ಗದಗ: ಪ್ರಸ್ತುತ ರಾಷ್ಟ್ರದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಜಾರಿಗೆ ಆದಾಗಿನಿಂದ ಇಂದಿನವರೆಗೂ ಪ್ರತಿಭಟನೆಗಳು ನಡೆಯುತ್ತಿದ್ದರೂ ಸಹ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಆಗಲೇ ಸಿಎಎ ಜಾರಿ ಮಾಡಬೇಕೆಂದು ಆಗ್ರಹಿಸಿದ್ದರು ಎಂದು  ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಕಾಂಗ್ರೆಸ್​ ವಿರುದ್ಧ ಗುಡುಗಿದ್ದಾರೆ. 
 
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ರಾಜಕೀಯ ಬೆಳೆಯನ್ನ ಬೆಯಿಸುವಂತಹ ಕೆಲಸವನ್ನ ಕಾಂಗ್ರೆಸ್​ ಮಾಡಿದೆ. ಕಾಂಗ್ರೆಸ್ ಬೆಂಕಿ ಹಾಕಿರುವುದು ಈ ರಾಷ್ಟ್ರದ ವಸ್ತುಗಳಿಗೆ ಅಲ್ಲ ಗಾಂಧಿ ಚಿಂತನೆಗೆ ಬೆಂಕಿ ಹಾಕಿದೆ ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲದೇ, 2002 ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ಇರುವಾಗ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಪೌರತ್ವ ಕಾಯ್ದೆ ಯಾಕೆ ಜಾರಿಗೆ ಮಾಡುತ್ತಿಲ್ಲ. ಬೇರೆ ದೇಶದಿಂದ ಬಂದಂತಹ ಅಲ್ಪ ಸಂಖ್ಯಾತರಿಗೆ, ಕ್ರೈಸ್ತರಿಗೆ, ಸಿಕ್ಕರಿಗೆ, ಜೈನರಿಗೆ, ಪಾರ್ಸಿಯರಿಗೆ ಯಾಕೆ ಪೌರತ್ವ ಕೊಟ್ಟಿಲ್ಲ ಎಂದು ಪ್ರಶ್ನಿಸಿದ್ದರು ಎಂದು ಕೇಂದ್ರ ಬಿಜೆಪಿ ಸರ್ಕಾರ ಬಿಡುಗಡೆ ಮಾಡಿದ ವೀಡಿಯೋವೊಂದರ ಕುರಿತು ಹೇಳಿದ್ದಾರೆ. ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಮಹತ್ಮಾ ಗಾಂಧಿಗೆ ಅವಮಾನ ಮಾಡಿದೆ. ಮನಮೋಹನ್ ಸಿಂಗ್ ಪ್ರಧಾನಿ ಆಗಿದ್ದಾಗ ಅವರನ್ನ ಅವಮಾನ ಮಾಡಿ ಬಾಯಿ ಮುಚ್ಚಿಸುವ ಕೆಲಸ ಕಾಂಗ್ರೆಸ್​​ ಮಾಡಿದೆ ಎಂದು ಕಟೀಲ್ ತಿಳಿಸಿದ್ದಾರೆ. 
 
ಮಂಗಳೂರು ಗಲಭೆ ಬಗ್ಗೆ ಮಾತನಾಡಿ, ಇನ್ನು ಮಂಗಳೂರಿನಲ್ಲಿ ಕಾಂಗ್ರೆಸ್ ಗಲಾಟೆಯನ್ನ ಸೃಷ್ಟಿಯನ್ನ ಮಾಡಿತು. ದೆಹಲಿಯಲ್ಲಿ ಸಹ ಇದನ್ನೆ ಮುಂದುವರೆಸಿದ್ದಾರೆ. ಜನರ ನಡುವೆ ಗಲಾಟೆ ಸೃಷ್ಟಿ ಮಾಡಿ ಕೈ ಬಿಟ್ಟು ಮರುದಿನ ಬೆಂಕಿ ಹಚ್ಚಿಸುವ ಕೆಲಸ ಕಾಂಗ್ರೆಸ್​ ನಾಯಕರು ಮಾಡುತ್ತಿದ್ದಾರೆ. ಸಿಎಎ ಪರವಾಗಿ ನಿಂತರು ಎಂದು ಅಲ್ಲಿರುವ ಮೌಲ್ಯವನ್ನ ಮುಗಿಸಲು ಮುಂದಾದರು. ಅಮೇರಿಕಾದ ಅಧ್ಯಕ್ಷ ಟ್ರಂಪ್​ ಬರುವ ಹೊತ್ತಿಗೆ ಗಲಾಟೆ ಯಾಕೆ ಜೋರಾಯಿತು? ಶಾಂತಿಯುತ್ತ ಇದ್ದವರ ಕೈಗೆ ಪಿಸ್ತೂಲ್ ಗಳು ಹೆಗೆ ಬಂದವು? ಕಲ್ಲುಗಳು ಹೇಗೆ ಬಂದವು? ಈ ಎಲ್ಲಾದರ ಹಿಂದೆ ಕಾಂಗ್ರೆಸ್ ಮಾಸ್ಟರ್ ಪ್ಲ್ಯಾನ್​ ಇದೆ ಎಂದು ನಳಿನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ.

మరింత సమాచారం తెలుసుకోండి: