ಮಂಡ್ಯ: ಮನದಾಳದ ದು:ಖ ಒತ್ತಡ ನೋವುಗಳಿಂದ ಪದೇ ಪದೇ ಸಾರ್ವಜನಿಕ ಸಭೆಗಳಲ್ಲಿ ಕಣ್ಣೀರಿಡುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಬುಧವಾರ ಮತ್ತೇ ಕಣ್ಣೀರಿಟ್ಟಿದ್ದಾರೆ. ಹೌದು ಅದು ಯಾಕೆ ಗೊತ್ತಾ. 
 
ಜಿಲ್ಲೆಯ ಕಿಕ್ಕೇರಿಯಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಮಾತನಾಡುವಾಗ  ನಾನೇನು ತಪ್ಪು ಮಾಡಿದೆ ಎಂದು ಜಿಲ್ಲೆಯ ಜನರಾದ ನೀವು ನನ್ನನ್ನು ಕೈ ಬಿಟ್ಟಿರಿ ಎಂದು ಭಾವುಕರಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಣ್ಣೀರು ಸೇರಿಸಿದರು.  ಸಮಾವೇಶದಲ್ಲಿ ಎಚ್‍ಡಿಕೆ ಸಿಎಂ ಆಗಿದ್ದಾಗ ಅಂದಿನ ಶಾಸಕರಾಗಿದ್ದ ನಾರಾಯಣಗೌಡ ಅವರು ಬರೆದ ಪತ್ರವನ್ನು ವೇದಿಕೆ ಮೇಲೆಯೇ ಓದಿದರು.
 
ನಂತರ ನಾನೇನು ತಪ್ಪು ಮಾಡಿದೆ ಎಂದು ಸಭಿಕರನ್ನು ಪ್ರಶ್ನಿಸಿದರು. ನನ್ನ ಮಗನನ್ನು ಚುನಾವಣೆಗೆ ನಿಲ್ಲಿಸಬೇಕೆಂದು ನಾನು ಬಯಸಿರಲಿಲ್ಲ. ನೀವೇ ಒತ್ತಾಯ ಮಾಡಿ ಚುನಾವಣೆಗೆ ನಿಲ್ಲುವಂತೆ ಮಾಡಿದಿರಿ. ಜಿಲ್ಲೆಯ ಜನರನ್ನು ಸ್ಪರ್ಧಿಸಲು ಅನುಮತಿ ನೀಡಿದೆ. ಆದರೆ ನೀವೇ ನನ್ನ ಕೈ ಬಿಟ್ಟಿರಿ ಎಂದು ಭಾವುಕರಾಗಿದ್ದಾರೆ. ಭಾವುಕರಾಗಿ ಕಣ್ಣೀರು ಹಾಕಿದರು. 
 
ಜಿಲ್ಲೆಯ ಜನರ ಪ್ರೀತಿಯೇ ಇಲ್ಲದ ಮೇಲೆ ಮುಖ್ಯಮಂತ್ರಿ ಸೇರಿದಂತೆ ಉಳಿದ ಅಧಿಕಾರ ವ್ಯರ್ಥ ಎಂದು ಕಣ್ಣೀರು ಹಾಕಿದರು. ಅಲ್ಲದೆ ನಾನು ನನ್ನ ಮಗನನ್ನು ಚುನಾವಣೆಗೆ ಸ್ಪರ್ಧಿಸಬೇಕು ಎಂದುಕೊಂಡಿರಲಿಲ್ಲ. ನೀವೇ ಈ ಕುರಿತು ಒತ್ತಾಯ ಮಾಡಿ, ಬಲವಂತವಾಗಿ ನಿಲ್ಲಿಸಿದಿರಿ. ಜಿಲ್ಲೆಯ ಜನರೇ ನನ್ನ ಕೈ ಬಿಟ್ಟ ಮೇಲೆ ಸ್ವಾಭಿಮಾನ ಎಲ್ಲಿಂದ ಬಂತು? ನಾನು ಒಂದೇ ಒಂದು ದಿನವೂ ಸರಿಯಾಗಿ ನಿದ್ದೆ ಮಾಡಿಲ್ಲ.
 
ಮೈತ್ರಿ ಸರ್ಕಾರದ ಅವಧಿಯಲ್ಲಿ ನನ್ನನ್ನು ಗುಲಾಮನ ರೀತಿಯಲ್ಲಿ ನಡೆಸಿಕೊಂಡರು ಎಂದು ಬೇಸರ ವ್ಯಕ್ತಪಡಿಸಿದರು. ಕಣ್ಣೀರು ಹಾಕುತ್ತಲೇ ಮಾತನಾಡಿದ ಎಚ್‍ಡಿಕೆ, ಜಿಲ್ಲೆಯ ಜನರಿಗೆ 26 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿದ್ದು ನನ್ನ ತಪ್ಪಾ? ಪತ್ರಿಕೆಯವರು, ಟಿವಿಯವರು ಏನಾದರೂ ಬರೆದುಕೊಳ್ಳಲಿ. ಮಹಿಳೆಯರನ್ನು ನೋಡಿ ನನಗೆ ಕಣ್ಣೀರು ತುಂಬಿಕೊಂಡಿದ್ದೆ. ಈಗ ಆ ನೀರು ಹೊರ ಬರುತ್ತಿದೆ ಎಂದು ಭಾವುಕರಾದರು. ಜೊತೆಗೆ ಬಾಂಬೆ ಕಳ್ಳ ನಾರಾಯಣ ಗೌಡಗೆ ಟಿಕೆಟ್ ಕೊಟ್ಟು ತಪ್ಪು ಮಾಡಿದೆ ಎಂದರು.  

మరింత సమాచారం తెలుసుకోండి: