ಮಾಜಿ ಸಿಎಂ ಸಿದ್ದರಾಮಯ್ಯ ಅವರು ಜಾರಕಿಹೊಳಿ ಕುಟುಂಬದ ಸತೀಶ್ ಜಾರಕಿಹೊಳಿ ಮತ್ತು ಲಖನ್ ಜಾರಕಿಹೊಳಿ ಅವರೊಂದಿಗೆ ಸಭೆ ನಡೆಸಿದ ವಿಷಯ ತಡವಾಗಿ ಬೆಳಕಿಗೆ ಬಂದಿದೆ, ಹೌದು ಈ ಹಿಂದೆಯೇ ಅಂದರೆ ಕಳೆದ ಬುಧವಾರ ಗೋಕಾಕ್‌ ಗೆ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿದ್ದರು. ಅಲ್ಲಿಯೇ ಅವರು ಸತೀಶ್ ಜಾರಕಿಹೊಳಿ ಮತ್ತು ಲಖನ್ ಜಾರಕಿಹೊಳಿ ಅವರನ್ನು ತಾವಿದ್ದ ಕಾರಿನಲ್ಲೇ ಕರೆದುಕೊಂಡು ಕೂರಿಸಿಕೊಂಡಿದ್ದಾರೆ, ನಂತರ ಕಾರಿನಲ್ಲಿಯೇ ಕೆಲ ಸಮಯ ಗುಪ್ತವಾಗಿ ಮಾತುಕತೆ ನಡೆಸಿದರು.


ಹಾಗಾದರೆ ಸಿದ್ದರಾಮಯ್ ಅವರು ಹೂಡಿದ ಸ್ಕೆಚ್ ಆದರೂ ಏನು? ಜಾರಕಿಹೊಳಿ ಬ್ರದರ್ಸ್ ಅವರಿಗೆ ಸಿದ್ದು ಹೇಳಿದ್ದೇನು ಅನ್ನೋದು ಈಗ ಎಲ್ಲರಲ್ಲೂ ಕುತೂಹಲ ಹುಟ್ಟಿಸಿದೆ. ರಮೇಶ್ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ಅವರಿಗೆ ಬ್ರೇಕ್ ಹಾಕಲು ಸಿದ್ದು ಪ್ರಯತ್ನ ನಡೆಸುತ್ತಿದ್ದಾರೆ ಎನ್ಬಲಾಗುತ್ತಿದೆ. ಇದೇ ಕಾರಣಕ್ಕೆ ಕಾರಿನಲ್ಲಿ ಗುಪ್ತವಾಗಿ ಈ ಸಭೆ ನಡೆಸಲಾಗಿದೆ ಎಂದು ಮಾತುಗಳು ಕೇಳಿ ಬರುತ್ತಿವೆ.


ಇನ್ನೇನು ಕೆಲವೇ ತಿಂಗಳಲ್ಲಿ ಉಪಚುನಾವನೆ ನಡೆಯುವ ಸಾದ್ಯತೆ ಇದೆ. ಹೀಗಾಗಿ ಗೋಕಾಕ್ ಕ್ಷೇತ್ರದಿಂದ ಲಖನ್ ಜಾರಕಿಹೊಳಿಯನ್ನೇ ಕಾಂಗ್ರೆಸ್‌ನಿಂದ ಸ್ಪರ್ಧೆಗೆ ನಿಲ್ಲಿಸುವ ಆಶಯ ಮಾಜಿ ಸಿಎಂ ಸಿದ್ದು ಅವರಿಗೆ ಇದೆ ಎನ್ನಲಾಗಿದೆ. ಈ ವಿಷಯದ ಬಗ್ಗೆಯೇ ಸತೀಶ್ ಜಾರಕಿಹೊಳಿ ಮತ್ತು ಲಖನ್ ಜಾರಕಿಹೊಳಿ ಅವರನ್ನು ಸಿದ್ದು ಕರೆದು ಗುಪ್ತವಾಗಿ ಮಾತುಕತೆ ಮಾಡಿದ್ದಾರೆ ಎನ್ನಲಾಗಿದೆ. 


ಇನ್ನು ಬೆಳಗಾವಿ ನೆರೆ ನೆರೆ ವೀಕ್ಷಣೆಗೆಂದು ಸಿದ್ದರಾಮಯ್ಯ ಹೋದಾಗ ಅಲ್ಲಿನ ಎಲ್ಲ ಕ್ಷೇತ್ರದಲ್ಲಿ ನೆರೆ ವೀಕ್ಷಣೆ ಮಾಡಿದ್ದಾರೆ, ಅಲ್ಲದೇ ಒಂದೇ ಪ್ರಯತ್ನದಲ್ಲಿ ಎರಡೆರಡು ಕೆಲಸಗಳನ್ನು ಅವರು ಮಾಡುತ್ತಿದ್ದಾರೆ. ಅಂದರೆ, ಸ್ಥಳೀಯ ಕಾಂಗ್ರೆಸ್ ಮುಖಂಡರನ್ನೂ ಭೇಟಿಯಾಗಿ ತಮ್ಮ ಕಾಂಗ್ರೆಸ್ ಪಕ್ಷವನ್ನು ಸಂಘಟನೆ ಮಾಡುತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.


ನಿಮಗೆಲ್ಲ ಗೊತ್ತಿರಬಹುದು ಗೋಕಾಕ್ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್‌ನಲ್ಲಿ ಸ್ಪರ್ಧಿಸಿದ್ದವರು ರಮೇಶ್ ಜಾರಕಿಹೊಳಿ. ನಂತರ ಅವರು ಅಲ್ಲಿ ಗೆಲವು ಸಾಧಿಸಿದ್ದರು. ಆದರೆ ಇದಾದ ನಂತರ ರಾಜೀನಾಮೆ ನೀಡಿದ್ದರು. ಜೊತೆಗೆ ಮೈತ್ರಿ ಸರ್ಕಾರ ಉರುಳುವಂತೆ ಮಾಡಿದ್ದರು. ಹೀಗಾಗಿ ಸಿದ್ದು ಅವರಿಗೆ ರಮೇಶ್ ಜಾರಕಕಿಹೊಳಿ ಮೇಲಿನ ಸೇಡು ತೀರಿಸಿಕಕೊಳ್ಳೋಕೆ, ಕುಟುಂಬ ಸದಸ್ಯದವರನ್ನೇ ದಾಳವಾಗಿ ಪ್ರಯೋಗಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.


మరింత సమాచారం తెలుసుకోండి: