ಒಂದೇ ಒಂದು ಚಿತ್ರದ ಐಟಂ ಸಾಂಗ್ ಗಾಗಿ ಕೋಟಿಗಟ್ಟಲೆ ಸಂಭಾವನೆ ಪಡೆಯುವ ತಮನ್ನಾ ಮಿಲ್ಕಿ ಬ್ಯೂಟಿ ಎಂದೇ ಸೌತ್ ಸಿನಿ ಇಂಡಸ್ಟ್ರಿಯಲ್ಲಿ ಅಭಿಮಾನಿಗಳಿಂದ ಕರೆಸಿ ಕೊಳ್ಳುತ್ತಾರೆ. ಸಣ್ಣಪುಟ್ಟ ಪಾತ್ರಗಳಿಂದ ಹಿಡಿದು ನಟಿಯಾಗಿ ಮಿಂಚುತ್ತಿದ್ದಾರೆ. ದೊಡ್ಡ ದೊಡ್ಡ ನಟರ ಜೊತೆ ಅಭಿನಯಿಸಿದ್ದಾರೆ. ಇಷ್ಟೇಲ್ಲಾ ಮಾಡಿರುವ ಇವರಿಗೆ ಕಾಲಿವುಡ್ ನ ವಿಜಯ್ ಯಾರು ಅಂತ ಗೊತ್ತೇ ಇಲ್ವಂತೆ. 


ಮಿಲ್ಕಿ ಬ್ಯೂಟಿ ತಮನ್ನಾ ಅಭಿನಯದ ಪೆಟ್ರೋಮ್ಯಾಕ್ಸ್ ಚಿತ್ರದ ಪ್ರಚಾರದ ವೇಳೆ ವಿಜಯ್ ಕುರಿತು ತಮನ್ನಾ ಭಾಟಿಯಾ ಹೇಳಿಕೆ ನೀಡಿದ್ದು ದಳಪತಿ ಅಭಿಮಾನಿಗಳ ಸಿಟ್ಟಿಗೆ ಕಾರಣರಾಗಿದ್ದಾರೆ. ಪೆಟ್ರೋಮ್ಯಾಕ್ಸ್ ಚಿತ್ರದ ಪ್ರಚಾರ ಕಾರ್ಯಕ್ರಮದ ವೇಳೆ ವಿಜಯ್ ಕುರಿತು ಹೇಳಿ ಎಂದಾಗ ನಾನು ವಿಜಯ್ ಜೊತೆ ನಟಿಸುವಾಗ ಬಹಳ ಚಿಕ್ಕವಳು. ಆ ಚಿತ್ರದಲ್ಲಿ ನನ್ನದು ಸಣ್ಣ ಪಾತ್ರ. ನಾನೊಬ್ಬ ಅಭಿಮಾನಿಯಂತೆ ನಟಿಸಿದ್ದೇನೆ. ನಾನು ಹೆಚ್ಚಾಗಿ ಮಾತನಾಡುತ್ತಿರಲಿಲ್ಲ. ನಿಜ ಹೇಳಬೇಕು ಅಂದರೆ ಅವರ ಬಗ್ಗೆ ನನಗೆ ಹೆಚ್ಚಾಗಿ ಗೊತ್ತಿಲ್ಲ. ಹೀಗಾಗಿ ನಾನು ಅವರ ಬಗ್ಗೆ ಹೆಚ್ಚಾಗಿ ಹೇಳಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. 


ಇದಕ್ಕೆ ವಿಜಯ್ ಅಭಿಮಾನಿಗಳು ಗರಂ ಆಗಿದ್ದು ಒಂದು ಕಾಲದಲ್ಲಿ ಎಂಜಿ ರಾಮಚಂದ್ರನ್, ಶಿವಾಜಿ, ಆ ಬಳಿಕ ಸೂಪರ್ ಸ್ಟಾರ್ ರಜನಿಕಾಂತ್, ಕಮಲ್ ಹಾಸನ್, ಈಗ ವಿಜಯ್ ಆ ಕ್ರೇಜ್ ಹೊಂದಿದ್ದಾರೆ. ಅಂತ ವಿಜಯ್ ಜೊತೆ ಸಿನಿಮಾವೊಂದರಲ್ಲಿ ನಟಿಸಿದ್ದು ಅವರು ನನಗೆ ಗೊತ್ತಿಲ್ಲ ಎಂದು ಹೇಳುವುದು ಸರಿಯಿಲ್ಲ ಎಂದಿರುವುದು ತೀವ್ರವಾಗಿ ವೈರಲ್ ಆಗಿದೆ. ಅಭಿಮಾನಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ. 


ಕೋಟಿಗಟ್ಟಲೆ ಸಂಭಾವನೆ ಪಡೆಯುವ ಮಿಲ್ಕಿ ಬ್ಯೂಟಿ ಇತ್ತೀಚಿನ ದಿನಗಳಲ್ಲಿ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆ ಜಿ ಎಫ್ ಚಿತ್ರದಲ್ಲಿ ನಟಿಸಿದ್ದರು. ಅಷ್ಟೇ ಅಲ್ಲದೆ ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಸೈರಾ ನರಸಿಂಹ ರೆಡ್ಡಿ ಚಿತ್ರದಲ್ಲಿ ಫುಲ್ ಮಿಂಚಿದ್ದರು. ತಮನ್ನಾ ಕಾಲಿವುಡ್ ನಲ್ಲಿಯೂ ಸಹ ತನ್ನದೇ ಆದಂತಹ ಖ್ಯಾತಿ ಪಡೆದಿದ್ದು, ಅಪಾರವಾದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಆದರೆ ಇದೀಗ ಈ ರೀತಿಯ ಹೇಳಿಕೆ ನೀಡಿರುವುದು ವಿವಾದಾತ್ಮಕ ವಾಗಿದ್ದು, ಮುಂದೇನಾಗುತ್ತದೆ ಎಂಬುದು, ವಿಜಯ್ ಅವರ ಪ್ರತಿಕ್ರಿಯೆ ಹೇಗಿರುತ್ತದೆ ಎಂಬುದು ಕಾದು ನೋಡಬೇಕಾಗಿದೆ. 


మరింత సమాచారం తెలుసుకోండి: