ಕನ್ನಡ ಚಳವಳಿ ಹೋರಾಟಗಾರ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ಇಂದು ಬೆಂಗಳೂರು ನಗರದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಅಷ್ಟಕ್ಕೂ ಅವರು ಪ್ರತಿಭಟನೆ ನಡೆಸಿದ್ದೇಕೆ? ಅಂದರೆ ಔರಾದ್ಕರ್ ವರದಿ ಇನ್ನೂ ಜಾರಿಯಾಗದ ಹಿನ್ನೆಲೆಯಲ್ಲಿ ಈ ರೀತಿ ಮಾಡಿದ್ದಾರೆ ಎನ್ನಲಾಗಿದೆ.

 

ಬೆಂಗಳೂರಿನ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಯಿತು. ಈ ಪ್ರತಿಭಟನೆಯಲ್ಲಿ ವಾಟಾಳ್ ನಾಗರಾಜ್ ಅವರು ಸರಕಾರವನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೇ ಪೊಲೀಸ್ ಇಲಾಖೆಯ ಗ್ರೂಪ್ ಡಿ ಹಾಗೂ ಗ್ರೂಪ್ ಸಿ ಸಿಬ್ಬಂದಿಗಳಿಗೆ ಬಡ್ತಿ ನೀಡುವ ವಿಚಾರವಾಗಿ ಔರಾದ್ಕರ್ ವರದಿ ಜಾರಿಗೊಳಿಸುವಂತೆ ಸರಕಾರಕ್ಕೆ ಆಗ್ರಹ ಮಾಡಿದರು.

 

ಇನ್ನು ಸರ್ಕಾರದ ಗಮನ ಸೆಳೆಯುವ ಸಲುವಾಗಿ ಅವರೂ ಸಹ ಗ್ರುಪ್ ಡಿ ನೌಕರರ ವಸ್ತ್ರ ಧರಿಸಿದ್ದರು. ಜೊತೆಗೆ ಡಿ ಗ್ರೂಪ್ ನೌಕರರ ಕೆಲಸ ಮಾಡಿದರು. ಇಲ್ಲಿಯೂ ನೌಕರರಲ್ಲೂ ಪದವೀದರರಿದ್ದು, ಆದರೆ ಡಿ ಗ್ರೂಪ್ ನೌಕರರು ಎಲ್ಲಾ ರೀತಿಯ ಕೆಲಸ ಮಾಡಲು ಸಿದ್ಧರಿದ್ದಾರೆ. ಔರಾದ್ಕರ್ ವರದಿ ಜಾರಿ ಮಾಡುವ ಮೂಲಕ ಅವರ ವೇತನವನ್ನು ಹೆಚ್ಚಿಸಬೇಕು ಜೊತೆಗೆ ಬಡ್ತಿ ನೀಡಬೇಕು ಎಂದು ಒತ್ತಾಯಿಸಿದರು.


మరింత సమాచారం తెలుసుకోండి: