ಬಾಲಿವುಡ್ ಖ್ಯಾತ ನಟ ಶಾರುಕ್ ಖಾನ್ ಗೆ ಇದೀಗ ಸಾಮಾಜಿಕ ಜಾಲತಾಣವಾದ ಟ್ವೀಟರ್ ನಲ್ಲಿ ಅಭಿಮಾನಿಗಳು ಆತ್ಮಹತ್ಯೆಯ ಬೆದರಿಕೆ ಒಡ್ಡಿದ್ದಾರೆ. ಹೌದು, ಶಾಕ್ ಆದರೂ ನಂಬಲೇ ಬೇಕಾದ ವಿಷಯವಿದು. ಈ ಬಗೆಗಿನ ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ ನೋಡಿ. 
 
ಬುಧವಾರ ಅಂದರೆ ಜನವರಿ 1ರಂದು ಹೊಸ ಸಿನಿಮಾ ಘೋಷಿಸಲಿಲ್ಲ ಎಂದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಟ್ವಿಟರ್‌ನಲ್ಲಿ ಶಾರುಖ್ ಖಾನ್ ಅಭಿಮಾನಿಗಳು ಬೆದರಿಕೆ ಒಡ್ಡಿದ್ದಾರೆ. ಝೀರೋ ಸಿನಿಮಾ ಬಳಿಕ ಯಾವುದೇ ಚಿತ್ರವನ್ನು ಘೋಷಿಸದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದು #WeWantAnnouncementSRK ಎಂಬ ಹ್ಯಾಶ್ ಟ್ಯಾಗ್ ಸೃಷ್ಟಿಸಿದ್ದು ಟ್ರೆಂಡ್ ಆಗಿ ಸಿನಿಮಾ ಘೋಷಿಸಲೇ ಬೇಕೆಂದು ಪಟ್ಟು ಹಿಡಿದಿದ್ದಾರೆ. 
 
ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಬಣ್ಣದ ಜಗತ್ತಿನಿಂದ ಸ್ವಲ್ಪ ಬ್ರೇಕ್ ತೆಗೆದುಕೊಂಡಿರುವುದು ಗೊತ್ತೇ ಇದೆ. ಕಳೆದ ವರ್ಷ ರಿಲೀಸ್ ಆದ 'ಝೀರೋ' ಸಿನಿಮಾ ಬಳಿಕ ಇದುವರೆಗೂ ಅವರ ಹೊಸ ಚಿತ್ರಕ್ಕೆ ಸಂಬಂಧಿಸಿದಂತೆ ಯಾವುದೇ ಘೋಷಣೆ ಹೊರಬಿದ್ದಿಲ್ಲ. ಈ ಹಿನ್ನೆಲೆಯಲ್ಲಿ ಅಭಿಮಾನಿಗಳು ತುಂಬಾ ಬೇಸರಗೊಂಡಿದ್ದಾರೆ. ಶಾರುಖ್ ಖಾನ್ ಶೀಘ್ರದಲ್ಲೇ ಅಟ್ಲಿ ನಿರ್ದೇಶನದ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಕಳೆದ ಕೆಲ ಸಮಯದಿಂದ ಸದ್ದು ಮಾಡುತ್ತಲೇ ಇದೆ. ಆದರೆ ಶಾರುಖ್ ಮಾತ್ರ ಈ ಬಗ್ಗೆ ತುಟಿ ಬಿಚ್ಚಲಿಲ್ಲ. ಅಭಿಮಾನಿಗಳೂ ಕಾತುರದಿಂದ ಕಾಯುತ್ತಲೇ ಇದ್ದಾರೆ. ಆದರೆ ನಿರಾಸೆ ಮಾತ್ರ ತಪ್ಪಿದ್ದಲ್ಲ.
 
ಈ ಹಿನ್ನೆಲೆಯಲ್ಲಿ ಶಾರುಖ್ ಅಭಿಮಾನಿಗಳು ಟ್ವಿಟರ್‍‌ನಲ್ಲಿ ಹೊಸ ವರ್ಷಕ್ಕಾದರೂ ಹೊಸ ಸಿನಿಮಾ ಘೋಷಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಜೊತೆಗೆ #WeWantAnnouncementSRK ಎಂಬ ಹ್ಯಾಶ್ ಟ್ಯಾಗ್ ಸೃಷ್ಟಿಸಿ ಟ್ವಿಟರ್‌ನಲ್ಲಿ ಟ್ರೆಂಡ್ ಮಾಡಿದ್ದಾರೆ.
 
ಶಾರುಖ್‌ರನ್ನು 'ಅಂಕಲ್' ಎಂದು ಕರೆದ ನಟಿ, ಅಭಿಮಾನಿಗಳು ಗರಂ
ಅಭಿಮಾನಿಯೊಬ್ಬರು ಟ್ವೀಟ್ ಮಾಡಿದ್ದು, "ಶಾರುಖ್ ಸಾರ್ ಇದುವರೆಗೂ ತಾವು ತೆಗೆದುಕೊಂಡ ಬ್ರೇಕ್‍ಗಳು ಸಾಕು. ಝೀರೋ ಸಿನಿಮಾ ಬಳಿಕ ನಾವು ಯಾವುದೇ ಸಿನಿಮಾ ನೋಡಿಲ್ಲ. ಯಾಕೆಂದರೆ ನಿಮ್ಮಿಂದ ಯಾವುದೇ ಸಿನಿಮಾ ಬರಲಿಲ್ಲ. ಕನಿಷ್ಠಪಕ್ಷ ಘೋಷಣೆಯೂ ಆಗಲಿಲ್ಲ. ಈಗಲಾದರೂ ನಿಮ್ಮಿಂದ ಗುಡ್ ನ್ಯೂಸ್ ಬರುತ್ತದೆಂದು ಎದುರು ನೋಡುತ್ತಿದ್ದೇವೆಂದು ಟ್ವೀಟ್ ಮಾಡಿರುವುದು ಇದೀಗ ಎಲ್ಲೆಡೆ ಚರ್ಚೆಗೆ ಕಾರಣವಾಗಿದೆ. 

మరింత సమాచారం తెలుసుకోండి: