ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಲವ್ಲೀ ಹೀರೋ, ಕನಸುಗಾರ ಡಾ. ರವಿಚಂದ್ರ ಅವರ ಹೊಸ ಚಿತ್ರದಲ್ಲಿ ಇದೀಗ ಡಿಂಪಲ್ ಕ್ವೀನ್ ರಚಿತ ರಾಮ್ ಸ್ಪೆಷಲ್ ರೋಲ್ ನಲ್ಲಿ ನಟಿಸುತ್ತಿರುವುದು ತುಂಬಾ ವಿಶೇಷತೆ ಯಾಗಿದೆ. ರವಿಚಂದ್ರನ್‌ ನಿರ್ದೇಶನದ “ರವಿ ಬೋಪಣ್ಣ’ ಚಿತ್ರದಲ್ಲಿ ಸುದೀಪ್‌ ಅತಿಥಿ ನಟನಾಗಿದ್ದಾರೆ. ಈಗ ಈ ಚಿತ್ರಕ್ಕೆ ರಚಿತಾರಾಮ್‌ ಅವರ ಎಂಟ್ರಿ ಯಾಗಿದೆ. ಹೌದು, “ರವಿ ಬೋಪಣ್ಣ’ ಚಿತ್ರದಲ್ಲಿ ರಚಿತಾರಾಮ್‌ ನಟಿಸುತ್ತಿದ್ದು, ಅದೊಂದು ವಿಶೇಷ ಪಾತ್ರ ಎನ್ನಲಾಗಿದೆ. 
 
 ರಚಿತ ರಾಮ್ ಇತ್ತೀಚೆಗಷ್ಟೇ ಶ್ರೀಮುರಳಿಯ ಭರಾಟೆ ಚಿತ್ರದಲ್ಲಿ ಹೆಜ್ಜೆ ಹಾಕಿದ್ದರು. ಇದೀಗ ಈ ಚಿತ್ರದಲ್ಲಿ ನಟನೆ ಮಾಡುತ್ತಿದ್ದಾರಾ ಅಥವಾ ಹಾಡೊಂದಕ್ಕೆ ಹೆಜ್ಜೆ ಹಾಕುತ್ತಿದ್ದಾರಾ ಎಂಬುದು ಸಸ್ಪೆನ್ಸ್‌. ಆ ಬಗ್ಗೆ ತಿಳಿದುಕೊಳ್ಳಲು ಸಿನಿಮಾ ಬರುವವರೆಗೂ ಕಾಯಬೇಕು.
 
ಈ ಚಿತ್ರಕ್ಕೆ ಕಾವ್ಯಾಶೆಟ್ಟಿ ನಾಯಕಿಯಾಗಿದ್ದಾರೆ. ಇನ್ನೊಬ್ಬ ನಾಯಕಿ ಸಂಚಿತಾ ಪಡುಕೋಣೆ ಕೂಡ ಚಿತ್ರದಲ್ಲಿ ನಟಿಸುತ್ತಿದ್ದಾರೆ. ರವಿಚಂದ್ರನ್‌ ಅವರು ಈ ಚಿತ್ರವನ್ನು “ರವಿ’ ಎಂಬ ಹೆಸರಿನಲ್ಲಿ ಶುರುಮಾಡಿದ್ದರು. ಅಷ್ಟೇ ಅಲ್ಲ, ಏಳು ದಿನ ಗಳ ಕಾಲ ಚಿತ್ರೀಕರಣ ಕೂಡಾ ಮಾಡಿದ್ದರು. ಆದರೆ, ಅದು ರವಿಚಂದ್ರನ್‌ ಅವರಿಗೆ ಅದೇಕೋ ತೃಪ್ತಿಯಾಗಲಿಲ್ಲ. ಜೊತೆಗೆ ರವಿಚಂದ್ರನ್‌ ಅವರ ಗಡ್ಡದ ಗೆಟಪ್‌ ವಿಶೇಷವಾಗಿತ್ತು. 
 
ಎಲ್ಲರೂ ಗಡ್ಡದ ಬಗ್ಗೆ ಮಾತನಾಡಿದ್ದೇ ತಡ, “ರವಿ ಬೋಪಣ್ಣ’ ಎಂಬ ಹೆಸರಿನೊಂದಿಗೆ ಹೊಸದಾಗಿ ಚಿತ್ರೀಕರಣ ಶುರು ಮಾಡಿದ್ದಾರೆ. ಅಂದ ಹಾಗೆ, ಇದು ಸೈಬರ್‌ ಕ್ರೈಮ್‌ ಸುತ್ತ ನಡೆಯುವ ಕಥೆಯಾಗಿದ್ದು, ರವಿಚಂದ್ರನ್‌ ಇಲ್ಲಿ ಸೈಬರ್‌ ಸೆಲ್‌ನ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿ ಕೊಳ್ಳಲಿದ್ದಾರಂತೆ. ಚಿತ್ರ ದಲ್ಲಿ ಸ್ನೇಹಕ್ಕೂ ಹೆಚ್ಚಿನ ಮಹತ್ವ ವಿದೆಯಂತೆ. ಇದು ಸ್ಕ್ರೀನ್‌ ಪ್ಲೇ ಮೇಲೆ ನಿಂತಿರುವ ಸಿನಿಮಾ ಆಗಿದ್ದು, “ದೃಶ್ಯ-2′ ತರಹದ ಫೀಲ್‌ ಕೊಡಲಿದೆ ಎಂಬುದು ಚಿತ್ರತಂಡದ ಮಾತು. ಚಿತ್ರದಲ್ಲಿ ರವಿಚಂದ್ರನ್‌ ಅವರು ಎರಡು ಗೆಟಪ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರಕ್ಕೆ ಸೀತಾರಾಮ್‌ ಛಾಯಾಗ್ರಹಣವಿದೆ. ರವಿ ಚಂದ್ರ ಅವರ ಅದ್ಭುತ ಕನಸಿನ ಚಿತ್ರ ಇದಾಗಿದ್ದು, ಈಗಾಗಲೇ ಚಿತ್ರದ ಮೇಲಿನ ನಿರೀಕ್ಷೆಗಳು ಹೆಚ್ಚಾಗಿವೆ.
 
 

మరింత సమాచారం తెలుసుకోండి: