ಕಳೆದ 3 ವರ್ಷಗಳ ಹಿಂದೆ ಬಾನಲಿ ಬದಲಾಗೋ ಬಣ್ಣವೇ ಭಾವನೆ ಎಂಬ ಹಾಡು, ಡಬ್ಬಲ್ ಮೀನಿಂಗ್ ಸಖತ್ ಡೈಲಾಗ್ಸ್ ಗಳಿದ್ದ ಸಿಂಪಲ್ ಆಗಿ ಒಂದ್ ಲವ್ ಸ್ಟೋರಿ ಚಿತ್ರ ಸ್ಯಾಂಡಲ್ ವುಡ್ ಮಾತ್ರವಲ್ಲದೇ ಅಂತರ್ ರಾಜ್ಯ ಮಟ್ಟದಲ್ಲೂ  ಹೆಸರು ಮಾಡಿತ್ತು. ಈ ಚಿತ್ರದಲ್ಲಿ  ನಟಿಸಿ ಖ್ಯಾತಿ ಪಡೆದಿದ್ದ ಶ್ವೇತ ಶ್ರೀವಾತ್ಸವ್ ಅವರ ಬಗೆಗಿನ ಒಂದಿಷ್ಟು ಕುತೂಹಲಕಾರಿ ವಿಷಯಗಳು ಇಲ್ಲಿವೆ ನೋಡಿ.  ಆ ಚಿತ್ರದ ನಂತರ ಶ್ವೇತ ಸಿನಿಮಾಗಳಿಂದ ಕೊಂಚ ದೂರ ಉಳಿದುಕೊಂಡಿದ್ದರು. ಈಗ ಅಚಾನಕ್ಕಾಗಿ ಬೆಳ್ಳಿತೆರೆಗೆ ಮರಳುವ ಪ್ಲಾನ್ ಹಾಕಿಕೊಂಡಿದ್ದಾರೆ. ಮೂರು ವರ್ಷದ ಗ್ಯಾಪ್ ಬಳಿಕ ಬಣ್ಣ ಹಚ್ಚುತ್ತಿದ್ದಾರೆ. 


 ಶ್ವೇತಾ ಇದೀಗ 25 ಕೆ.ಜಿ. ತೂಕ ಕಡಿಮೆಯಾಗಿದ್ದಾರಂತೆ.  ಮೂರು ವರ್ಷಗಳ ಬಳಿಕ ಮತ್ತೆ ಸ್ಯಾಂಡಲ್​ವುಡ್​ಗೆ ಮರಳಿರುವ ಶ್ವೇತಾ ಶ್ರೀವಾತ್ಸವ್ ಹೀಗೆಂದಿದ್ದು, ಅವರು ಇದೀಗ ದೈಹಿಕವಾಗಿ ಹಗುರವಾಗಿದ್ದಾರೆ, ಮಾನಸಿಕವಾಗಿ ಮತ್ತಷ್ಟು ಸ್ಟ್ರಾಂಗ್ ಆಗಿದ್ದಾರಂತೆ. ಗರ್ಭಿಣಿಯಾಗಿದ್ದ ಅವರು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಆದ್ಯತೆ ನೀಡಿದ್ದರು. ನಂತರ ಮುದ್ದಾದ ಹೆಣ್ಣು ಮಗುವಿಗೆ ಜನ್ಮವಿತ್ತ ಅವರು ಆಕೆಯ ಲಾಲನೆ-ಪಾಲನೆಯಲ್ಲೇ 2 ವರ್ಷಗಳನ್ನು ಕಳೆದರು. ಹೀಗೆ 3 ವರ್ಷ ಸ್ಯಾಂಡಲ್​ವುಡ್​ನಿಂದ ದೂರವಿದ್ದ ಅವರು ಇದೀಗ  ‘ರಹದಾರಿ’ ಸಿನಿಮಾ ಮೂಲಕ ಚಂದನವನಕ್ಕೆ ರೀ ಎಂಟ್ರಿ ಕೊಟ್ಟಿದ್ದಾರೆ. 


 ವಿಶೇಷವೆಂದರೆ ಬಾಣಂತನ ಸಮಯದಲ್ಲಿ ನನ್ನ ತೂಕ 30 ಕೆ.ಜಿ. ಹೆಚ್ಚಾಗಿತ್ತು. ಅಚ್ಚರಿ ಎಂದರೆ ಯಾವುದೇ ಡಯೆಟ್-ವರ್ಕೌಟ್ ಮಾಡದೆ ಮಗಳ ಪಾಲನೆಯಲ್ಲೇ ನಾನು ಅಂದಾಜು 25 ಕೆ.ಜಿ. ತೂಕ ಕಳೆದುಕೊಂಡೆ’ ಎಂದು ತಾಯ್ತನದ ಸುಖ-ಸಂತೋಷವನ್ನು ಹಂಚಿಕೊಂಡರು ಶ್ವೇತಾ. ಮಗಳಿಗೆ ಎರಡು ವರ್ಷ ಆಗುತ್ತಿದ್ದಂತೆ ತಾನು ಸಿನಿಮಾಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂಬ ಭಾವ ಅವರನ್ನು ಆವರಿಸತೊಡಗಿತು. ಕಾಕತಾಳೀಯ ಎಂಬಂತೆ ಅದೇ ಸಂದರ್ಭದಲ್ಲಿ ಆಫರ್​ಗಳು ಬರತೊಡಗಿದವು. ಕಳೆದ ಆರು ತಿಂಗಳಲ್ಲಿ 9 ಸಿನಿಮಾ ಅವಕಾಶಗಳು ಬಂದಿದ್ದವು. ಆ ಪೈಕಿ 3 ಸ್ಕ್ರಿಪ್ಟ್​ಗಳನ್ನು ಶ್ವೇತಾ ತುಂಬ ಇಷ್ಟಪಟ್ಟಿದ್ದರಂತೆ. ಆದರೆ ಶೂಟಿಂಗ್​ಗಾಗಿ 30 ದಿನ ಬೇರೆ ಊರಿನಲ್ಲಿ ಇರಬೇಕಾಗುತ್ತದೆ ಎಂಬ ಒಂದೇ ಕಾರಣಕ್ಕೆ ಅವರು ಸಹಿ ಮಾಡಿರಲಿಲ್ಲ.


మరింత సమాచారం తెలుసుకోండి: