ಬಳ್ಳಾರಿ: ನಗರ ಶಾಸಕ ಸೋಮಶೇಖರ್‌ ರೆಡ್ಡಿಯವರನ್ನು ಬಂಧಿಸುವಂತೆ ಕರ್ನಾಟಕ ಸರಕಾರ ಮತ್ತು ಪೊಲೀಸ್‌ ಇಲಾಖೆಗೆ ಮನವಿ ಮಾಡಿದ್ದೆ. ಮತ್ತು ಮಾಧ್ಯಮಗಳ ಮೂಲಕ ಅವರ ಬಂಧನಕ್ಕೆ ಸೋಮವಾರದವರೆಗೆ ಗಡುವು ನೀಡಿದ್ದೆ. ಆದರೆ ಅವರನ್ನು ಪೊಲೀಸರು ಬಂಧಿಸಿಲ್ಲ ಎಂಬುದಾಗಿ ಪತ್ರದಲ್ಲಿ ಜಮೀರ್‌ ಅಹಮದ್‌ ಖಾನ್‌ ಉಲ್ಲೇಖಿಸಿದ್ದಾರೆ. ಇನ್ನೇನು ಇದೆ ಗೊತ್ತಾ ಪತ್ರದಲ್ಲಿ. ಇಲ್ಲಿದೆ ನೋಡಿ ಆ ಮಾಹಿತಿ. 
 
 ಬಳ್ಳಾರಿ ನಗರ ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ ಮನೆ ಮುಂದೆ ಸೋಮವಾರ ಚಾಮರಾಜಪೇಟೆ ಕಾಂಗ್ರೆಸ್‌ ಶಾಸಕ ಜಮೀರ್ ಅಹಮ್ಮದ್ ಖಾನ್‌ ಧರಣಿ ನಡೆಸಲಿದ್ದಾರೆ. ಈ ಮೂಲಕ ಕಳೆದ ಕೆಲವು ದಿನಗಳಿಂದ ರೆಡ್ಡಿ ಮತ್ತು ಜಮೀರ್‌ ನಡುವೆ ನಡೆಯುತ್ತಿದ್ದ ಮಾತಿನ ಚಕಮಕಿ ಮನೆ ಬಾಗಿಲಿಗೆ ಬಂದು ತಲುಪಿದೆ. ಯಾವ ಕ್ಷಣದಲ್ಲಿ ಯಾವ ತಿರುವು ಪಡೆಯುವುದು ಅರ್ಥವಾಗದಂತಾಗಿದೆ.
 
 
ಜನವರಿ 3ರ ಶುಕ್ರವಾರ ಬಳ್ಳಾರಿಯಲ್ಲಿ ಸಿಎಎ ಪರ ಪ್ರತಿಭಟನೆಯಲ್ಲಿ ಮಾತನಾಡಿದ್ದ ಸೋಮಶೇಖರ್‌ ರೆಡ್ಡಿ, "ನೀವು ಶೇ. 17ರಷ್ಟು ಮಾತ್ರವಿದ್ದು, ಶೇ. 80ರಷ್ಟು ನಾವು ಇದ್ದೇವೆ. ನಾವು ತಿರುಗಿಬಿದ್ದರೆ ನಿಮ್ಮ ಪರಿಸ್ಥಿತಿ ಏನಾಗಬೇಕು ಎಂಬುದನ್ನು ಊಹಿಸಿಕೊಳ್ಳಿ. ಹಿಂದೂಗಳನ್ನು ಕೆಣಕಲು ಬರಬೇಡಿ," ಎಂಬುದಾಗಿ ಮುಸ್ಲಿಂ ಸಮುದಾಯದವರಿಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದರು. ಈ ಹೇಳಿಕೆ ವಿರುದ್ಧ ಜಮೀರ್‌ ಅಹಮದ್‌ ಖಾನ್‌  ಕೆಂಡ ಕಾರಿದ್ದರು. ಸೋಮಶೇಖರ್‌ ರೆಡ್ಡಿಯವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ಇದೀಗ ಅವರು ರೆಡ್ಡಿ ಮನೆ ಮುಂದೆಯೇ ಧರಣಿ ನಡೆಸಲು ಮುಂದಾಗಿದ್ದಾರೆ. ಈ ಸಂಬಂಧ ಬಳ್ಳಾರಿ ಎಸ್ಪಿ ಸಿಕೆ ಬಾಬಾ ಅವರಿಗೆ ಭದ್ರತೆ ಒದಗಿಸುವಂತೆ ಕೋರಿ ಪತ್ರ ಬರೆದಿದ್ದಾರೆ.
 
ಸೋಮಶೇಖರ್‌ ರೆಡ್ಡಿಯವರನ್ನು ಬಂಧಿಸುವಂತೆ ಕರ್ನಾಟಕ ಸರಕಾರ ಮತ್ತು ಪೊಲೀಸ್‌ ಇಲಾಖೆಗೆ ಮನವಿ ಮಾಡಿದ್ದೆ. ಮತ್ತು ಮಾಧ್ಯಮಗಳ ಮೂಲಕ ಅವರ ಬಂಧನಕ್ಕೆ ಸೋಮವಾರದವರೆಗೆ ಗಡುವು ನೀಡಿದ್ದೆ. ಆದರೆ ಅವರನ್ನುಪೊಲೀಸರು ಬಂಧಿಸಿಲ್ಲ ಎಂಬುದಾಗಿ ಪತ್ರದಲ್ಲಿದೆ. "ಈ ಹಿನ್ನೆಲೆಯಲ್ಲಿ ಬಳ್ಳಾರಿಯ ಸಿರುಗುಪ್ಪ ರಸ್ತೆಯ ಹವಂಬಾವಿ ಪ್ರದೇಶದಲ್ಲಿರುವ ಶಾಸಕ ಜಿ ಸೋಮಶೇಖರ್‌ ರೆಡ್ಡಿ ಮನೆ ಮುಂದೆ ಶಾಂತಿಯುತ ಧರಣಿ ನಡೆಸುವುದನ್ನು ನಿಮ್ಮ ಗಮನಕ್ಕೆ ತರುತ್ತಿದ್ದೇನೆ.ಸೂಕ್ತ ಭದ್ರತೆ ನೀಡಿ ಎಂದಿದ್ದಾರೆ.

మరింత సమాచారం తెలుసుకోండి: