ಮೆಗಾ ಸ್ಟಾರ್ ಚಿರಂಜೀವಿ ಅಭಿಮಾನಿಗಳು ಕಾಯುತ್ತಿರುವ ಚಿತ್ರ ಎಂದರೆ ಅದು ಸೈರಾ ನರಸಿಂಹ ರೆಡ್ಡಿ. ಹೌದು ಇಡೀ ಆಂದ್ರ ಮತ್ತು ತೆಲಂಗಾಣ ಅಷ್ಟೇ ಅಲ್ಲದೇ ದೇಶದ ವಿವಿಧ ಭಾಗಗಳಲ್ಲಿ ಚಿರಂಜೀವಿ ಅಭಿಮಾನಿಗಳು ಇದ್ದಾರೆ. ಈಗಾಗಲೇ ಮೆಗಾಸ್ಟಾರ್‌ ಚಿರಂಜೀವಿ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ಸೈರಾ ನರಸಿಂಹ ರೆಡ್ಡಿ'ಯ ಟೀಸರ್‌ ಬಿಡುಗಡೆಗೊಂಡಿದ್ದು, ಇದಕ್ಕೆ ಎಲ್ಲರಿಂದಲೂ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ.


ಹೌದು 2 ನಿಮಿಷದ ಟೀಸರ್‌ನಲ್ಲಿ ಆಯಕ್ಷನ್‌ ದೃಶ್ಯಗಳು, ಸೆಟ್‌ಗಳು, ಯುದ್ಧದ ದೃಶ್ಯಗಳು ಈಗಾಗಲೇ ಅಭಿಮಾನಿಗಳ ಮನ ಗೆದ್ದಿವೆ ಎಂದು ಹೇಳಬಹುದು. ಒಂದೊಂದು ದೃಶ್ಯಗಳು ಸೂಪರ್.. ಒಂದೊಂದು ದೃಶ್ಯಗಳು ಮನಮೋಹಕವಾಗಿ ಕಟ್ಟಿಕೊಟ್ಟಿದ್ದಾರೆ ಎಂದು ಟೀಸರ್ ನೋಡುವಾಗ ಅನ್ನಿಸದೇ ಇರದು. ಇನ್ನು ಚಿತ್ರದಲ್ಲಿ ಅನುಷ್ಕಾ ಶೆಟ್ಟಿಯೂ ಕೂಡ ರಾಣಿ ಲಕ್ಷ್ಮಿಭಾಯಿ ಆಗಿ ಅಭಿನಯಿಸುತ್ತಿರೋದು ಎಲ್ಲರಿಗೂ ತಿಳಿದೇ ಇದೆ.


ಆದರೆ ಇದೀಗ ವಿಷಯ ಏನಪ್ಪ ಅಂದರೆ, ಈ ಚಿತ್ರದಲ್ಲಿ ನಟಿ ನಯನತಾರಾ ಅವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಹೌದು ನಯನ ತಾರಾ ಅವರಿಗೆ ಈ ಚಿತ್ರದಲ್ಲಿ ಎಷ್ಟು ಸಂಭಾವನೆ ಪಡೆದಿದ್ದಾರೆ ಅನ್ನುವ ಒಂದು ಕುತೂಹಲ ಬಹುತೇಕರಿಗೆ ಇದೆ. ಆ ಕುತೂಹಲಕ್ಕೆ ಇದೀಗ ತೆರೆ ಬಿದ್ದಿದೆ. 


ಹೌದು. ಅಷ್ಟಕ್ಕೂ ನಯನ ತಾರಾ ಈ ಸಿನಿಮಾಗಾಗಿ, ಈ ಚಿತ್ರದಲ್ಲಿ ನಟಿಸಿದ ಈ ಪಾತ್ರಕ್ಕಾಗಿ ಅವರು ಬರೋಬ್ಬರಿ ಐದು ಕೋಟಿ ಸಂಭಾವನೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.  ದಕ್ಷಿಣ ಭಾರತದ ಪ್ರಮುಖ ನಾಯಕಿಯರ ಸಾಲಿನಲ್ಲಿ ನಯನ ತಾರಾ ಕೂಡ ಒಂದು ದೊಡ್ಡ ಹೆಸರು. ಅಲ್ಲದೇ ನಯನತಾರಾ ಅವರ ಮಹಿಳಾ ಪ್ರಧಾನ ಚಿತ್ರಗಳಲ್ಲಿ ನಟಿಸೋದೆ ತುಸು ಹೆಚ್ಚು ಎನ್ನಬಹುದು.



ನಯನತಾರಾ ಅವರ ಸಂಭಾವನೆ ಇದೀಗ ಕಳೆದ ಎರಡು  ಮೂರು ವರ್ಷಗಳಲ್ಲಿ ಹೆಚ್ಚಾಗುತ್ತಲೇ ಇದೆ. ಈಗ ತನ್ನ ಯಶಸ್ಸು ಹಾಗೂ ಬೇಡಿಕೆಗೆ ಅನುಗುಣವಾಗಿ ಸೈರಾ ನರಸಿಂಹ ರೆಡ್ಡಿ ಚಿತ್ರದ ಪಾತ್ರಕ್ಕೆ ಐದು ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. 'ಸೈರಾ ನರಸಿಂಹ ರೆಡ್ಡಿ' ಚಿತ್ರದಲ್ಲಿ ಚಿರಂಜೀವಿ ಅವರಿಗೆ ಜೋಡಿಯಾಗಿ ನಯನ ತಾರಾ ಅವರು ನಟಿಸುತ್ತಿದ್ದಾರೆ.  ಅಲ್ಲದೇ ಚಿತ್ರದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ನಡೆಯುತ್ತಿದ್ದು, ಅಕ್ಟೋಬರ್‌ 2ರಂದು ಚಿತ್ರ ತೆರೆಕಾಣಲಿದೆ ಎಂದು ತಿಳಿದು ಬಂದಿದೆ.


మరింత సమాచారం తెలుసుకోండి: