ಸದ್ಯದಲ್ಲೇ ತೆರೆಯ ಮೇಲೆ ಸ್ಯಾಂಡಲ್​ವುಡ್​ ಅಪ್ಪು, ಅಣ್ಣಾವ್ರ ಮಗ ಪುನಿತ್ ರಾಜ್ ಕುಮಾರ್ ಯುವರತ್ನ  ನನ್ನಾಗಿ ತೆರೆ ಮೇಲೆ ಮಿಂಚಲಿದ್ದಾರೆ. ಈ ಸಿನಿಮಾದಲ್ಲಿ ಪುನೀತ್​ ಜೋಡಿಯಾಗಿ ಸಯೇಶ್​ ಸೈಗಲ್​ ನಟಿಸುತ್ತಿದ್ದಾರೆ. ಈ ನಟಿ ಕನ್ನಡದಲ್ಲಿ ಮೊದಲ ಬಾರಿಗೆ ನಟಿಸುತ್ತಿದ್ದು, ಕನ್ನಡಗಿರ ಮನ ಗೆಲ್ಲುತ್ತಾರಾ ಇಲ್ಲವಾ ಎಂಬುದು ಚಿತ್ರ ಬಿಡುಗಡೆಯ ನಂತರವೇ ತಿಳಿಯಬೇಕಿದೆ. 


ಪವರ್​ ಸ್ಟಾರ್​ ಪುನೀತ್​ ರಾಜ್​ ಕುಮಾರ್ ಅಭಿನಯದ ‘ಯುವರತ್ನ‘ ಸಿನಿಮಾದ ಟೀಸರ್ ಬಿಡುಗಡೆಯಾಗಲಿದೆ. ಆಯುಧ ಪೂಜೆಯ ವಿಶೇಷವಾಗಿ ಚಿತ್ರತಂಡ ಇಂದು ಸಂಜೆ 5.30ಕ್ಕೆ ಸರಿಯಾಗಿ ಅಭಿಮಾನಿಗಳ ಸಮ್ಮುಖದಲ್ಲಿ ರಿಲೀಸ್​ ಮಾಡುತ್ತಿದೆ ಚಿತ್ರ ತಂಡ. ಈ ಖುಷಿಯ ವಿಚಾರವನ್ನು ಖ್ಯಾತ ನಟ ಪುನೀತ್​ ರಾಜ್​ ಕುಮಾರ್​ ತಮ್ಮ ಟ್ವಿಟ್ಟರ್​ ಖಾತೆಯ ಮೂಲಕ ಹಂಚಿಕೊಂಡಿದ್ದು,  ಅ.7 ರಂದು ‘ಯುವರತ್ನ‘ ಟೀಸರ್​ ರಿಲೀಸ್​ ಆಗುತ್ತಿದೆ. ನನ್ನನ್ನು ಮತ್ತು ಸಿನಿಮಾವನ್ನು ಹಾರೈಸಿ ಎಂದು ಅಭಿಮಾನಿಗಳನ್ನು ಅವರು ಕೋರಿದ್ದಾರೆ.

ಈ ಹಿಂದೆ ‘ರಾಜಕುಮಾರ‘ ಸಿನಿಮಾವನ್ನು ನಿರ್ದೆಶಿಸಿದ ಸಂತೋಷ್​ ಕುಮಾರ್​ ‘ಯುವರತ್ನ‘ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ‘ರಾಜ ಕುಮಾರ‘ ಸಿನಿಮಾ ಕೂಡ ಸಿನಿ ಪ್ರಿಯರ ಪ್ರಶಂಸೆಗೆ ಪಾತ್ರವಾಗಿತ್ತು. ಸದ್ಯದಲ್ಲೇ ತೆರೆಯ ಮೇಲೆ ​ದೊಡ್ಮನೆ ಹುಡುಗ ‘ಯುವರತ್ನ‘ನಾಗಿ ಮಿಂಚಲಿದ್ದಾರೆ. ಈ ಸಿನಿಮಾದಲ್ಲಿ ಪುನೀತ್​ ಜೋಡಿಯಾಗಿ ಸಯೇಶ್​ ಸೈಗಲ್​ ನಟಿಸುತ್ತಿದ್ದಾರೆ. ಅಲ್ಲದೆ, ಸೋನು ಗೌಡ, ಡಾಲಿ ಧನಂಜಯ್​, ಪ್ರಕಾಶ್​ ರಾಜ್​ ಮುಂತಾದವರು ಸಿನಿಮಾದಲ್ಲಿ ನಟಿಸುತ್ತಿದ್ದು ಕುತೂಹಲಕ್ಕೆ ಕಾರಣವಾಗಿದೆ. 


ಟೀಸರ್ ಬಿಡುಗಡೆ ಬಗ್ಗೆ ನಿರ್ದೆಶಕ ಸಂತೋಷ್​ ಆನಂದ್​ ರಾಮ್​ ಕೂಡ ಟ್ಟೀಟ್​ನಲ್ಲಿ ಮನವಿ ಮಾಡಿದ್ದು, ಮೆಜೆಸ್ಟಿಕ್​ನಲ್ಲಿರುವ ಸಂತೋಷ್​ ಚಿತ್ರಮಂದಿರದಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಸಂಜೆ 5:30 ಕ್ಕೆ ಟೀಸರ್​ ಲಾಂಚ್​ ಮಾಡುವುದಾಗಿ ತಿಳಿಸಿದ್ದಾರೆ. ಆದ್ದರಿಂದ ಅಭಿಮಾನಿಗಳಲ್ಲಿ, ಯುವ ರತ್ನ ಹೇಗೆ ಮೂಡಿಬರಲಿದೆ ಎಂದು ಕುತೂಹಲ ಗರಿಗೆದರಿದೆ. ಯುವರತ್ನ ಚಿತ್ರವನ್ನು ರಾಜ್ಯ ರಾಷ್ಟ್ರ ಮಟ್ಟದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲಿಯೂ ಚಿತ್ರೀಕರಣ ಮಾಡಿದ್ದಾರೆ. ಆದ್ದರಿಂದ ಅಭಿಮಾನಿ ಗಳಲ್ಲಿ ಸಾಮಾನ್ಯವಾಗಿ ಯೇ ನಿರೀಕ್ಷೆ ಹೆಚ್ಚಿದೆ. 


మరింత సమాచారం తెలుసుకోండి: