సమాచారం తెలుసుకోండి: