ಅನುಪಮಾ ಪರಮೇಶ್ವರನ್ ಅವರು ಕನ್ನಡದಲ್ಲಿ ಪುನೀತ್ ರಾಜಕುಮಾರ್ ಜೊತೆಗೆ ನಟಸಾರ್ವಭೌಮ ಚಿತ್ರದಲ್ಲಿ ನಟನೆ ಮಾಡಿದ್ದರು. ನಂತರ ಸ್ಯಾಂಡಲ್ ವುಡ್ ಲೋಕದಲ್ಲಿ ಅವರು ಗುರುತಿಸಿಕೊಂಡಿದ್ದರು. ಇದೇ ಅನುಪಮಾ ಅವರ ಕನ್ನಡದ ಮೊದಲ ಚಿತ್ರವಾಗಿತ್ತು. 


ಇದಾದ ನಂತರ ಅನುಪಮಾ ಪರಮೇಶ್ವರನ್ ಅವರಿಗೆ ಕ್ರಿಕೆಟಿಗರ ಜೊತೆಗೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಗಾಸಿಪ್ ಕೂಡ ಹಬ್ಬಿಸಲಾಗಿತ್ತು. ಅದರಲ್ಲಿ ಕೆ.ಎಲ್.ರಾಹುಲ್ ಹಾಗೂ ಬುಮ್ರಾ ಹೆಸರು ಕೇಳಿ ಬಂದಿತ್ತು. ಈ ಕುರಿತು ತೆಲುಗು ವೆಬ್ ಸೈಟ್ ಒಂದು ಅನುಪಮಾ ಅವರ ಪ್ರತಿಕ್ರಿಯೆ ಕೇಳಿದೆ.


ನೀವು ಕ್ರಿಕೆಟಿಗರ ಜೊತೆ ಸಂಬಂಧ ಹೊಂದಿದ್ದೀರಿ ಎಂದು ಕೇಳಿದ್ದೇವೆ ಅದು ನಿಜವೇ ಎಂದು ಕೇಳಿದಾಗ, ಅನುಪಮಾ ಪರಮೇಶ್ವರನ್, ನೋ ಕಮೆಂಟ್ಸ್ ಎಂದಿದ್ದಾರೆ. ಅಲ್ಲದೇ ಬೂಮ್ರಾ ಹೆಸರು ಪ್ರಸ್ತಾಪಿಸಿದಾಗ, ನೋ ಕಮೆಂಟ್ಸ್, ಈ ವಿಷಯ ಬಿಟ್ಟು ಮುಂದೆ ಏನಾದರೂ ಕೇಳಿ ಎಂದು ಹೇಳಿದ್ದಾರೆ.


మరింత సమాచారం తెలుసుకోండి: