ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ. ಆದರೆ ಬೇರೆ ರಾಜ್ಯದಿಂದ ಇಲ್ಲಿಗೆ ಕೆಲಸಕ್ಕೆ ಅಥವಾ ವ್ಯಾಪಾರಕ್ಕೆಂದು ಬಂದು ಕನ್ನಡ ಕಡೆಗಣಿಸುವವರಿಗೆ ಕನ್ನಡ ಸಂಘಟನೆಗಳು ತಕ್ಕ ಪಾಠ ಕಲಿಸಿವೆ. ಹೌದು, ಮೈಸೂರಿನಲ್ಲಿ ವ್ಯಾಪಾರಿಯೊಬ್ಬ ಕನ್ನಡ ನಾಮಫಲಕ ಹಾಕಲು ಉದ್ಧಟತನ ತೋರಿದ್ದ. ಅಲ್ಲದೇ ನಾಮಫಲಕ ಬದಲಿಸಿ ನೋಡಿ ಎಂದು ಸವಾಲು ಎಸೆದಿದ್ದ.


ಚಾಮರಾಜೇಂದ್ರ ಮೃಗಾಲಯದ ಸಮೀಪದ ಶರವಣ ಭವನದ ಮಾಲೀಕನೇ ಹೀಗೆ ಸಾವಲು ಎಸೆದಿದ್ದು. ಇದೀಗ ಕನ್ನಡಪರ ಸಂಘಟನೆಗಳು ಹಿಂದಿ ನಾಮಫಲಕವನ್ನು ಕಿತ್ತೊಗೆಯುವಲ್ಲಿ ಯಶಸ್ವಿಯಾಗಿವೆ. ಅಲ್ಲದೇ ಮಾಲೀಕ ಇದೀಗ ತನ್ನ ತಪ್ಪು ತಿದ್ದಿಕೊಂಡು, ಹಿಂದಿ ನಾಮಫಲಕ ತೆರವುಗೊಳಿಸಿ ಕ್ಷಮೆಯಾಚಿಸಿ, ನಾಮಫಲಕ ಬದಲಾಯಿಸಿದ್ದಾನೆ.


ಅಷ್ಟಕ್ಕೂ ನಡೆದಿದ್ದಾದ್ರೂ ಏನು ಅಂದ್ರೆ, ಕನ್ನಡ ನಾಮಫಲಕ ಇಲ್ಲದನ್ನು ಕಂಡು ಕನ್ನಡಪರ ಸಂಘನೆಯ ಸದಸ್ಯನೊಬ್ಬ ಪ್ರಶ್ನೆ ಮಾಡಿದ್ದಾನೆ. ಇದಕ್ಕೆ ಮಾಲೀಕ ಸರಿಯಾಗಿ ಪ್ರತಿಕ್ರಿಯಿಸದೇ ಉಢಾಪೆಯಿಂದ ಉತ್ತರಿಸಿದ್ದಾನೆ. ಆಗ ಕನ್ನಡ  ಪರ ಸಂಘಟನೆಯಯವರು ಬಂದು ವ್ಯಕ್ತಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಕೊನೆಗೆ ತನ್ನ ತಪ್ಪಿನ ಅರಿವು ಹೋಟೆಲ್ ಮಾಲೀಕನಿಗಾಗಿದೆ.


ಹೀಗಾಗಿ ಹಿಂದಿ ಬೋರ್ಡ್ ಅನ್ನು ಖುದ್ದು ತಾನೇ ತೆಗೆದು ಹಾಕಿದ್ದಾನೆ. ಅಲ್ಲದೇ ಕ್ಷಮೆ ಯಾಚನೆ ಮಾಡಿದ್ದಾನೆ. ಇದರ ಜೊತೆಗೆ ಕನ್ನಡ ನಾಮಫಲಕವನ್ನು ಶೀಘ್ರದಲ್ಲೇ ಹಾಕುವೆ ಎಂದು ಒಪ್ಪಿಕೊಂಡಿದ್ದಾನೆ.


మరింత సమాచారం తెలుసుకోండి: