ರಾಧಿಕಾ ಕುಮಾರಸ್ವಾಮಿ ಅವರನ್ನು ತೆರೆ ಮೇಲೆ ಕಂಡ ಪ್ರತಿಯೊಬ್ಬರು ಅವನಿಗೆ ಫ್ಯಾನ್ಸ್ ಆಗಿರುತ್ತಾರೆ. ಅಷ್ಟರಮಟ್ಟಿಗಿನ ಅವರ  ಅಭಿನಯವಿರುತ್ತದೆ.  ಸ್ಯಾಂಡಲ್​​​ವುಡ್​ನ ಸ್ವೀಟಿ ರಾಧಿಕಾ ಕುಮಾರಸ್ವಾಮಿಗೆ ರಾಧಿಕಾ ಕುಮಾರಸ್ವಾಮಿಯೇ ಸಾಟಿ.  ರಾಧಿಕಾ ಸಿನಿಮಾಗಳೇ ರಾಧಿಕಾ ಚಿತ್ರಗಳಿಗೆ ಪೈಪೋಟಿ. ಅರೇ ಅದ್ಹೇಗೆ ! ಅಂತ ಅಚ್ಚರಿ ಪಟ್ಟರೇ ತಪ್ಪೇನು ಇಲ್ಲಾ. ‘ದಮಯಂತಿ’ಯಾಗಿ ಧಾಮ್ ಧೂಮ್ ಅಂತ ಸೌಂಡ್ ಮಾಡ್ತುತ್ತಿರುವ ಬೆನ್ನಲ್ಲೇ ‘ಭೈರಾದೇವಿ’ ಯಾಗಿ ಮಹಾಕಾಳಿ ಅವತಾರವೆತ್ತಿ ಕುಣಿದ್ದಿದ್ದಾರೆ.ಇದೀಗ ಈ ಎರಡು ಚಿತ್ರಗಳಿಗೆ ಭರ್ಜರಿ ಪೊಪೋಟಿ  ಎದುರಾಗಿದೆ ಯಂತೆ. 


ರಾಧಿಕಾ ಭೈರಾದೇವಿ ಅವತಾರದಲ್ಲಿ ಭರ್ಜರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.  ಹೆಣ್ಣು ಅಘೋರಿ ಅವತಾರದ ರಾಧಿಕಾ ರುಧ್ರ-ಭಯಾನಕ ವಾಗಿದೆ. ವಿಜಯದಶಮಿ ಪ್ರಯುಕ್ತ ಭೈರಾದೇವಿ ಬರುತ್ತಿದ್ದಾಳೆ. ರಾಧಿಕಾ ಕುಮಾರಸ್ವಾಮಿ. ಕೊಂಚ ಗ್ಯಾಪ್​ನ ನಂತರ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸ್ವೀಟಿ ಎರಡು ವರ್ಷದಿಂದ ಮೂರ್ನಾಲ್ಕು ಸಿನಿಮಾಗಳಲ್ಲಿ ನಟಿಸಿದ್ರು ಯಾವ ಸಿನಿಮಾವೂ ರಿಲೀಸ್ ಆಗಿಲ್ಲ. ಆದ್ರೆ ರಾಧಿಕಾ ನಟನೆಯ ಎಲ್ಲಾ ಸಿನಿಮಾಗಳು ಸದ್ದು ಮಾಡುತ್ತಿವೆ. ಅದ್ರಲೂ ಭೈರಾದೇವಿ ಮತ್ತು ದಮಯಂತಿ ಸಿನಿಮಾ ಸಖತ್ ನಿರೀಕ್ಷೆ ಮೂಡಿಸಿವೆ. ಕಾರಣ ಭೈರಾದೇವಿ ಮತ್ತು ದಮಯಂತಿ ಚಿತ್ರಗಳಲ್ಲಿ ರಾಧಿಕಾ ಮಾಡುತ್ತಿರುವ ಪಾತ್ರಗಳು. 


ನವರಸನ್ ನಿರ್ದೇಶನ ಮತ್ತು ನಿರ್ಮಾಣ ದಮಯಂತಿ ಸಿನಿಮಾದ ಜೊತೆ ಜೊತೆಗೆನೇ ಭೈರಾದೇವಿ ಸಿನಿಮಾ ಕೂಡ ಸದ್ದು ಗದ್ದಲ ಮಾಡುತ್ತಿದೆ. ಕೆಲದಿನಗಳ ಹಿಂದೆ ಐದು ಭಾಷೆಯಲ್ಲಿ ದಮಯಂತಿ ಚಿತ್ರದ ಟೀಸರ್​ ಬಿಡುಗಡೆಯಾಗಿತ್ತು , ಟೀಸರ್ ನೋಡಿ ಪ್ರೇಕ್ಷಕ ವಾವ್ ಎಂದಾಗಿತ್ತು. ದಮಯಂತಿ ಕಣ್ಣಮುಂದೆ ಇರುವಾಗಲೇ ಚಿತ್ರರಸಿಕರ ಮುಂದೆ ಭೈರಾದೇವಿಯೂ ಕೂಡ ಪ್ರತ್ಯಕ್ಷವಾಗಿದ್ದಾಳೆ. ಭೈರಾದೇವಿಯು  ಶ್ರೀಜೈ ಕಲ್ಪನೆಯ ವಿಭಿನ್ನ ಸಿನಿಮಾ. ಫಸ್ಟ್ ಟೈಮ್ ಹೆಣ್ಣು ಅಘೋರಿಯಾಗಿ ರಾಧಿಕಾ ಕುಮಾರಸ್ವಾಮಿ ರುಧ್ರಭಯಾನಕವಾಗಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಚಿತ್ರತಂಡ ನಡುರಾತ್ರಿ ಸ್ಮಶಾಣದಲ್ಲಿ ಶೂಟಿಂಗ್ ಮಾಡಿತ್ತು. ಅಲ್ಲಿ ರಾಧಿಕಾ ಆಘೋರಿ ಗೆಟಪ್​ನಲ್ಲಿ ಕುಣಿದಿದ್ರು , ಆ ಮೇಕಿಂಗ್ ಅನ್ನು ನಾವೇ ನಿಮಗೆ ಮೂವಿ ಮನೆಯಲ್ಲಿ ತೋರಿಸಿದ್ವಿ. ಈಗ ವಿಜಯದಶಮಿ ಪ್ರಯುಕ್ತ ಭೈರಾದೇವಿ ಚಿತ್ರದ ಹಾಡೊಂದನ್ನು ಚಿತ್ರತಂಡ ಬಿಡುಗಡೆ ಮಾಡಿದೆ. 


మరింత సమాచారం తెలుసుకోండి: