
ನವದೆಹಲಿ: ವಿಧಾನ ಸಭಾ ಚುನಾವಣಾ ಫಲಿತಾಂಶ ಬಂದು ತಿಂಗಳು ಸಮೀಪಿಸುತ್ತಿದ್ದರು ಸಹ ಸರ್ಕಾರ ರಚನೆಗೆ ಯಾರೂ ಮುಂದಾಗದಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ. ಇದೀಗ ಮುಂಬೈನಲ್ಲಿ ಭಾರೀ ಹೈಡ್ರಾಮಾ ನಡೆಯುತ್ತಿದ್ದು ರಾಷ್ಟ್ರಪತಿ ಆಡಳಿತಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ.
ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಸೋಮವಾರ ರಾತ್ರಿ ಎನ್ಸಿಪಿಗೆ ಸರ್ಕಾರ ರಚಿಸುವಂತೆ ಆಹ್ವಾನ ನೀಡಿ ರಾತ್ರಿ 8:30ರ ವರೆಗೆ ಗಡುವು ನೀಡಿದ್ದರು. ಈ ಗಡುವು ಮುಗಿಯುವದರ ಒಳಗೆ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಿದ್ದಾರೆ. ರಾಜ್ಯಪಾಲರ ಶಿಫಾರಸು ಬರುತ್ತಿದ್ದಂತೆ ಮೋದಿ ನೇತೃತ್ವದ ನಡೆದ ಕ್ಯಾಬಿನೆಟ್ ಸಭೆ ತುರ್ತು ಒಪ್ಪಿಗೆ ನೀಡಿದ್ದು ರಾಷ್ಟ್ರಪತಿ ಆಡಳಿತ ಜಾರಿಗೆ ಬಂದಿದೆ.
ರಾಷ್ಟ್ರಪತಿ ಆಡಳಿತಕ್ಕೆ ಶಿವಸೇನೆ ವಿರೋಧ ವ್ಯಕ್ತಪಡಿಸಿದ್ದು ಸುಪ್ರೀಂ ಕೋರ್ಟ್ ಮೊರೆ ಹೋಗುವ ಸಾಧ್ಯತೆಯಿದೆ. ಆದರೆ ನಿಗದಿತ ಸಮಯದ ಮುಗಿಯುವುದರ ಒಳಗಡೆ ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಿದ್ದಕ್ಕೆ ಶಿವಸೇನೆ ನಾಯಕಿ ಪ್ರಿಯಾಂಕ ಚತುರ್ವೇದಿ ರಾಜ್ಯಪಾಲರ ವಿರುದ್ಧ ಕಿಡಿಕಾರಿದ್ದಾರೆ. ಪರೋಕ್ಷವಾಗಿ ನಾವು ಸರ್ಕಾರ ರಚನೆಗೆ ಸಿದ್ಧರಿದ್ದೇವೆ ಎಂಬುದು ತಿಳಿಸಿದ್ದಾರೆ.
ಮಹಾರಾಷ್ಟ್ರ ವಿಧಾನಸಭಾಚುನಾವಣಾ ಫಲಿತಾಂಶ ಬಂದು 19ದಿನವಾದರೂ ಇಲ್ಲಿಯವರೆಗೆ ಯಾರೂ ಸರ್ಕಾರ ರಚನೆ ಮಾಡಿಲ್ಲ. ಇದು ಮೊದಲ ಕಾರಣವಾದರೆ ಎರಡನೆಯದು ಎಲ್ಲ ಪಕ್ಷಗಳಿಗೆ ಸರ್ಕಾರ ರಚಿಸಲು 24 ಗಂಟೆಗಳ ಸಮಯವನ್ನು ಮಾತ್ರ ನೀಡಲಾಗುತ್ತದೆ. ಯಾವುದೇ ಕಾರಣಕ್ಕೂ ಸಮಯವನ್ನು ಮುಂದೂಡಲು ಸಾಧ್ಯವಿಲ್ಲ.ಎನ್ಸಿಪಿ ಈ ಅವಧಿಯನ್ನು ಮೂರು ದಿನಕ್ಕೆ ವಿಸ್ತರಿಸಬೇಕೆಂದು ಕೇಳಿಕೊಂಡಿತ್ತು. ರಾಜ್ಯಪಾಲರು ಮೂರು ದಿನಗಳ ಕಾಲ ಸಮಯ ಮುಂದೂಡಲು ಸಾಧ್ಯವಿಲ್ಲ ಎಂದು ಹೇಳಿ ಕೇಂದ್ರ ಸರ್ಕಾರ ರಾಷ್ಟ್ರಪತಿ ಆಡಳಿತ ಜಾರಿ ಮಾಡಲು ಶಿಫಾರಸು ಮಾಡಿದ್ದಾರೆ ಎಂದು ಮೂಲಗಳನ್ನು ಆಧಾರಿಸಿ ಮಾಧ್ಯಮ ವರದಿ ಮಾಡಿದೆ.
ಎನ್ಸಿಪಿ ನಾಯಕ ನವಾಬ್ ಮಲ್ಲಿಕ್ ಪ್ರತಿಕ್ರಿಯೆ ಇಂದು ನಾವು ಸರ್ಕಾರ ರಚನೆ ಸಂಬಂಧಸಭೆ ನಡೆಸಿದ್ದೇವೆ. ರಾಜ್ಯಪಾಲರು ನಮಗೆ ರಾತ್ರಿ 8:30ರವರೆಗೆ ಸಮಯ ನೀಡಿದ್ದಾರೆ.ಮಲ್ಲಿಕಾರ್ಜುನ ಖರ್ಗೆ, ಗುಲಾಂ ನಬಿ ಅಜಾದ್, ಕೆಸಿ ವೇಣುಗೋಪಾಲ್ ಅವರು ಮುಂಬೈನಲ್ಲಿ ಸಂಜೆ 5ಗಂಟೆಗೆ ಶರದ್ ಪವಾರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿಸಿದರು.
Please do not make derogatory comments, comments those attack any person directly, indirectly, comments those create societal pressures, comments those are not ethical & moral. Please do support us to moderate and remove the comments which doesn't fit to this comment policy - India Herald Group