ನಿರ್ದೇಶಕ ಎಪಿ ಅರ್ಜುನ್ ಸಿಕ್ಕಾಪಟ್ಟೆ ಕಾತುರ ದೊಂದಿಗೆ ಸೆಪ್ಟೆಂಬರ್ 27ಕ್ಕೆ ಎದುರುನೋಡುತ್ತಿದ್ದಾರೆ ಯಾಕೆ ಗೊತ್ತಾ! ಅದಕ್ಕೆ ಕಾರಣ ಕಿಸ್. ಅರೇ ಕಿಸ್ ಹಾ. ಏನಪ್ಪಾ ಇದು ಅಂತೀರಾ. ಹಾಗಾದ್ರೆ ಈ ಸ್ಟೋರಿ ಓದಿ. ಇದು ಅರ್ಜುನ್ ನಿರ್ದೇಶನದ ಸಿನಿಮಾ ಈಗ ಇದು ಕೇವಲ ಇವರ ನಿರ್ದೇಶನದ ಸಿನಿಮಾವಾಗಿ ಉಳಿದಿಲ್ಲ ಜೊತೆಗೆ ನಿರ್ಮಾಣದ ದೊಡ್ಡ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಈಗ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು 27ರಂದು ತೆರೆಕಾಣುತ್ತಿದೆ. 


ಚಿತ್ರ ಪೈರಸಿಯಾಗದಂತೆ ತಡೆದು, ಚಿತ್ರವನ್ನು ಪ್ರೇಕ್ಷಕರಿಗೆ ತಲುಪಿಸಬೇಕೆಂಬ ನಿಟ್ಟಿನಲ್ಲಿ ಚಿತ್ರತಂಡ ಕಾಲಿಗೆ ಚಕ್ರ ಕಟ್ಟಿಕೊಂಡು ಊರೆಲ್ಲ ಸುತ್ತುತ್ತಿದೆ. ಚಿತ್ರದ ಹೆಸರೇ ಸೂಚಿಸುವಂತೆ ಕಿಸ್ ಆದ್ದರಿಂದ ಚಿತ್ರತಂಡವು ಮುಖ್ಯವಾಗಿ ಯುವಕರನ್ನು ಟಾರ್ಗೆಟ್ ಮಾಡಿ ಅವರಿಗೆ ಚಿತ್ರದ ಬಗ್ಗೆ ಮಾಹಿತಿ ನೀಡುತ್ತಿದೆ. ಇದಕ್ಕೆ ಚಿತ್ರತಂಡ ಆಯ್ಕೆಮಾಡಿರುವ ಸ್ಥಳ ಕಾಲೇಜು. ಹೌದು ಕಿಸ್ ಚಿತ್ರತಂಡವು ಕಾಲೇಜುಗಳನ್ನು ಸುತ್ತಿ ತಮ್ಮ ಚಿತ್ರದ ಬಗ್ಗೆ ಮಾತನಾಡುತ್ತಿದೆ. ನಾಯಕ-ನಾಯಕಿ ನಿರ್ದೇಶಕ ಸೇರಿದಂತೆ ಇಡೀ ತಂಡ ಟಾರ್ಗೆಟ್ ಮಾಡಿ ಕಾಲೇಜಿನತ್ತ ಮುಖಮಾಡಿದೆ. ಕಾಲೇಜಿನ ವಿದ್ಯಾರ್ಥಿಗಳಿಗೆ ಚಿತ್ರದ ಬಗ್ಗೆ ಕುತೂಹಲ ಮೂಡುವ ಹಾಗೆ ಪ್ರಚಾರ ಮಾಡುತ್ತಿದೆ. 


ಚಿತ್ರದ ಬಗ್ಗೆ ಮಾತನಾಡುವ ಅರ್ಜುನ್ ಒಂದು ಕಲರ್ಫುಲ್ ಜರ್ನಿ 18ರ ಹುಡುಗಿ ಇಪ್ಪತ್ತೊಂದರ ಹುಡುಗರು ಲವ್ ಬಗ್ಗೆ ಹೇಗಿರುತ್ತಾರೆ ಅವರ ನಡುವಿನ ಸಣ್ಣಸಣ್ಣ ಕಿತ್ತಾಟಗಳು, ಮುನಿಸುಗಳು, ಎಕ್ಸೈಟ್ಮೆಂಟ್, ಚೇಷ್ಠೆಗಳು, ಬ್ರೇಕಪ್, ಚಾಟಿಂಗ್,ಇಂತಹ ಅಂಶಗಳೊಂದಿಗೆ ಸಿನಿಮಾ ಸಾಗುತ್ತದೆ ಎನ್ನುತ್ತಾರೆ. ಇನ್ನು ಈಗಾಗಲೇ ಚಿತ್ರದ ಹಾಡು ಹಾಗೂ ಟ್ರೈಲರ್ ಹಿಟ್ ಆಗಿರುವುದರಿಂದ ಚಿತ್ರವನ್ನು ಕೂಡ ಜನ ಇಷ್ಟಪಡುತ್ತಾರೆ ಎಂಬ ವಿಶ್ವಾಸ ಚಿತ್ರತಂಡಕ್ಕಿದೆ. ಚಿತ್ರದಲ್ಲಿ ವಿರಾಟ್ ಹಾಗೂ ಶ್ರೀಲೀಲಾ ನಾಯಕ-ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. 


ಇದೊಂದು ಸಂಪೂರ್ಣವಾಗಿ ಪ್ರೀತಿಯ ಚಿತ್ರವಾದ್ದರಿಂದ, ಯುವಕರಲ್ಲಿ ಸಿನಿಮಾದ ಮೇಲಿನ ನಿರೀಕ್ಷೆಗಳು ಹೆಚ್ಚುವಂತೆ ಮಾಡಿವೆ. ಈಗಾಗಲೇ ಈ ಚಿತ್ರದ ಹಾಡುಗಳು ಕಾಲೇಜ್ ಯುವಕರ ಬಾಯಲ್ಲಿ ಗುನುಗುಟ್ಟುತ್ತಿವೆ. ಚಿತ್ರವು ಸೆ. 27ರಂದು ತೆರೆ ಕಾಣುತ್ತಿದ್ದು ಎಷ್ಟರ ಮಟ್ಟಿಗೆ ಯಶಸ್ಸಾಗುತ್ತದೆ ಎಂಬುದು ಕಾದುನೋಡಬೇಕಾಗಿದೆ. 


మరింత సమాచారం తెలుసుకోండి: