ಇದೀಗ ಕನ್ನಡದಲ್ಲಿ ಮತ್ತೊಂದು ಸಿನಿಮಾ ಬರುತ್ತಿದೆ. ಅದರ ಹೆಸರೇ ವಿಚಿತ್ರವಾಗಿದೆ. ಹೌದು ಶೋಕಿವಾಲ ಅನ್ನೋ ಹೆಸರಿನ ಈ ಸಿನಿಮಾದಲ್ಲಿ ಅಜಯ್ ರಾವ್ ಮತ್ತು ಸಂಜನಾ ಆನಂದ್ ಅವರು ನಟಿಸುತ್ತಿದ್ದಾರೆ. ಇದಕ್ಕೆ ಶೋಕಿವಾಲ ಅನ್ನೋ ಹೆಸರನ್ನಿಟ್ಟು ಗಮನ ಸೆಳೆದಿದೆ ಚಿತ್ರತಂಡ. ಈ ಕುರಿತು ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.


ತಾಯಿಗೆ ತಕ್ಕ ಮಗ ಅನ್ನೋದು ಅಜಯ್ ರಾವ್ ಅವರ ಕೊನೆಯ ಸಿನಿಮಾ ಆಗಿದೆ. ನಂತರ ಅವರು ನಟನೆಯಿಂದ ಬಿಡುವು ಪಡೆದಿದ್ದರು. ಹೌದು ಅದಾದ ನಂತರ ಅಜಯ್ ರಾವ್ ಅವರು ಕೃಷ್ಣ ಟಾಕೀಸ್ ಕೂಡ ಬಹುತೇಕ ಮುಗಿಸಿದ್ದಾರೆ ಎನ್ನಲಾಗುತ್ತಿದೆ. ಇನ್ನೇನಿದ್ದರೂ ಇದೀಗ ಶೋಕಿವಾಲ ಆಗಿ ಅಜಯ್ ರಾವ್ ಅವರು ಕಾಣಿಸಿಕೊಳ್ಳಲಿದ್ದಾರೆ. 


ಶೋಕಿವಾಲಾ ಅಂದ ತಕ್ಷಣ ಬೇರೆ ಏನೋ ಕಲ್ಪನೆ ಮಾಡಿಕೊಳ್ಳಬೇಡಿ. ಅವರು ಪಕ್ಕಾ ಹಳ್ಳಿ ಹೈದನ ಗೆಟಪ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಈ ಚಿತ್ರದಲ್ಲಿ ನಟಿಸುತ್ತಿರುವ ನಾಯಕಿ ಸಂಜನಾ ಆನಂದ್ ಅವರದ್ದು ಸಹ ಹಳ್ಳಿ ಹುಡುಗಿ ಪಾತ್ರವೇ ಆಗಿದೆ.
ಹಾಗಾದರೆ ಶೋಕಿವಾಲ ಏನು ಮಾಡುತ್ತಾನೆ ಸಿನಿಮಾದಲ್ಲಿ ಅನ್ನೋದರ ಬಗ್ಗೆ ಸ್ವಲ್ಪ ಎಳೆ ಸಿಕ್ಕಿದೆ ನೋಡಿ.

ಹೌದು. ಪ್ರೇಮಿಸಿ ಮದುವೆಯಾಗುವ ಆಸೆ ಇಟ್ಟುಕೊಂಡು ಕಂಡಕಂಡ ಹುಡುಗಿಯರಿಗೆ ಕಾಳುಹಾಕುವ ಹೈದನ ಪಾತ್ರದಲ್ಲಿ ಈ ಶೋಕಿವಾಲ ಅಜಯ್ ರಾವ್ ಅವರು ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾದ ಕ್ಲೈಮ್ಯಾಕ್ಸ್ ನಲ್ಲಿ ಈ ಹೈದನ ಆಸೆ ಈಡೇರುತ್ತದೆಯೇ? ನಾಯಕಿ ಸಂಜನಾ ಆನಂದ್ ಈತನಿಗೆ ಮರುಳಾಗುತ್ತಾಳಾ ಅನ್ನೋದೇ ಚಿತ್ರ ಕಥೆಯಾಗಿದೆ.


ಇನ್ನು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವ ಮೂಲಕ ಮೊದಲ ಬಾರಿಇಗೆ ಸ್ವತಂತ್ರ ನಿರ್ದೇಶನಕ್ಕೆ ಕೈ ಹಾಕಿದವರು ನಿರ್ದೇಶಕ ಆಗಿದ್ದ ಜಾಕಿ ತಿಮ್ಮೇಗೌಡ. ಇವರು ಲಕ್ಕಿ, ಸಂತು ಸ್ಟ್ರೇಟ್ ಫಾರ್ವರ್ಡ್ ಹಾಗೂ ಕೆಜಿಎಫ್ ಸಿನಿಮಾಗಳಿಗೆ ಸಹ ನಿರ್ದೇಶಕನಾಗಿ ಕೆಲಸ ಮಾಡಿದವರು. ಈಗಾಗಲೇ ಶೇ.75ರಷ್ಟು ಚಿತ್ರೀಕರಣ ಮುಗಿಸಲಾಗಿದೆ. ಒಂದು ಹಾಡು, ಒಂದು ಫೈಟ್ ದೃಶ್ಯ ಹಾಗೂ ಸಂಭಾಷಣೆಯ ಭಾಗ ಬಾಕಿ ಇದೆ ಎನ್ನಲಾಗಿದೆ. ಈಗಾಗಲೇ 35 ದಿನ ಚಿತ್ರೀಕರಣ ನಡೆದಿದ್ದು, ಇನ್ನೂ ಅಷ್ಟೇ ದಿನಗಳ ಚಿತ್ರೀಕರಣ ಬಾಕಿ ಇದೆ. 


మరింత సమాచారం తెలుసుకోండి: