ಮೇಘನಾ ಗಾಂವಕರ್ ಅವರು ಚಾರ್ ಮಿನಾರ್ ಚಿತ್ರದ ಮೂಲಕ ಕನ್ನಡ ಸಿನಿ ಪ್ರೇಕ್ಷಕರ ಹೃದಯಕ್ಕೆ ಮತ್ತಷ್ಟು ಹತ್ತಿರ ಆದವರು. ಹೌದು ಇದೇ ಮೇಘನಾ ಗಾಂವಕರ್ ಇದೀಗ ಕಾಳಿದಾಸ ಕನ್ನಡ ಮೇಸ್ಟ್ರು ಚಿತ್ರದ ಶೂಟಿಂಗ್ ಮುಗಿಸಿದ್ದಾರೆ. ಇದೀಗ ಸಂತೋಷ್ ಜಿ ಅವರ ಚೊಚ್ಚಲ ನಿರ್ದೇಶನ ಕಿರು ಚಿತ್ರದಲ್ಲಿ ಮೇಘನಾ ಗಾಂವಕರ್ ಅವರು ಅಭಿನಯಿಸಲಿದ್ದಾರೆ.


ಹೌದು, ಮೇಘನಾ ಗಾಂವಕರ್ ಅವರಿಗೆ ಈ ಕಿರುಚಿತ್ರದ ಕಥೆ ತುಂಬಾ ಇಷ್ಟವಾಗಿದೆಯಂತೆ. ಹೀಗಾಗಿ ಈ ಕಿರುಚಿತ್ರದಲ್ಲಿ ಮೇಘನಾ ಅವರು ಅಭಿನಯಿಸೋಕೆ ಒಪ್ಪಿಕೊಂಡಿದ್ದಾರೆ. ಈ ಚಿತ್ರದ ಶೂಟಿಂಗ್ ಇದೇ ವಾರದಿಂದ ಪ್ರಾರಂಭವಾಗಲಿದೆ ಎನ್ನಲಾಗಿದೆ. 


ಈ ಕಿರುಚಿತ್ರಕ್ಕೆ ಇನ್ನು ಹೆಸರಿಟ್ಟಿಲ್ಲ. ಆದರೆ ಇದೊಂದು ರೋಮ್ಯಾಂಟಿಕ್ ಕಾಮೆಡಿ ಚಿತ್ರ ಎನ್ನಲಾಗಿದೆ. ಈ ಚಿತ್ರಕ್ಕೆ ರಾಕೇಶ್ ಅವರ ಚಾಯಾಗ್ರಹಣ ಹಾಗೂ ಜೂದಾ ಸ್ಯಾಂಡಿ ಅವರ ಸಂಗೀತ ಸಂಯೋಜನೆ ಇದೆ ಎಂದು ತಿಳಿದುಉ ಬಂದಿದೆ. 


మరింత సమాచారం తెలుసుకోండి: