"ಶರೀರ ಮಾಧ್ಯಮಂ ಕುಲು ಧರ್ಮ ಸಾಧನಂ" ನಾವು ಬದುಕಿದ್ದರೆ ಏನಾದರು ಮಾಡಬಹುದು. ಜಗತ್ತಿನ ಮತ್ತು ನಮ್ಮ ದೇಶದಲ್ಲಿನ ಇಂದಿನ ಪರಿಸ್ಥಿತಿಗೆ ಕೆಲವು ಅನಿಸಿಕೆಗಳು:-

 

ಇಲ್ಲಿ‌ ಕರೋನಾ ಬಗ್ಗೆ ಭೀತಿ ಪಡುವ ಅಗತ್ಯ ಇಲ್ಲ. ಯಾಕೆಂದರೆ ಇದನ್ನು ಸರಿಯಾಗಿ ನಾವು ಮುನ್ನೆಚ್ಚರಿಕೆಯಿಂದ ನಿಭಾಯಿಸಿದರೆ ಯಾವುದೇ ಸಮಸ್ಯೆ ಇಲ್ಲದೇ ಇದನ್ನು ಎದುರಿಸಬಹುದು. ಸರಕಾರವು ಇದರ ಬಗ್ಗೆ ಅನೇಕ ಮುನ್ಸೂಚನೆ ಕೈಗೊಂಡಿದೆ. 

 

೧. ಸರ್ಕಾರದ ಮನವಿ ಸೂಚನೆಗಳ ಪಾಲನೆಯ ಜೊತೆಗೆ ತಿಳಿದವರ, ಮಾರ್ಗದರ್ಶಿಗಳ, ಸಲಹೆ ಸೂಚನೆಗಳನ್ನು ಪಾಲಿಸುವುದು.

 

೨.ಇಂದು ಅತೀ ಮುಖ್ಯವಾಗಿ ಆಗಬೇಕಾದ ಅಂಶಗಳಲ್ಲೊಂದೆಂದರೆ.. ನಿತ್ಯ ದುಡಿದು ತಿನ್ನುವವವರಿಗೆ ಕೊಡುವ ಕೋಟಿ ಕೈಗಳು ಭರವಸೆ ನೀಡಿ ಅವರಿಗೆ ಈ ಕೊರೊನಾ ಮಾರಿ ಓಡಿಸುವ ಕಾರ್ಯದಲ್ಲಿ ಧೈರ್ಯವಾಗಿ ಪಾಲ್ಗೊಳ್ಳಲು ನೆರವಾಗಬೇಕು.

 

೩.ಸತ್ತವರ ಮನೆ ಗಳು ಹಿರಿಯುವುದಕ್ಕಿಂತ, ಅವರು ನೋವಿನಲ್ಲಿ ಭಾಗಿಯಾಗಬೇಕು. 25ರೂನ ಮಾಸ್ಕ್ ಗಳನ್ನ 50,100ಕ್ಕೆ ಮಾರುವ ಬರಲು ಅಷ್ಟಕ್ಕೆ.. ನೀವು ಉಳ್ಳವರಾದರೆ 15,10ಕ್ಕೆ ಇನ್ನೂ ಉಳ್ಳವರಾದರೆ ಉಚಿತವಾಗಿ ಇಂತಹ ಕಾಲದಲ್ಲಿ ದೇಶ ಸೇವೆ ಮಾಡಬೇಕು. (ಒಟ್ಟಿನಲ್ಲಿ ಅಗತ್ಯ ವಸ್ತುಗಳು).

 

೪.ನಿತ್ಯ ದುಡಿದು ತಿನ್ನುವವವರಿಗೆ ಅಕ್ಕಪಕ್ಕದವರು ಕೈಲಾದ ಸಹಾಯ ಮಾಡುವುದು. ದೇವಸ್ಥಾನ, ಮಠ ಮಂದಿರಗಳು ಇಂತಹ ಸಂದರ್ಭದಲ್ಲಿ ಅವರ ಜೊತೆ ನಿಲ್ಲಬೇಕು. (ಧೈರ್ಯ ತುಂಬುವ ಕೆಲಸ)

 

೫.ಎಲೆಕ್ಷನ್ ಸಂದರ್ಭದಲ್ಲಿ ಹಂಚಲಾಗುವ ಅಪಾರ ಪ್ರಮಾಣದ ಹಣ, ಇತ್ಯಾದಿ ಇತ್ಯಾದಿಗಳು (ಒಳ್ಳೆಯ ರೂಪದಲ್ಲಿ) ಇಂತಹ ಸಂದರ್ಭದಲ್ಲಿ ಏಕೆ ಸದ್ವಿನಿಯೋಗವಾಗಬಾರದು.

 

೫. ಉಳ್ಳವರು, ಕೊಡುವ ಮನಸ್ಸುಗಳುಳ್ಳವರು ಇಂದಿನಿಂದಲೇ ಮಹಾಮಾರಿ ಯುದ್ಧದ ಕರ್ಫ್ಯೂವಿಗೆ ಸಿದ್ಧರಾಗಲು ಶ್ರೀ ಸಾಮಾನ್ಯನಿಗೆ ಬದುಕು ಕಟ್ಟಿಕೊಳ್ಳಲು ಸಹಾಯ ಹಸ್ತ ಚಾಚುತ್ತೇವೆಂಬ ಭರವಸೆ ಮೂಡಿಸಬೇಕು.

     

ಈ ದಿನಕ್ಕೆ ಇವಿಷ್ಟು ಸಾಕು, ನಮ್ಮ ಸಿದ್ಧತೆ ಶ್ರೀ ಸಾಮಾನ್ಯನ ನಿತ್ಯದ ಊಟದ ಭರವಸೆಯಿಂದಲೇ ಸಾಗಬೇಕು. ಆಗ ಮಾತ್ರ ಈ ಕೊರೊನ ಹೆಮ್ಮಾರಿಯಿಂದ ತಪ್ಪಿಸಿಕೊಳ್ಳಲು ಸಾಧ್ಯ. ಇದಕ್ಕೆ ಬೇಕಾದ ಉಪಾಯಗಳು ಸೇವಾ ಮನಸ್ಸುಗಳಿಗೆ ಹೊಳೆಯಲಿ. ಕಾರ್ಯಪ್ರವೃತ್ತರಾಗಲಿ.

               

మరింత సమాచారం తెలుసుకోండి: