ಸ್ಯಾಂಡಲ್ ವುಡ್ ನಲ್ಲಿ ಕೆಜಿಎಫ್ ನಂತೆ ಅಬ್ಬರಿಸಿ ಬೊಬ್ಬಿರಿಯಲು ಮತ್ತೊಂದು ಚಿತ್ರ ಸಿದ್ದವಾಗುತ್ತಿದೆ. ಅದೇ ಉಪ್ಪಿಯ ಕಬ್ಜ. ನಾಯಕಿ ಆಯ್ಕೆಯನ್ನ ಪಕ್ಕಕ್ಕಿಟ್ಟಿರೋ ಆರ್​.ಚಂದ್ರು ಟೆಕ್ನೀಷಿಯನ್ಸ್​​​ ಮತ್ತು ಇನ್ನುಳಿದ ಪಾತ್ರವರ್ಗದ ಆಯ್ಕೆ ಮಾಡ್ಕೊಂಡಿದ್ದಾರೆ. ಕಂಪ್ಲೀಟ್​ ಚಿತ್ರವನ್ನ ಸೆಟ್​​ನಲ್ಲೇ ಶೂಟ್​ ಮಾಡೋ ಪ್ಲಾನ್​ ನಡುಯುತ್ತಿದೆ. 
 
ಆರ್​.ಚಂದ್ರು ಮತ್ತು ರಿಯಲ್​ ಸ್ಟಾರ್​ ಉಪೇಂದ್ರ ಕ್ರೇಜಿ ಕಾಂಬಿನೇಷನ್​​ನಲ್ಲಿ ಬರ್ತಿರೋ ಔಟ್​ ಅಂಡ್​ ಔಟ್​ ಮಾಸ್​ ಎಂಟ್ರಟ್ರೈನರ್​​ ಕಬ್ಜ. ಕೆಲದಿನಗಳ ಹಿಂದೆ ಭರ್ಜರಿ ಫೋಟೋಶೂಟ್​​ ಮಾಡಿ ಮುಹೂರ್ತ ನೆರವೇರಿಸಿದ್ದ ಚಿತ್ರತಂಡ, ಈಗ ಚಿತ್ರೀಕರಣಕ್ಕೆ ಅಣಿಯಾಗ್ತಿದೆ. ಹೊಸ ವರ್ಷದಲ್ಲಿ ಕಬ್ಜ ಚಿತ್ರದ ಫಸ್ಟ್​ ಶೆಡ್ಯೂಲ್​ ಶೂಟಿಂಗ್​​ ಶುರುವಾಗ್ತಿದೆ. ದೊಡ್ಡ ಮಟ್ಟದಲ್ಲಿ ಈ ಪ್ಯಾನ್ ಇಂಡಿಯಾಸಿನಿಮಾ ನಿರ್ಮಾಣವಾಗ್ತಿದೆ.
 
70-80ರ ದಶಕದ ಅಂಡರ್​ ವರ್ಲ್ಡ್​​​​​ ಸಬ್ಜೆಕ್ಟ್​​​​ ಕಬ್ಜ. ರಿಯಲ್​ ಸ್ಟಾರ್​ ಉಪೇಂದ್ರ ಚಿತ್ರದಲ್ಲಿ ದೊಡ್ಡ ಗ್ಯಾಂಗ್​ಸ್ಟರ್​ ಪಾತ್ರದಲ್ಲಿ ಧೂಳೆಬ್ಬಿಸೋಕ್ಕೆ ರೆಡಿಯಾಗಿದ್ದಾರೆ.ಇಡೀ ಅಂಡರ್​ವರ್ಲ್ಡ್​ನ ಗ್ಯಾಂಗ್​ಸ್ಟರ್​​ ಉಪ್ಪಿ ಕಬ್ಜ ಮಾಡಿಕೊಳ್ಳೋ ಸಿನಿಮಾ ಕಥೆ ಇದು. ಹಾಗಾಗಿ ಉಪ್ಪಿ ಜೊತೆಗೆ ಮತ್ತೊಂದಿಷ್ಟು ಡಾನ್​ಗಳು ಅಬ್ಬರಿಸಲು ರೆಡಿಯಾಗಿದ್ದಾರೆ.  ಕೆಜಿಎಫ್​ ಸಿನಿಮಾ ಮೂಲಕ ದೊಡ್ಡ ಮಟ್ಟದಲ್ಲಿ ಸೌಂಡ್​ ಮಾಡಿದ ತಂತ್ರಜ್ಞರು ಮತ್ತು ಕಲಾವಿದರು ಕಬ್ಜ ಚಿತ್ರಕ್ಕೆ ಕೆಲಸ ಮಾಡ್ತಿದ್ದಾರೆ. ಕಬ್ಜ ಸಿನಿಮಾ ಕೆಜಿಎಫ್​ ಮಾದರಿಯಲ್ಲೇ ಪೀರಿಯಡ್​ ಆ್ಯಕ್ಷನ್​ ಸಿನಿಮಾ ಆಗಿದ್ದು, ಈ ಚಿತ್ರದಲ್ಲಿ ಸಾಕಷ್ಟು ಜನ ವಿಲನ್​ಗಳಿದ್ದಾರೆ. ಕೆಜಿಎಫ್​ ಚಿತ್ರದ ಸಾಂಗ್ಸ್​​ ಮತ್ತು ಬಿಜಿಎಂನಿಂದ ಸೆನ್ಸೇಷನ್​ ಕ್ರಿಯೇಟ್​ ಮಾಡಿರೋ ರವಿಬಸ್ರೂರು ಕಬ್ಜ ಚಿತ್ರಕ್ಕೆ ಮ್ಯೂಸಿಕ್​ ಮಾಡೋದು ಪಕ್ಕಾ ಆಗಿದೆ.
 
ಇನ್ನು ಕೆಜಿಎಫ್​ ತಂಡದಲ್ಲಿ ಕೆಲಸ ಮಾಡಿದ್ದ ಕ್ಯಾಮರಾಮನ್​ ಅರ್ಜುನ್​ ಶೆಟ್ಟಿ, ಆರ್​. ಚಂದ್ರು ಕಬ್ಜ ಚಿತ್ರವನ್ನ ಸೆರೆಹಿಡಿಯೋ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಕೆಜಿಎಫ್​ ಚಿತ್ರದಲ್ಲಿ ಅವಿನಾಶ್​, ಆ್ಯಂಡ್ರ್ಯೂಸ್ ಪಾತ್ರದ ಮೂಲಕ ಗಮನ ಸೆಳೆದಿದರು. ಅವರ ಲುಕ್ಕು, ಖದರ್ರು ಪ್ರೇಕ್ಷಕರಿಗೆ ಸಖತ್​ ಕಿಕ್​ ಕೊಟ್ಟಿತ್ತು. ಅವಿನಾಶ್​​​ ಈಗ ಕಬ್ಜ ಚಿತ್ರದಲ್ಲಿ ಉಪ್ಪಿ ಎದುರು ಆರ್ಭಟಿಸೋಕ್ಕೆ ಬರ್ತಿದ್ದಾರೆ. ಚಂದ್ರು ಬಹಳ ಗ್ರ್ಯಾಂಡಾಗಿ ಚಿತ್ರವನ್ನ ಕಟ್ಟಿಕೊಡ್ತಿದ್ದು, ಮುಂದಿನ ವರ್ಷಾಂತ್ಯಕ್ಕೆ ಕಬ್ಜ ಚಿತ್ರ ತೆರೆಗಪ್ಪಳಿಸಲಿದೆ.

మరింత సమాచారం తెలుసుకోండి: