ರಾಜ್ಯ ರಾಜಕೀಯದಲ್ಲಿ ಭಾರೀ ಕುತೂಹಲ ಮೂಡಿಸಿರುವ ಉಪ ಚುನಾವಣೆಯು ದಿನ ಕಳೆದಂತೆ ರಂಗೇರುತ್ತಿದೆ. ಇದೀಗ ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರು ಜೆಡಿಎಸ್ ಪಕ್ಷದ 10 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದ್ದಾರೆ. ಅನರ್ಹರು ಸಹ ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿರುವುದರಿಂದ ಜೆಡಿಎಸ್ ನಲ್ಲಿಯೂ ರಾಜಕೀಯ ಇದೀಗ ಸೋಲು ಗೆಲುವಿನ ಲೆಕ್ಕಾಚಾರ ಭರ್ಜರಿಯಾಗಿದೆ. 


ಸುಪ್ರೀಂ ಕೋರ್ಟ್ ನ ತೀರ್ಪಿನ ಬಳಿಕ ಗುರುವಾರ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, 10 ಕ್ಷೇತ್ರಗಳಿಗೆ ಅಭ್ಯರ್ಥಿ ಗಳ ಹೆಸರು ಪ್ರಕಟಿಸಿದೆ. ಹೊಸಕೋಟೆಯಲ್ಲಿ ಶರತ್​ ಬಚ್ಚೇಗೌಡಗೆ ಬೆಂಬಲಿಸಲಿದ್ದು, ಉಳಿದ ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳನ್ನು ನಾಳೆ ಘೋಷಿಸುವು ದಾಗಿ ತಿಳಿಸಿದೆ. ಜೆಡಿಎಸ್​ ಅಭ್ಯರ್ಥಿ ಪಟ್ಟಿ ಬಿಡುಗಡೆಗೊಳಿಸಿದ ಸುದ್ದಿಗೋಷ್ಠಿ ಮಾತನಾಡಿದ ಅವರು,  ಬಿಜೆಪಿಗೆ ನಾವು ಶರಣಾಗಿಲ್ಲ. ನಾವು ಯಾವುದೇ ಪಕ್ಷದೊಂದಿಗೆ ರಾಜಿ  ಶರಣಾಗುವ ಪ್ರಶ್ನೆ ಇಲ್ಲ. ಯಾರ ಜೊತೆಯೂ ಹೊಂದಾಣಿಕೆ ಮಾಡಿಕೊಳ್ಳದೇ, ಎಲ್ಲಾ ಕ್ಷೇತ್ರಗಳ ಲ್ಲಿಯೂ ನಾವು ಸ್ಪರ್ಧಿಸಲಿದ್ದೇವೆ ಎಂದು ಸ್ಪಷ್ಟಪಡಿಸಿದರು.


ಜೆಡಿಎಸ್ ಬಿಡುಗಡೆ ಗೊಳಿಸಿರುವ 10 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಈ ಕೆಳಗಿನಂತಿದೆ. 
1) ಯಲ್ಲಾಪುರ - ಚೈತ್ರಾ ಗೌಡ
2) ಹಿರೇಕೆರೂರು -ಉಜನಪ್ಪ ಜಟ್ಟೆಪ್ಪ ಕೋಡಿಹಳ್ಳಿ
3) ರಾಣೆ ಬೆನ್ನೂರು - ಮಲ್ಲಿಕಾರ್ಜುನ ಹಲಗೇರಿ
4) ವಿಜಯನಗರ - ಎನ್.ಎಂ.ನಬಿ
5) ಕ್ಕಬಳ್ಳಾಪುರ - ಕೆ.ಪಿ.ಬಚ್ಚೇಗೌಡ
6) ಕೆ.ಆರ್ ಪುರಂ - ಸಿ.ಕೃಷ್ಣಮೂರ್ತಿ
7) ಶವಂತಪುರ - ಟಿ.ಎನ್ ಜವರಾಯಿಗೌಡ
8) ಶಿವಾಜಿನಗರ - ತನ್ವೀರ್ ಅಹ್ಮದ್​​ವುಲ್ಲಾ
9) ಸಕೋಟೆ - ಪಕ್ಷೇತರ ಅಭ್ಯರ್ಥಿಗೆ ಬೆಂಬಲ
10) ಕೆ.ಆರ್.ಪೇಟೆ - ದೇವರಾಜ್ ಬಿ.ಎಲ್ಹು


ಮುಂದಿನ ತಿಂಗಳು​ 5 ರಂದು ನಡೆಯಲಿರುವ ಉಪಚುನಾವಣೆಗೆ ಈಗಾಗಲೇ ನಾಮಪತ್ರ ಸಲ್ಲಿಕೆ ಕಾರ್ಯಾರಂಭವಾಗಿದ್ದು, ನ.18 ಕಡೆಯ ದಿನವಾಗಿದೆ. ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿರುವ ಉಪ ಚುನಾವಣೆಯಲ್ಲಿ ಅನರ್ಹರನ್ನು ಜನರು ಕೈ ಹಿಡಿಯುತ್ತಾರಾ ಇಲ್ಲವಾ ಎಂಬುದು ಕಾದು ನೋಡ ಬೇಕಾಗಿದೆ.


మరింత సమాచారం తెలుసుకోండి:

jds