ಕನ್ನಡದಲ್ಲಿ ರೋಗ್ ಎನ್ನುವ ಸಿನಿಮಾ ಬಿಡುಗಡೆ ಆಗಿತ್ತು. ಈ ಚಿತ್ರವನ್ನು ನಿರ್ಮಾಪಕ ಸಿ.ಆರ್. ಮನೋಹರ್ ಅವರ ಸಹೋದರ ಇಶಾನ್ ಅವರು ಈ ಚಿತ್ರದ ಮೂಲಕ‌ ಹೀರೋ ಆಗಿ ಲಾಂಚ್ ಆಗಿದ್ದರು. ಈ ಚಿತ್ರವನ್ನು ಪೂರಿ ಜಗನ್ನಾಥ್ ಅವರು ನಿರ್ದೇಶನ ಮಾಡಿದ್ದರು. 

 

ಇದೀಗ ಇದೇ ಇಶನ್ ಈಗ ಮತ್ತೆ ಬಂದಿದ್ದಾರೆ. ಕಳೆದ ಬಾರೊ ರೋ ಅಕ್ಷರದಿಂದ ಅವರು ರೋಗ್ ಎನ್ನುವ ಚಿತ್ರ ಮಾಡಿದ್ದರು. ಇದೀಗ ರೆ ಎನ್ನುವ ಚಿತ್ರ ಅಂದರೆ 'ರೇಮೋ' ಮಾಡುತ್ತಿದ್ದಾರೆ. ಈ ಚಿತ್ರದ ನಿರ್ದೇಶಕ ಪವನ್ ಒಡೆಯರ್. 

 

ಚಿತ್ರ ಸ್ಕ್ರಿಪ್ಟ್ ಪೂಜೆ ಗುರುವಾರ ನಡೆದಿದೆ. ಈ ಚಿತ್ರದ ನಾಯಕಿ ಆಶಿಕಾ ರಂಗನಾಥ್. ಇದರಲ್ಲಿ ರೆಮೊ ಎಂದರೆ ಏನು ಅಂತ ನಿರ್ದೇಶಕರನ್ನು ಕೇಳಿದರೆ, ಇದು ನಾಯಕ-ನಾಯಕಿ ಇಬ್ಬರ ಹೆಸರಿನ ಮೊದಲ‌ ಅಕ್ಷರ. ಸೇರಿದಾಗ ಹುಟ್ಟಿದ ಟೈಟಲ್ ಎಂದಿದ್ದಾರೆ. ಅಂದಹಾಗೆ ಇದು ಅಪ್ಪಟ ಲವ್ ಸ್ಟೋರಿ. ಇದು ಯೂಥ್ ಸಂಬಂಧಿಸಿದ ಸಿನಿಮಾ.

 

మరింత సమాచారం తెలుసుకోండి: