ಬೆಂಗಳೂರು: ಯೋಗರಾಜ್ ಭಟ್, ನಿರ್ದೇಶಕ ನಟನೆಂದು ನಮಗೆಲ್ಲಾ ಗೊತ್ತೇ ಇದೆ. ಇದೀಗ ಯೋಗರಾಜ್ ಭಟ್ ಹಾಗೂ ಬಿಗ್ ಬಾಸ್ ನಲ್ಲಿರುವ ಚೈತ್ರಾ ಕೊಟ್ಟೂರು ಅವರಿಬ್ಬರ ಮದ್ಯದ ಸಂಬಂಧವನ್ನು ಏನೆಂದು ಬಿಚ್ಚಿಟ್ಟಿದ್ದಾರೆ. ಅದೇನು ಅವರ ಸಂಬಂದ ಎನ್ನುವ ಎಕ್ಸಕ್ಲೂಸಿವ್ ಮಾಹಿತಿ ಇಲ್ಲಿದೆ ನೋಡಿ. 
 
ಬಿಗ್ ಬಾಸ್ ಮನೆಯಲ್ಲಿ ಈಗ ಭಾಗ್ಯದ ಲಕ್ಷ್ಮಿ ಬಾರಮ್ಮ ಟಾಸ್ಕ್ ಮುಗಿದಿದ್ದು ಹೆಚ್ಚು ಪಾಯಿಂಟ್ಸ್ ಪಡೆಯುವ ಮೂಲಕ ಪ್ರಿಯಾಂಕಾ ಮತ್ತು ಕಿಶನ್ ಜೋಡಿ ಒಂದು ಲಕ್ಷ ರೂಪಾಯಿ ನಗದು ಬಹುಮಾನವನ್ನು ತನ್ನದಾಗಿಸಿಕೊಂಡಿದೆ. ಈ ಬಹುಮಾನದ ಮೊತ್ತವನ್ನು ಗ್ರ್ಯಾಂಡ್ ಫಿನಾಲೆಯ ದಿನ ವೇದಿಕೆ ಮೇಲೆ ವಿತರಿಸಲಾಗುತ್ತದೆ ಎಂದು ಬಿಗ್ ಬಾಸ್ ಘೋಷಿಸಿದ್ದಾರೆ. 
ಭಾಗ್ಯದ ಲಕ್ಷ್ಮಿ ಬಾರಮ್ಮ ಟಾಸ್ಕ್‌ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿರುವ ಶೈನ್ ಶೆಟ್ಟಿ ಹಾಗೂ ಚೈತ್ರಾ ಕೋಟೂರ್ ಅವರ ಕೊರಳಿಗೆ ಕಳಪೆ ಬೋರ್ಡ್ ಬಿದ್ದಿದೆ.
 
 ಅಷ್ಟೇ ಅಲ್ಲದೆ ಈ ಜೋಡಿಯನ್ನು ಜೈಲಿಗೂ ಕಳುಹಿಸಲಾಗಿದೆ. ಜೈಲಿನಲ್ಲಿ ಶೈನ್ ಹಾಗೂ ಚೈತ್ರಾ ನಡುವೆ ಒಂದಷ್ಟು ತಮಾಷೆ ಪ್ರಸಂಗಗಳೂ ನಡೆದವು. ಚೈತ್ರಾರನ್ನು ಶೈನ್ ಬೆದರಿ ಸುವಂತೆ ನಟಿಸಿ ಬೆಚ್ಚಿ ಬೀಳಿಸಿದ್ದಾರೆ. ಟಾಸ್ಕ್ ಒಂದರಲ್ಲಿ ಯೋಗರಾಜ್ ಭಟ್ ಜೊತೆಗಿನ ಒಡನಾಡದ ಬಗ್ಗೆ ಹೇಳಿದ್ದಾರೆ ಚೈತ್ರಾ ಕೋಟೂರ್.
 
 "ನನ್ನ ಜೀವನದಲ್ಲಿ ನನ್ನೆಲ್ಲ ಗೊಂದಲಗಳನ್ನು ಬಗೆಹರಿಸಿದ ಗುರುಗಳು ಎಂದರೆ ನಿರ್ದೇಶಕರಾದ ಯೋಗರಾಜ್ ಭಟ್ ಸರ್. ಸಿಕ್ಕಾಪಟ್ಟೆ ಪರಿಶುದ್ಧ ವ್ಯಕ್ತಿಗೆ ಧನ್ಯವಾದ ಅರ್ಪಿಸುವ ಟಾಸ್ಕ್‌ನಲ್ಲಿ ಮಾತ ನಾಡುತ್ತಾ, ತನ್ನ ಜೀವನದಲ್ಲಿನ ಪರಿಶುದ್ಧ ವ್ಯಕ್ತಿ ಭಟ್ಟರು ಎಂದರು. ಒಮ್ಮೆ ರಾತ್ರಿ ಕಚೇರಿ ಯಿಂದ ರಾತ್ರಿ ನಾನೊಬ್ಬಳೇ ಹೋಗಬೇಕಾಗಿತ್ತು. ಆಗ ರಾತ್ರಿ ಸುಮಾರು 11 ಗಂಟೆಯಾಗಿತ್ತು. ಸ್ವಲ್ಪ ದೂರ ಹೋದ ಬಳಿಕ ಅವರೇ ನನ್ನ ಫಾಲೋ ಮಾಡಿಕೊಂಡು ಬಂದು ಮನೆತನಕ ಡ್ರಾಪ್ ನೀಡಿದ್ದರು. ಸುಮಾರು ಕನ್ಫೂಶನ್ ಇತ್ತು, ಕನ್ಫೂಶನ್ ಈಸ್ ಹ್ಯಾಪಿನೆಸ್ ಎಂದು ಹೇಳಿ ನನ್ನೆಲ್ಲಾ ಗೊಂದಲಗಳಿಗೆ ತೆರೆ ಎಳೆದರು. ನನ್ನ ಬದುಕಿನ ವಿಶೇಷ ವ್ಯಕ್ತಿ ಎಂದಿದ್ದಾರೆ ಚೈತ್ರಾ ಕೋಟೂರ್.

మరింత సమాచారం తెలుసుకోండి: