ನಟಿ ವಿದ್ಯಾ ಬಾಲನ್ ನಿಮಗೆಲ್ಲ ಗೊತ್ತಿರಬಹುದು. ದರ್ಟಿ ಪಿಕ್ಚರ್ ಮೂಲಕ ಮತ್ತಷ್ಟು ಹೆಸರುವಾಸಿಯಾದವರು. ಆದರೆ ವಿದ್ಯಾ ಬಾಲನ್ ಅವರು ತಮ್ಮ ಸಿನಿ ಕ್ಯಾರಿಯರ್ ನಲ್ಲಿ ಅತ್ಯಂತ ಕೆಟ್ಟ ಪರಿಸ್ಥಿತಿಗಳನ್ನು ಎದುರಿಸಿದ ಉದಾಹರಣೆಗಳು ಇವೆ. ಹೌದು ಅವರು ತಮ್ಮ 14 ವರ್ಷದ ವೃತ್ತಿ ಪಯಣದಲ್ಲಿ ಅನುಭವಿಸಿದ ಕಹಿ ಘಟನೆಗಳನ ಬಗ್ಗೆ ಇತ್ತೀಚೆಗೆ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. 

ನಿಮಗೆಲ್ಲ ಗೊತ್ತಿರಬಹುದು. ವಿದ್ಯಾ ಬಾಲನ್ 2005 ನಟಿಸಿದ ಪರಿಣೀತಾ ಚಿತ್ರ ಹಿಟ್ ಆಗಿತ್ತು. ನಂತರ ಅವರಿಗೆ ಒಂದರ ನಂತರ ಒಂದು ಅವಖಾಶಗಳು ಬರತೊಡಗಿದವು. ಅಲ್ಲದೇ 2017ರಲ್ಲಿ ಬಿಡುಗಡೆ ಆದ ತುಮ್ಹಾರಿ ತುಲು ಚಿತ್ರ ಅವರಿಗೆ ಭಾರೀ ಜನಪ್ರಿಯತೆ ತಂದುಕೊಟ್ಟಿತು. ಅಲ್ಲದೇ ಇತ್ತೀಚೆಗೆ ಆಗಸ್ಟ್ 15 ರಂದು ಬಿಡುಗಡೆ ಆಗಿರೋ ಮಿಷನ್ ಮಂಗಲ್ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಅಲ್ಲದೇ ಇದರ ಹೊರತಾಗಿಯೂ ವಿದ್ಯಾ ಬಾಲನ್ ಕೈಯಲ್ಲಿ ಎರಡು ಮುರು ದಕ್ಷಿಣ ಭಾರತದ ಸಿನಿಮಾಗಳಿವೆ.

ಆದರೆ ವಿದ್ಯಾ ಬಾಲನ್ ಅವರು ಈ ಹಿಂದೆ ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸಬೇಕು ಎಂದು ಮುಂದೆ ಬಂದಾಗ ಅವರೊಗೆ ಅವಕಾಶಗಳೇ ಸಿಕ್ಕಿರಲಿಲ್ಲ. ಇರೋ ಅವಕಾಶಗಳೂ ಕೈ ತಪ್ಪಿ ಹೋಗಿದ್ದವು. ಅದನ್ನು ನೆನೆದು ವಿದ್ಯಾಬಾಲನ್ ಅವರು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. 

"ನಾನು ಅನೇಕ ಸಂದರ್ಭಗಳಲ್ಲಿ ದಕ್ಷಿಣ ಭಾರತದ ಸಿನಿಮಾಗಳಿಂದ ತಿರಸ್ಕೃತ ಆಗಿದ್ದೇನೆ. ನಾನು ನಟಿಯಾದ ಆಯ್ಕೆ ಆದ ಪಾತ್ರಕ್ಕೆ ಮತ್ತೊಬ್ಬರನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು. ಆಗ ನನಗೆ ತುಂಬ ಬೇಸರ ಆಗುತ್ತಿತ್ತು. ಒಂದು ತಮಿಳು ಚಿತ್ರಕ್ಕೆ ನಾನು ಆಯ್ಕೆ ಆಗಿದ್ದೆ. ಅದಾದ ಮೇಲೆ ನನಗೆ ಗೊತ್ತಾಯಿತು. ನಾನು ಚಿತ್ರದ ನಾಯಕಿ ಅಲ್ಲ ಎಂದು. ಹೀಗೆ ನನಗೆ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಅತ್ಯಂತ ಕೆಟ್ಟ ಘಟನೆಗಳು ನಡೆದಿವೆ ಎಂದು ಅವರು ಹೇಳಿದ್ದಾರೆ.

ಸಿನಿಮಾದಿಂದ ತಿರಸ್ಕೃತಗೊಂಡಗಲೆಲ್ಲಾ ನನ್ನ ಮೇಲೆ ನನಗೆ ಕೀಳರಿಮೆ ಆಗುತ್ತಿತ್ತು. ಆಗ ನಾನು ಕನ್ನಡಿಯನ್ನೇ ನೋಡಿಕೊಳ್ಳುತ್ತಿರಲಿಲ್ಲ. ಯಾಕೆಂದರೆ ನಾನು ಕೆಟ್ಟದಾಗಿದ್ದಿನನಿ ಎಂದು ಅನ್ನಿಸುತ್ತಿತ್ತು. ಹೀಗಾಗಿ ನನ್ನನ್ನು ತಿರಸ್ಕ್ರತ ಮಾಡಿದ ನಿರ್ದೇಶಕನನ್ನು ನಾನು ಯಾವತ್ತೂ ಕ್ಷಮಿಸೋದೇ ಇಲ್ಲ. ಕೊನೆಗೆ ನನ್ನನ್ನು ನಾನು ಇರುವ ಹಾಗೇ ಸ್ವೀಕರಿಸಲು ಸಾಧ್ಯವಾಗಿದೆ ಎಂದು ತಮ್ಮ ಹಳೆಯ ನೆನಪುಗಳನ್ನು ಬಿಡಿಸಿಟ್ಟಿದ್ದಾರೆ. 



మరింత సమాచారం తెలుసుకోండి: