ಸ್ಯಾಂಡಲ್ ವುಡ್ ಲೋಕದಲ್ಲಿ ಇದೀಗ ಬಿಗ್ ಬಜೆಟ್ ಚಿತ್ರಗಳದ್ದೇ ದೊಡ್ಡ ಸುದ್ದಿ. ಹೌದು ಹೆಚ್ಚಿನ ದುಡ್ಡು ಹಾಕಿ ಹೆಚ್ಚಿನ ಲಾಭ ಪಡೆಯಬಹುದು ಅನ್ನೋದು ಇವರ ಸರಳ ಲೆಕ್ಕಾಚಾರ. ಈ ಲೆಕ್ಕಾಚಾರ ಅನೇಕ ಕಡೆಗಳಲ್ಲಿ ಸಕ್ಸಸ್ ಆಗಿದೆ ಅನ್ನೋದು ಮಾತ್ರ ಸತ್ಯ. ಇದೇ ಕಾರಣಕ್ಕೆ ಈ ಫಾರ್ಮುಲಾ ಬಳಸಿಕೊಂಡು ಅನೇಕರು ಇದೀಗ ಬಿಗ್ ಬಜೆಟ್ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಸಾಲಿಗೆ ಸೇರ್ಪಡೆ ಆಗೋದು ಕಿಚ್ಚ ಸುದೀಪ್ ಅವರ ಪೈಲ್ವಾನ್.


ಹೌದು ಕಿಚ್ಚ ಸುದೀಪ್ ಅವರ ಪೈಲ್ವಾನ್ ಚಿತ್ರ ಇದೀಗ ಸದ್ದು ಮಾಡುತ್ತಿದೆ. ಈ ಹಿಂದೆ ಯಶ್ ಅಭಿನಯದ ಕೆಜಿಎಫ್ ಚಿತ್ರ 100 ಕೋಟಿ ಕಲೆಕ್ಷನ್ ಮಾಡಿತ್ತು. ಅದಾದ ನಂತರ ದರ್ಶನ್ ಅವರ ಕುರುಕ್ಷೇತ್ರ ಚಿತ್ರವೂ ನೂರು ಕೋಟಿ ಕ್ಲಬ್ ಸೇರಿದೆ. ಹೀಗಾಗಿ ಇದೀಗ ಸುದೀಪ್ ಅವರ ಪೈಲ್ವಾನ್ ಚಿತ್ರವೂ ಇದೀಗ ನೂರು ಕೋಟಿ ಬಾಚಿಕೊಳ್ಳುವುದೇ ಎನ್ನುವ ಅಂಶಗಳ ಬಗ್ಗೆ ಚರ್ಚೆ ನಡೆಯುತ್ತಿದೆ.


ಹೌದು ಅಭಿನಯ ಚಕ್ರವರ್ತಿ  ಎಂದೇ ಕರೆಸಿಕೊಳ್ಳುವ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ಟ್ರೈಲರ್ ಮೂಲಕವೇ ಕ್ರೇಜ್ ಹುಟ್ಟಿಸಿದೆ. ಅಲ್ಲದೇ ಈ ಚಿತ್ರದ ಬಗ್ಗೆ ಸಿನಿಪ್ರಿಯರಲ್ಲಿ ಭಾರೀ ನಿರೀಕ್ಷೆ ಹುಟ್ಟು ಹಾಕಿದೆ ಎಂದರೆ ತಪ್ಪಿಲ್ಲ. ಹೀಗಾಗಿ ರಾಜ್ಯದಲ್ಲಿ ಸುದೀಪ್ ಚಿತ್ರಕ್ಕೆ ಭವ್ಯ ಸ್ವಾಗತ ಸಿಗಲಿದೆ ಎನ್ನಲಾಗುತ್ತಿದೆ. ಹೌದು ಯಾಕೆಂದರೆ ಕಿಚ್ಚ ಫ್ಯಾನ್ಸ್​ ಈಗಾಗಲೇ ಪೈಲ್ವಾನ್ ಚಿತ್ರವನ್ನು ನೋಡಲು ತುದಿಗಾಲಲ್ಲಿ ನಿಂತಿದ್ದಾರೆ. ಇವೆಲ್ಲಕ್ಕಿಂತ ವಿಶೇಷ ಎಂದರೆ ಸೆಪ್ಟೆಂಬರ್ 12ರಂದು ಈ ಚಿತ್ರ ತೆರೆ ಕಾಣಲಿದೆ.

ಹೀಗಾಗಿ ಬಾಕ್ಸ್ ಆಫಿಸ್‌ನಲ್ಲಿ ಈಗಾಗಲೇ ಪೈಲ್ವಾನ್ ಚಿತ್ರ ಕುರಿತು ಲೆಕ್ಕಾಚಾರ ಆರಂಭ ಆಗಿದೆ. ಈ ಚಿತ್ರ ನೂರು ಕೋಟಿ ಬಾಚಿಕೊಳ್ಳುತ್ತಾ ಎನ್ನುವ ಪ್ರಶ್ನೆಗಳು ಸುಳಿದಾಡುತ್ತಿವೆ. ಏಕೆಂದರೆ ಸ್ಯಾಂಡಲ್​ವುಡ್ ಬಚ್ಚನ್​ಗೆ ಕರ್ನಾಟಕದಲ್ಲಿ ಮಾತ್ರವಲ್ಲದೇ ಬೇರೆ ಬೇರೆ ಬಾಷೆ ಮತ್ತು ರಾಜ್ಯಗಳಲ್ಲಿಯೂ ಅಭಿಮಾನಿಗಳಿದ್ದಾರೆ. ಹೌದು ಕಾಲಿವುಡ್​ನಲ್ಲಿ ಪುಲಿ ಚಿತ್ರದಲ್ಲಿ ಅಭಿನಯಿಸಿದ್ದ ಸುದೀಪ್​ಗೆ ನಟ ವಿಜಯ್ ಫ್ಯಾನ್ಸ್​ ಸಾಥ್ ನೀಡುತ್ತಾರೆ. ಇನ್ನು ಈಗ ಎಂಬ ಚಿತ್ರದ ಮೂಲಕ ಟಾಲಿವುಡ್ ಹಾಗೂ ಮಾಲಿವುಡ್​ನಲ್ಲಿ ಸುದೀಪ್ ಅಭಿಮಾನಿಗಳನ್ನು ಸಂಪಾದನೆ ಮಾಡಿದ್ದಾರೆ.


ಇಷ್ಟೇ ಅಲ್ಲದೇ ತೆಲುಗು ಸೂಪರ್ ಸ್ಟಾರ್ ಚಿರಂಜೀವಿ ಅವರ ಸೈರಾ ನರಸಿಂಹರೆಡ್ಡಿ ಚಿತ್ರದಲ್ಲಿಯೂ ಸುದೀಪ್ ಅಭಿನಯ ಮಾಡಿದ್ದಾರೆ. ಹೀಗಾಗಿ ತೆಲುಗು ಚಿತ್ರರಂಗಕ್ಕೂ ಸುದೀಪ್ ಚಿರಪರಿಚಿತ. ಹೀಗಾಗಿ ಪೈಲ್ವಾನ್ ಸಹ ನೂರು ಕೋಟಿ ಕ್ಲಬ್ ಸೇರುವುದಂತು ಪಕ್ಕಾ ಎನ್ನುವ ಮಾಹಿತಿಗಳು ಹೊರ ಬೀಳುತ್ತಿವೆ. ಇನ್ನೊಂದು ಕಾರಣ ಏನಪ್ಪ ಅಂದರೆ, ಉತ್ತರ ಭಾರತದಲ್ಲಿ ಪೈಲ್ವಾನ ಸುದೀಪ್ ಅವರನ್ನು ಅಖಾಡಕ್ಕೆ ಇಳಿಸುತ್ತಿರುವುದು ಜೀ ಸ್ಟುಡಿಯೋಸ್ ಸಂಸ್ಥೆ.

ಹೀಗಾಗಿ ಇದು ದೊಡ್ಡ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ. ಜಗತ್ತಿನಾದ್ಯಂತ ಅಂದರೆ ಕೆನಡಾ, ಅಮೆರಿಕಾ ಸೇರಿದಂತೆ ಎಲ್ಲ ಕಡೆಗೂ ಏಕಕಾಲದಲ್ಲಿ ಸಿನಿಮಾ ಬಿಡುಗಡೆಹೆ ಜೀ ಸಂಸ್ಥೆ ರೆಡಿ ಆಗಿದೆ.


మరింత సమాచారం తెలుసుకోండి: